ADVERTISEMENT

NEET 2023: ಮೇ 7ಕ್ಕೆ ನೀಟ್‌; ಮೇ 21ರಿಂದ ಸಿಯುಇಟಿ

ಪಿಟಿಐ
Published 16 ಡಿಸೆಂಬರ್ 2022, 13:02 IST
Last Updated 16 ಡಿಸೆಂಬರ್ 2022, 13:02 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ ದೇಶದಾದ್ಯಂತ ನಡೆಯುವ ‘ನೀಟ್‌– ಯುಜಿ’ ಪರೀಕ್ಷೆಯು 2023ರ ಮೇ 7ರಂದು ನಿಗದಿಯಾಗಿದೆ.

ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿನ ಪದವಿ ಕೋರ್ಸ್‌ಗಳ ಪ್ರವೇಶಕ್ಕೆ ನಡೆಯುವ ಸಾಮಾನ್ಯ ಪ್ರವೇಶ ಪರೀಕ್ಷೆ ‘ಸಿಯುಇಟಿ–ಯುಜಿ’ ಮೇ 21ರಿಂದ 31ರವರೆಗೆ ಜರುಗಲಿದೆ ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಪ್ರಕಟಿಸಿದೆ.

‘ಬಹುತೇಕ ಎಲ್ಲ ಪ್ರಮುಖ ಪರೀಕ್ಷೆಗಳ ವೇಳಾಪಟ್ಟಿಯನ್ನು ಈ ವರ್ಷ ಮುಂಚಿತವಾಗಿಯೇ ಘೋಷಿಸಲಾಗಿದೆ’ ಎಂದು ಎನ್‌ಟಿಎ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ADVERTISEMENT

ಪದವಿ ಕೋರ್ಸ್‌ಗಳ ಪ್ರವೇಶ ಪ್ರಕ್ರಿಯೆ 2023ರ ಜುಲೈ ವೇಳೆಗೆ ಪೂರ್ಣಗೊಳ್ಳಲಿದ್ದು, ಆಗಸ್ಟ್‌ 1ರಿಂದ ಹೊಸ ಶೈಕ್ಷಣಿಕ ವರ್ಷ ಆರಂಭವಾಗಲಿದೆ. ಸಿಯುಇಟಿ– ಪಿಜಿ ಪರೀಕ್ಷೆಗಳ ದಿನಾಂಕ ಮುಂದಿನ ವಾರ ಪ್ರಕಟವಾಗುವ ಸಾಧ್ಯತೆ ಇದೆ.

ಎಂಜಿನಿಯರಿಂಗ್‌ ಕೋರ್ಸ್‌ಗಳ ಪ್ರವೇಶಕ್ಕಾಗಿನ ಜೆಇಇ– ಮೇನ್‌ ಪರೀಕ್ಷೆಯು ಜನವರಿ 24ರಿಂದ 31ರವರೆಗೆ (ಗಣರಾಜ್ಯೋತ್ಸವ ದಿನ ಬಿಟ್ಟು) ನಡೆಯಲಿದೆ ಎಂದು ಎನ್‌ಟಿಎ ಗುರುವಾರವಷ್ಟೆ ಪ್ರಕಟಿಸಿದೆ. ಇದರ ಎರಡನೇ ಅವಧಿಯ ಪರೀಕ್ಷೆಯು ಏಪ್ರಿಲ್‌ನಲ್ಲಿ ಜರುಗಲಿದೆ. ಈಗಾಗಲೇ ಅರ್ಜಿಗಳ ಸ್ವೀಕಾರ ಪ್ರಕ್ರಿಯೆ ಡಿ. 15ರಿಂದ ಆರಂಭವಾಗಿದ್ದು, ಜನವರಿ 12ರವರೆಗೂ ನಡೆಯಲಿದೆ ಎಂದು ಎನ್‌ಟಿಎ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.