ADVERTISEMENT

ಒಂದೇ ಕೊಠಡಿ, ಒಬ್ಬರೇ ಶಿಕ್ಷಕ: 60 ವಿದ್ಯಾರ್ಥಿಗಳು

ಅಮರೇಶ ನಾಯಕ
Published 2 ಜುಲೈ 2019, 20:00 IST
Last Updated 2 ಜುಲೈ 2019, 20:00 IST
30 HATTI 1(A)
30 HATTI 1(A)   

ಹಟ್ಟಿ ಚಿನ್ನದ ಗಣಿ: ಪೈದೊಡ್ಡಿಕ್ಯಾಂಪ್ ಶಾಲೆಯಲ್ಲಿ 60 ವಿದ್ಯಾರ್ಥಿಗಳ ಒಂದೇ ಕೊಠಡಿ ಇದೆ. ಒಬ್ಬರೇ ಶಿಕ್ಷಕರು ಪಾಠ ಮಾಡುತ್ತಿದ್ದಾರೆ. ಶಿಕ್ಷಣ ಇಲಾಖೆಯ ದಿವ್ಯ ನಿರ್ಲಕ್ಷದಿಂದ ಗುಡ್ಡಗಾಡು ಗ್ರಾಮವಾದ ಪೈದೊಡ್ಡಿಕ್ಯಾಂಪ್ ಶಾಲೆಯು ಶಿಕ್ಷಣ ಸೌಲಭ್ಯಗಳಿಂದ ವಂಚಿತವಾಗಿದೆ.

ಪೈದೋಡ್ಡಿಕ್ಯಾಪ್ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 1ರಿಂದ 5ನೇ ತರಗತಿ ಮಕ್ಕಳಿದ್ದಾರೆ. 2009-10ನೇ ಸಾಲಿನಲ್ಲಿ ಸರ್ವ ಶಿಕ್ಷಣ ಅಭಿಯಾನ ಯೋಜನೆ ಅಡಿಯಲ್ಲಿ ಒಂದು ಕೊಠಡಿಯನ್ನು ನಿರ್ಮಾಣ ಮಾಡಲಾಗಿದೆ. 1 ರಿಂದ 5ನೇ ತರಗತಿ ಮಕ್ಕಳಿಗೆಲ್ಲ ಒಬ್ಬರೇ ಶಿಕ್ಷಕರು ಪಾಠ ಮಾಡುತ್ತಿದ್ದಾರೆ. ಇಂಗ್ಲಿಷ್, ಹಿಂದಿ, ಗಣಿತ, ವಿಜ್ಞಾನ, ವಿಷಯಗಳಿಗೆ ಶಿಕ್ಷಕರೆ ಇಲ್ಲ. ಕೊಠಡಿಗಳ ಕೊರತೆಯಿಂದ ಮಕ್ಕಳ ಕಲಿಕೆ ಅದೋಗತಿಗೀಡಾಗಿದ್ದು ಶಿಕ್ಷಣ ಇಲಾಖೆಯ ಕಾರ್ಯವೈಖರಿ ಮಕ್ಕಳ ಕಲಿಕ ಭವಿಷ್ಯವನ್ನು ನುಂಗಿ ಹಾಕಿದೆ ಎನ್ನುವುದು ಕ್ಯಾಂಪ್‌ ನಿವಾಸಿ ಆರೋಪ.

ಸಮಸ್ಯೆಗಳ ಸರಮಾಲೆ: ಶಾಲಾ ಕೊಠಡಿ ಸೇರಿದಂತೆ ಕಡಿಯುವ ನೀರು, ಶೌಚಾಲಯ ಶಿಕ್ಷಕರ ಕೊರತೆ ಸಮಸ್ಯೆಗಳು ಎದ್ದು ಕಾಣುತ್ತವೆ. ಒಂದೆ ಕೊಠಡಿಯಲ್ಲಿ ಅರವತ್ತು ಮಕ್ಕಳು ಕಲಿಯಲು ಕುಳಿತುಕೊಂಡು ಪಾಠ ಕೇಳು ಕೇಳಲು ತೋಂದರೆಯಾಗುತ್ತದೆ ಎಂದು ವಿದ್ಯಾರ್ಥಿಗಳು ಪ್ರತಿದಿನ ಪಾಲಕರಿಗೆ ಸಮಸ್ಯೆ ಹೇಳಿಕೊಳ್ಳುತ್ತಿದ್ದಾರೆ.

ADVERTISEMENT

ವಿದ್ಯಾರ್ಥಿಗಳಿಗೆ ಮದ್ಯಾಹ್ನ ಬಿಸಿಯೂಟ ತಯಾರಿಸಲು ದೂರದ ಸ್ಧಳದಿಂದ ನೀರು ತಂದುಕೊಳ್ಳಬೇಕು.ಮನೆಯಿಂದ ಶಾಲೆಗೆ ಬರುವಾಗ ಬಂದು ಬಾಟಲ್ ನೀರು ಜೊತೆಗೆ ತೆಗೆದುಕೊಂಡು ಬರಬೇಕು. ನೀರು ಮರೆತರ ಹೋದರೆ, ಬೇರೆ ವಿದ್ಯಾರ್ಥಿಗಳಲ್ಲಿ ಗೊಗರೆಯಬೇಕಾಗುತ್ತದೆ.

ಕುಡಿಯುವ ನೀರು ತೊಟ್ಟಿಗಳನ್ನು ನಿರ್ಮಿಸಲಾಗಿದೆ. ಆದರೆ ಬಂದು ದಿನವೂ ನೀರು ತುಂಬಿಲ್ಲ. ಮನೆಯಿಂದ ಬರುವಾಗ ಬಾಟಲ್ ನೀರು ತರುತ್ತೆವೆ ಎಂದು ಶಾಲಾ ಮಕ್ಕಳು ಅಳಲು ಹೇಳಿಕೊಳ್ಳುತ್ತಿದ್ದಾರೆ.

ಶಾಲಾ ಕೊಠಡಿಗಳ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಹಲವು ಸಲ ಮನವಿ ಮಾಡಿದರೂ ಇತ್ತ ಕಡೆ ಗಮನಹರಿಸುತ್ತಿಲ್ಲ ಎನ್ನುತ್ತಾರೆ ಪೈದೊಡ್ಡಿ ಕ್ರಾಸ್‌ ಶಾಲೆಯ ಮುಖ್ಯಶಿಕ್ಷಕ ಬಸವರಾಜ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.