ADVERTISEMENT

ಪ್ರಜಾವಾಣಿ ಕ್ವಿಜ್

ಎಸ್.ಎಲ್‌.ಶ್ರೀನಿವಾಸ ಮೂರ್ತಿ
Published 21 ಅಕ್ಟೋಬರ್ 2018, 19:45 IST
Last Updated 21 ಅಕ್ಟೋಬರ್ 2018, 19:45 IST
   

1. "ಚಾಂಪಿಯನ್ಆಫ್ದಅರ್ತ್' ಪ್ರಶಸ್ತಿಯನ್ನು ನರೇಂದ್ರ ಮೋದಿಯವರೊಂದಿಗೆ ಹಂಚಿಕೊಂಡವರು ಯಾರು?
ಅ) ಇಂಗ್ಲೆಂಡಿನ ರಾಣಿ ಆ) ಅಮೇರಿಕದ ಅಧ್ಯಕ್ಷ ಇ) ಫ್ರಾನ್ಸಿನ ಅಧ್ಯಕ್ಷ ಈ) ಫ್ರಾನ್ಸಿನ ಪ್ರಧಾನಿ

2. ನಮ್ಮ ತೋಳಿನಲ್ಲಿರುವ ಮೂಳೆ ಯಾವುದು?
ಅ) ರೇಡಿಯಸ್ ಆ) ಅಲ್ನಾ ಇ) ಹ್ಯೂಮರಸ್ ಈ) ಫಿಬುಲ

3. ಸಾನಂದ ಸ್ವಾಮೀಜಿಯವರಂತೆಯೇ ಗಂಗೆಯ ನೈರ್ಮಲ್ಯಕ್ಕಾಗಿ ಆತ್ಮಾರ್ಪಣೆ ಮಾಡಿಕೊಂಡ ಮತ್ತೊಬ್ಬ ಸನ್ಯಾಸಿ ಯಾರು?
ಅ) ಸ್ವಾಮಿ ಜಗತಾನಂದ ಆ) ಸ್ವಾಮಿ ನಿಗಮಬೋಧಾನಂದ ಇ) ಸ್ವಾಮಿ ಅತುಲಾನಂದ ಈ) ಸ್ವಾಮಿ ನಿಗಮಾನಂದ

ADVERTISEMENT

4. ಪೋರ್ಟ್ಆಫ್ಸ್ಪೇನ್ ಯಾವ ದೇಶದ ರಾಜಧಾನಿ?
ಅ) ಸ್ಪೇನ್ ಆ) ಬಹಮಾಸ್ ಇ) ಟ್ರಿನಿಡಾಡ್ ಈ) ಸೈಂಟ್ ಲೂಸಿಯಾ

5. ಪ್ರಸಿದ್ಧವಾದ ಬಿಂದುಮಾಧವ ದೇವಾಲಯ ಯಾವ ಊರಿನಲ್ಲಿದೆ?
ಅ) ಕಾಶಿ ಆ) ಹೃಶೀಕೇಶ ಇ) ಗಯಾ ಈ) ಬದರಿ
6. ಇವುಗಳಲ್ಲಿ ಯಾವುದು ರಾಗಿಯ ತಳಿ ಅಲ್ಲ?
ಅ) ಎಡಗು ಆ) ಐಆರ್ ೮ ಇ) ಬುಲ್ಡೆ ಈ) ಉಂಡೆ

7. ‘ಡಕೋಟ ಎಕ್ಸ್‌ಪ್ರೆಸ್’ ಚಿತ್ರದಲ್ಲಿ ನಟಿಸಿರುವ ಚಲನಚಿತ್ರ ನಿರ್ಮಾಪಕ ಯಾರು?
ಅ) ಓಂ ಪ್ರಕಾಶ್ ರಾವ್ ಆ) ದ್ವಾರಕೀಶ್ ಇ) ಶಿವರಾಂ ಈ) ರಾಕ್‌ಲೈನ್ ವೆಂಕಟೇಶ್

8. ‘ತುರುಗೋಳ್’ ಎನ್ನುವುದು ಯಾವ ಬಗೆಯ ಹೋರಾಟದ ಶಿಲ್ಪವಾಗಿದೆ ?
ಅ) ಮಹಿಳೆಯರ ಮಾನರಕ್ಷಣೆ ಆ) ದನಕರುಗಳ ರಕ್ಷಣೆ ಇ) ಮಹಾಸತಿಯ ರಕ್ಷಣೆ ಈ) ಊರಿನ ರಕ್ಷಣೆ

9. ’ಓರಿಗಮಿ’ ಎಂಬ ಕರಕುಶಲ ಕಲೆಯಲ್ಲಿ ಬಳಸುವ ಪ್ರಮುಖ ಮೂಲವಸ್ತು ಯಾವುದು?
ಅ) ಜೇಡಿಮಣ್ಣು ಆ) ಮರಳು ಇ) ಕಾಗದ ಈ) ಮರ

10. ’ಮಾಧವ ಕರುಣಾವಿಲಾಸ’ ಯಾರು ಬರೆದ ಕೃತಿ?
ಅ) ಆಲೂರು ವೆಂಕಟರಾವ್ ಆ) ರಾ.ಹ. ದೇಶಪಾಂಡೆ ಇ) ಗಳಗನಾಥ ಈ) ವೆಂಕಟಾಚಾರ್ಯ

ಹಿಂದಿನ ಸಂಚಿಕೆಯ ಸರಿ ಉತ್ತರಗಳು
1. ಮೂತ್ರಪಿಂಡ 2. ಇಂಡೊನೇಷ್ಯಾ 3. ಡಾಲರ್ 4. ಬಿ. ಎಲ್. ರೈಸ್ 5. ರಕ್ತದ ಪರಿಚಲನೆ6. ಕೀರ್ತಿನಾಥ ಕುರ್ತಕೋಟಿ 7. ರೆಪ್ಯುಟೇಷನ್ 8. 12 ವರ್ಷಗಳು 9. ಇಟಲಿ 10. ಎಂ.ಎಸ್. ಸ್ವಾಮಿನಾಥನ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.