ADVERTISEMENT

ವಿದ್ಯಾರ್ಥಿ ವೇತನ ಕೈಪಿಡಿ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2019, 19:31 IST
Last Updated 5 ಫೆಬ್ರುವರಿ 2019, 19:31 IST

ವರ್ಗ: ಆರ್ಥಿಕ ಮತ್ತು ಮೆರಿಟ್‌ ಆಧಾರಿತ

ವಿದ್ಯಾರ್ಥಿವೇತನ: ಎಚ್‌ಪಿ ಉಡಾನ್‌ ವಿದ್ಯಾರ್ಥಿ ವೇತನ 2018–19

ವಿವರ: ಆರ್ಥಿಕವಾಗಿ ಹಿಂದುಳಿದಿರುವ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕೆ ನೆರವಾಗಲು ಎಚ್‌ಪಿ ಐಎನ್‌ಸಿ. ಇಂಡಿಯಾ ಈ ವಿದ್ಯಾರ್ಥಿ ವೇತನ ನೀಡಲಿದೆ. ಮೆಟ್ರಿಕ್‌ ನಂತರ, ಪದವಿ ಹಾಗೂ ಡಿಪ್ಲೊಮಾ ಕೋರ್ಸ್‌ಗಳನ್ನು ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಗಳಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಈ ವಿದ್ಯಾರ್ಥಿ ವೇತನ ನೀಡಲಾಗುತ್ತದೆ. ಒಟ್ಟು 750 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಅದರಲ್ಲಿ ಶೇ 50ರಷ್ಟು ವಿದ್ಯಾರ್ಥಿನಿಯರಿಗೆ ಮೀಸಲು.

ADVERTISEMENT

ಅರ್ಹತೆ: 2018ರಲ್ಲಿ 10ನೇ ತರಗತಿ ಉತ್ತೀರ್ಣರಾಗಿ, ಪ್ರಸ್ತುತ ಒಂದು ವರ್ಷದ ಡಿಪ್ಲೊಮಾ/ ಐಟಿಐ ಅಥವಾ ಎರಡು ವರ್ಷದ ಎಚ್‌ಎಸ್‌ಸಿ/ ಡಿಪ್ಲೊಮಾ/ ಐಟಿಐ ಕೋರ್ಸ್‌ಗಳ ಪ್ರವೇಶ ಪಡೆದಿರಬೇಕು. 2018ರಲ್ಲಿ 12ನೇ ತರಗತಿ/ ದ್ವಿತೀಯ ಪಿ.ಯು ಪಾಸಾಗಿರುವ ವಿದ್ಯಾರ್ಥಿಗಳು ಹಾಗೂ ಪ್ರಸ್ತುತ 3 ವರ್ಷದ ಡಿಪ್ಲೊಮಾ ಅಥವಾ ಪದವಿ ಕೋರ್ಸ್‌ಗೆ ಪ್ರವೇಶ ಪಡೆದಿರಬೇಕು. ಅಭ್ಯರ್ಥಿಗಳು ಹಿಂದಿನ ಅರ್ಹತಾ ಪರೀಕ್ಷೆಯಲ್ಲಿ ಕಡ್ಡಾಯವಾಗಿ ಶೇ 60ಕ್ಕೂ ಹೆಚ್ಚು ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು. ಕುಟುಂಬದ ವಾರ್ಷಿಕ ಆದಾಯ ₹ 4 ಲಕ್ಷಕ್ಕಿಂತ ಕಡಿಮೆಯಿರಬೇಕು.

ಸೌಲಭ್ಯ ಮತ್ತು ಆರ್ಥಿಕ ನೆರವು: 11–12ನೇ ತರಗತಿ/ ಐಟಿಐ/ ಡಿಪ್ಲೊಮಾ ವಿದ್ಯಾರ್ಥಿಗಳಿಗೆ ವಾರ್ಷಿಕ ₹ 20 ಸಾವಿರ; ಮೂರು ವರ್ಷಗಳ ಪದವಿ/ ಡಿಪ್ಲೊಮಾ ವಿದ್ಯಾರ್ಥಿಗಳಿಗೆ ವಾರ್ಷಿಕ ₹ 30 ಸಾವಿರ; ಒಂದು ವರ್ಷದ ಐಟಿಐ, ಡಿಪ್ಲೊಮಾ ವಿದ್ಯಾರ್ಥಿಗಳಿಗೆ ವಾರ್ಷಿಕ ₹ 20 ಸಾವಿರ (ಒಮ್ಮೆ ಮಾತ್ರ) ನೀಡಲಾಗುತ್ತದೆ.

ಕೊನೆಯ ದಿನ: 2019ರ ಫೆಬ್ರುವರಿ 26

ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನ್‌ ಮೂಲಕ ಮಾತ್ರ

ಮಾಹಿತಿಗೆ: http://www.b4s.in/praja/HUS2

***

ವರ್ಗ: ಆರ್ಥಿಕ ಆಧಾರಿತ

ವಿದ್ಯಾರ್ಥಿ ವೇತನ: ಸಂಕಷ್ಟದಲ್ಲಿರುವ ವಿದ್ಯಾರ್ಥಿಗಳಿಗಾಗಿ ಸರಳಾ ದೇವಿ ವಿದ್ಯಾರ್ಥಿವೇತನ– 2019

ವಿವರ: ಉನ್ನತ ಶಿಕ್ಷಣ ವ್ಯಾಸಂಗಕ್ಕೆ ವಿವಿಧ ರೀತಿಯಲ್ಲಿ ವೈಯಕ್ತಿಕ ಸಮಸ್ಯೆಗಳನ್ನು ಎದುರಿಸುತ್ತಿರುವ ವಿದ್ಯಾರ್ಥಿಗಳಿಗೆ ಧರ್ಮಪಾಲ್‌ ಸತ್ಯಪಾಲ್‌ ಚಾರಿಟಬಲ್‌ ಟ್ರಸ್ಟ್‌ ಈ ವಿದ್ಯಾರ್ಥಿವೇತನ ನೀಡಲಿದೆ. ಹಣಕಾಸಿನ ತೊಂದರೆ ಅನುಭವಿಸುತ್ತಿರುವ ಕುಟುಂಬದವರ ಮಕ್ಕಳ (9ನೇ ತರಗತಿ ನಂತರ) ಶಿಕ್ಷಣಕ್ಕೆ ಆರ್ಥಿಕ ನೆರವನ್ನು ಟ್ರಸ್ಟ್‌ ಒದಗಿಸಲಿದೆ.

ಅರ್ಹತೆ: ಅನಾಥರು, ಅಂಗವಿಕಲರು, ಕ್ಯಾನ್ಸರ್‌ ಪೀಡಿತರು, ಒಂಟಿ ಪೋಷಕರು (ತಾಯಿ ಮಾತ್ರ), ದೀರ್ಘಾವಧಿ ಕಾಯಿಲೆಯಿಂದ (ಅಭ್ಯರ್ಥಿ ಅಥವಾ ಕುಟುಂಬದ ಸದಸ್ಯರು) ನರಳುತ್ತಿರುವವರು ಅರ್ಹರು. ಅವರ ವಾರ್ಷಿಕ ಆದಾಯ ₹ 4.5 ಲಕ್ಷದೊಳಗಿರಬೇಕು.

ಸೌಲಭ್ಯ ಮತ್ತು ಆರ್ಥಿಕ ನೆರವು: ನೂರು ಅಭ್ಯರ್ಥಿಗಳಿಗೆ ತಲಾ ₹ 10 ಸಾವಿರ ಆರ್ಥಿಕ ನೆರವು.

ಕೊನೆಯ ದಿನ: 2019ರ ಮಾರ್ಚ್‌ 31

ಅರ್ಜಿ ಸಲ್ಲಿಸುವ ವಿಧಾನ: ಆನ್‌ಲೈನ್‌ ಮೂಲಕ ಮಾತ್ರ

ಮಾಹಿತಿಗೆ: http://www.b4s.in/praja/SDS6

***

ವರ್ಗ: ಆರ್ಥಿಕ ಆಧಾರಿತ

ವಿದ್ಯಾರ್ಥಿ ವೇತನ: ಸಿಎಲ್‌ಪಿ ಇಂಡಿಯಾ ವಿದ್ಯಾರ್ಥಿ ವೇತನ ಕಾರ್ಯಕ್ರಮ– 2019

ವಿವರಣೆ: 10ನೇ ತರಗತಿಯಿಂದ ಸ್ನಾತಕೋತ್ತರ ಪದವಿವರೆಗೂ ಓದುತ್ತಿರುವ ವಿದ್ಯಾರ್ಥಿಗಳಿಗೆ ಹಾಗೂ ಡಿಪ್ಲೊಮಾ, ವೃತ್ತಿಪರ ಕೋರ್ಸ್‌ನ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲಾಗುತ್ತದೆ. ಅಧ್ಯಯನಕ್ಕೆ ಭಾಗಶಃ ಆರ್ಥಿಕ ನೆರವನ್ನು ಇದು ಒದಗಿಸುತ್ತದೆ. ವಿದ್ಯಾರ್ಥಿನಿಯರಿಗೆ ಆದ್ಯತೆ.

ಅರ್ಹತೆ: ಆಕಾಂಕ್ಷಿಗಳು ಕರ್ನಾಟಕ ಸೇರಿದಂತೆ ಏಳು ರಾಜ್ಯಗಳಲ್ಲಿನ ಸಿಎಲ್‌ಪಿ ಪ್ಲಾಂಟ್‌ ವ್ಯಾಪ್ತಿಯಲ್ಲಿ ಇರಬೇಕು. 10–12ನೇ ತರಗತಿ, ಪದವಿ, ಡಿಪ್ಲೊಮಾ, ವೃತ್ತಿಪರ ಕೋರ್ಸ್‌ ಹಾಗೂ ಸ್ನಾತಕೋತ್ತರ ಪದವಿ ಕೋರ್ಸ್‌ಗಳಲ್ಲಿ ವ್ಯಾಸಂಗ ಮಾಡುತ್ತಿರಬೇಕು. ಹಿಂದಿನ ವಾರ್ಷಿಕ ಪರೀಕ್ಷೆಗಳಲ್ಲಿ ಅಭ್ಯರ್ಥಿಯು ಶೇ 50ಕ್ಕೂ ಹೆಚ್ಚು ಅಂಕಗಳನ್ನು ಪಡೆದು ಉತ್ತೀರ್ಣರಾಗಿರಬೇಕು.

ಸೌಲಭ್ಯ ಮತ್ತು ಆರ್ಥಿಕ ನೆರವು: 10ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ₹ 6 ಸಾವಿರ, ಉನ್ನತ ಅಧ್ಯಯನಕ್ಕೆ
₹ 18,000, ವಿಶೇಷ ಪ್ರೋತ್ಸಾಹಧನ₹ 5,000 (ವಿದ್ಯಾರ್ಥಿನಿಯರು), 2,500 (ವಿದ್ಯಾರ್ಥಿ). ಒಟ್ಟು 850 ವಿದ್ಯಾರ್ಥಿಗಳಿಗೆ ಮಾತ್ರ ಈ ವಿದ್ಯಾರ್ಥಿ ವೇತನ ನೀಡಲಾಗುತ್ತದೆ.

ಕೊನೆಯ ದಿನ: 2019ರ ಮಾರ್ಚ್‌ 31

ಅರ್ಜಿ ಸಲ್ಲಿಸುವ ವಿಧಾನ: ಆನ್‌ಲೈನ್‌ ಮೂಲಕ ಮಾತ್ರ

ಮಾಹಿತಿಗೆ: http://www.b4s.in/praja/CIS10

(ಮಾಹಿತಿ: www.buddy4study.com)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.