ADVERTISEMENT

ವಿದ್ಯಾರ್ಥಿವೇತನ: ಸಂಶೋಧನಾ ಫೆಲೋಶಿಪ್‌ ಪ್ರೋಗ್ರಾಮ್‌ 2020

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2019, 19:30 IST
Last Updated 19 ನವೆಂಬರ್ 2019, 19:30 IST
   

ವಿದ್ಯಾರ್ಥಿವೇತನ: ಸಂಶೋಧನಾ ಫೆಲೋಶಿಪ್‌ ಪ್ರೋಗ್ರಾಮ್‌ 2020

ವಿವರ: ಬೆಂಗಳೂರಿನ ಭಾರತೀಯ ವಿಜ್ಞಾನ ಅಕಾಡೆಮಿ, ದೆಹಲಿಯ ಭಾರತೀಯ ರಾಷ್ಟ್ರೀಯ ವಿಜ್ಞಾನ ಅಕಾಡೆಮಿ, ಪ್ರಯಾಗ್‌ರಾಜ್‌ನ ರಾಷ್ಟ್ರೀಯ ವಿಜ್ಞಾನ ಅಕಾಡೆಮಿಯು ಯುಜಿಸಿ /ಎಐಸಿಟಿಇ/ ಎಂಸಿಐನಿಂದ ಮಾನ್ಯತೆ ಪಡೆದಿರುವ ಶಿಕ್ಷಣ ಸಂಸ್ಥೆಗಳಲ್ಲಿನ ವಿದ್ಯಾರ್ಥಿಗಳು ಅಥವಾ ಶಿಕ್ಷಕರಿಂದ ಈ ಫೆಲೋಶಿಪ್‌ಗೆ ಅರ್ಜಿ ಆಹ್ವಾನಿಸಿದೆ. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ ಆರ್ಥಿಕ ನೆರವಿನ ಜತೆಗೆ ಇತರ ಸೌಲಭ್ಯಗಳು ದೊರೆಯಲಿವೆ.

ಅರ್ಹತೆ: ಯುಜಿಸಿ /ಎಐಸಿಟಿಇ/ ಎಂಸಿಐನಿಂದ ಮಾನ್ಯತೆ ಪಡೆದಿರುವ ಶಿಕ್ಷಣ ಸಂಸ್ಥೆಗಳಲ್ಲಿನ ವಿದ್ಯಾರ್ಥಿಗಳು ಅಥವಾ ಶಿಕ್ಷಕರು ಮತ್ತು ಪದವಿ, ಸ್ನಾತಕೋತ್ತರ ಪದವಿ ಹಾಗೂ ಸಂಯೋಜಿತ ಕೋರ್ಸ್‌ಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಫೆಲೋಶಿಪ್‌ಗೆ ಅರ್ಜಿ ಸಲ್ಲಿಸಬಹುದು. ಅರ್ಜಿದಾರರು 10ನೇ ತರಗತಿಯಿಂದ ಸ್ನಾತಕೋತ್ತರ ಹಂತದವರೆಗೂ ಕೋರ್‌ ವಿಷಯಗಳಲ್ಲಿ
ಶೇ 65ಕ್ಕಿಂತ ಹೆಚ್ಚು ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು.

ADVERTISEMENT

ಆರ್ಥಿಕ ನೆರವು: ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ ಫೆಲೋಶಿಪ್‌ ಮತ್ತು ರೈಲು ಸಂಚಾರಕ್ಕೆ ತಗಲುವ ವೆಚ್ಚವನ್ನು ಭರಿಸಲಾಗುತ್ತದೆ.

ಅರ್ಜಿ ಸಲ್ಲಿಸಲು ಕೊನೆಯ ದಿನ: 2019ರ ನವೆಂಬರ್‌ 30

ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನ್‌ ಮೂಲಕ

ಮಾಹಿತಿ: http://www.b4s.in/praja/SRF1

ವಿದ್ಯಾರ್ಥಿವೇತನ: ಉನ್ನತ ಶಿಕ್ಷಣ ವಿದ್ಯಾರ್ಥಿಗಳಿಗೆ ಇನ್‌ಸ್ಪೈರ್‌ ವಿದ್ಯಾರ್ಥಿವೇತನ–2019

ವಿವರ: ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯವು ವಿಜ್ಞಾನ ವಿಷಯದಲ್ಲಿ ಉನ್ನತ ಶಿಕ್ಷಣ ಕೈಗೊಳ್ಳುವ ವಿದ್ಯಾರ್ಥಿಗಳಿಗೆ ಈ ವಿದ್ಯಾರ್ಥಿವೇತನ ನೀಡುತ್ತದೆ. 2019ರಲ್ಲಿ 12ನೇ ತರಗತಿಯಲ್ಲಿ ಪಾಸಾಗಿ, ಮೂರು ವರ್ಷಗಳ ಬಿ.ಎಸ್‌ಸಿ. ಅಥವಾ ನಾಲ್ಕು ವರ್ಷಗಳ ಬಿ.ಎಸ್‌. ಅಥವಾ ಐದು ವರ್ಷಗಳ ಎಂ.ಎಸ್‌ಸಿ./ಎಂ.ಎಸ್‌. ಸಂಯೋಜಿತ ಕೋರ್ಸ್‌ಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಇದನ್ನು ನೀಡಲಾಗುತ್ತದೆ.

ಅರ್ಹತೆ: ಕೇಂದ್ರ ಅಥವಾ ರಾಜ್ಯ ಪರೀಕ್ಷಾ ಮಂಡಳಿಗಳು ನಡೆಸುವ 12ನೇ ತರಗತಿ ಪರೀಕ್ಷೆಯಲ್ಲಿ ಅತ್ಯುನ್ನತ ಅಂಕಗಳನ್ನು ಪಡೆದಿರುವ, 17ರಿಂದ 22 ವರ್ಷದೊಳಗಿನ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಜಿದಾರರು ದೇಶದ ಮಾನ್ಯತೆ ಪಡೆದ ವಿ.ವಿ ಮತ್ತು ಕಾಲೇಜು ಅಥವಾ ಶಿಕ್ಷಣ ಸಂಸ್ಥೆಯಲ್ಲಿ ಮೂಲ ವಿಜ್ಞಾನ ಮತ್ತು ನೈಸರ್ಗಿಕ ವಿಜ್ಞಾನದಲ್ಲಿ ಬಿ.ಎಸ್‌ಸಿ./ಬಿ.ಎಸ್‌/ಎಂ.ಎಸ್‌ಸಿ./ಎಂ.ಎಸ್‌. ಪದವಿ ಕೋರ್ಸ್‌ಗಳಲ್ಲಿ ವ್ಯಾಸಂಗ ಮಾಡುತ್ತಿರಬೇಕು.

ಆರ್ಥಿಕ ನೆರವು: ಆಯ್ಕೆಯಾಗುವ 10 ಸಾವಿರ ವಿದ್ಯಾರ್ಥಿಗಳಿಗೆ ವಾರ್ಷಿಕ ₹ 60,000 ವಿದ್ಯಾರ್ಥಿವೇತನ ನೀಡಲಾಗುತ್ತದೆ. ಅಲ್ಲದೆ ‘ಸಮ್ಮರ್‌ಟೈಮ್‌ ಅಟ್ಯಾಚ್‌ಮೆಂಟ್‌’ ಶುಲ್ಕವಾಗಿ₹ 20,000 ದೊರೆಯುತ್ತದೆ.

ಅರ್ಜಿ ಸಲ್ಲಿಸಲು ಕೊನೆಯ ದಿನ: 2019ರ ಡಿಸೆಂಬರ್‌ 31

ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನ್‌ ಮೂಲಕ

ಮಾಹಿತಿ: http://www.b4s.in/praja/INS8

ವಿದ್ಯಾರ್ಥಿವೇತನ: ಪ್ರತಿಭಾವಂತ ವಿದ್ಯಾರ್ಥಿಗಳಿಗೆಎಸ್‌ಟಿಎಫ್‌ಸಿ ವಿದ್ಯಾರ್ಥಿವೇತನ

ವಿವರ: ಸರಕು ಸಾಗಣೆ ವಾಹನಗಳ ಚಾಲಕರ ಕುಟುಂಬಗಳ ವಿದ್ಯಾರ್ಥಿಗಳಿಗೆ ವೃತ್ತಿಪರ ಕೋರ್ಸ್‌ಗಳ ಅಧ್ಯಯನಕ್ಕೆ ಹಣಕಾಸಿನ ನೆರವು ನೀಡಲು ಶ್ರೀರಾಮ್ ಟ್ರಾನ್ಸ್‌ಪೋರ್ಟ್ ಫೈನಾನ್ಸ್ ಕಂಪನಿ ಈ ವಿದ್ಯಾರ್ಥಿವೇತನ ಆರಂಭಿಸಿದೆ. ಆಯ್ಕೆಯಾಗುವ ವಿದ್ಯಾರ್ಥಿಗಳಿಗೆ ವೃತ್ತಿಪರ ಕೋರ್ಸ್‌ಗಳ ಅಧ್ಯಯನಕ್ಕೆ ವಿದ್ಯಾರ್ಥಿವೇತನ ದೊರೆಯಲಿದೆ.

ಅರ್ಹತೆ: ವಿದ್ಯಾರ್ಥಿಗಳು ಡಿಪ್ಲೋಮಾ /ಐಟಿಐ/ ಪಾಲಿಟೆಕ್ನಿಕ್ ಅಥವಾ ಪದವಿ/ ಎಂಜಿನಿಯರಿಂಗ್ (3-4 ವರ್ಷ) ಕೋರ್ಸ್‌ಗಳಿಗೆ ದಾಖಲಾಗಿರಬೇಕು. ಅವರು 10 ಮತ್ತು 12ನೇ ತರಗತಿಯಲ್ಲಿ ಶೇ 60ಕ್ಕೂ ಹೆಚ್ಚು ಅಂಕಗಳನ್ನು ಪಡೆದು ಉತ್ತೀರ್ಣರಾಗಿರಬೇಕು. ಅರ್ಜಿದಾರರು ಕಡ್ಡಾಯವಾಗಿ ಸರಕು ಸಾಗಣೆ ವಾಹನ ಚಾಲಕರ ಕುಟುಂಬದವರಾಗಿರಬೇಕು. ಅವರ ಕುಟುಂಬದ ವಾರ್ಷಿಕ ಆದಾಯ ₹ 4 ಲಕ್ಷಕ್ಕಿಂತ ಕಡಿಮೆಯಿರಬೇಕು.

ಆರ್ಥಿಕ ನೆರವು: ಆಯ್ಕೆಯಾಗುವ ಐಟಿಐ/ ಪಾಲಿಟೆಕ್ನಿಕ್‌/ ಡಿಪ್ಲೋಮಾ ವಿದ್ಯಾರ್ಥಿಗಳಿಗೆ (ಗರಿಷ್ಠ 3 ವರ್ಷ) ಪ್ರತಿ ವರ್ಷ ₹15 ಸಾವಿರ ಹಾಗೂ ಪದವಿ/ ಎಂಜಿನಿಯರಿಂಗ್‌ ವಿದ್ಯಾರ್ಥಿಗಳಿಗೆ (ಗರಿಷ್ಠ 4 ವರ್ಷ) ವಾರ್ಷಿಕ ₹ 35 ಸಾವಿರ ಆರ್ಥಿಕ ನೆರವು ದೊರೆಯಲಿದೆ.

ಅರ್ಜಿ ಸಲ್ಲಿಸಲು ಕೊನೆಯ ದಿನ: 2019ರ ನವೆಂಬರ್‌ 30

ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನ್‌ ಮೂಲಕ

ಮಾಹಿತಿಗೆ: http://www.b4s.in/praja/STFC1

ಕೃಪೆ: buddy4study.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.