ADVERTISEMENT

ವಿದ್ಯಾರ್ಥಿ ವೇತನ ಕೈಪಿಡಿ: ಎಂಬಿಎ ಸ್ಕಾಲರ್‌ಶಿಪ್

ಪ್ರಜಾವಾಣಿ ವಿಶೇಷ
Published 14 ಜುಲೈ 2024, 13:43 IST
Last Updated 14 ಜುಲೈ 2024, 13:43 IST
   

ಎಂಬಿಎ ಸ್ಕಾಲರ್‌ಶಿಪ್

ವಿದ್ಯಾರ್ಥಿಗಳನ್ನು ಆರ್ಥಿಕವಾಗಿ ಬೆಂಬಲಿಸಲು ಐಡಿಎಫ್‌ಸಿ ಫಸ್ಟ್ ಬ್ಯಾಂಕ್ ನೀಡುತ್ತಿರುವ ವಿದ್ಯಾರ್ಥಿ ವೇತನ.

ಆರ್ಥಿಕ ಅಡಚಣೆಗಳಿಂದಾಗಿ ಉನ್ನತ ಅಧ್ಯಯನವನ್ನು ಮುಂದುವರಿಸಲು ಸಾಧ್ಯವಾಗದಂತಹ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಿಸಿನೆಸ್ ಮ್ಯಾನೇಜ್‌ಮೆಂಟ್‌ನಲ್ಲಿ ಸ್ನಾತಕೋತ್ತರ ಅಧ್ಯಯನವು ಲಭ್ಯವಾಗುವಂತೆ ಮಾಡುವುದು ಇದರ ಉದ್ದೇಶವಾಗಿದೆ.


ಅರ್ಹತೆ: 

ADVERTISEMENT

ಆಯ್ದ ಶಿಕ್ಷಣ ಸಂಸ್ಥೆಗಳಲ್ಲಿ 2024ರ ತರಗತಿಗಾಗಿ 2-ವರ್ಷದ ಪೂರ್ಣಕಾಲಿಕ ಎಂಬಿಎ ಕೋರ್ಸ್‌ಗೆ ಮೊದಲ ವರ್ಷದಲ್ಲಿ ದಾಖಲಾಗಿರುವಂಥ ಭಾರತೀಯ ವಿದ್ಯಾರ್ಥಿಗಳು ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಬಹುದು. ಅರ್ಜಿದಾರರ ಒಟ್ಟು ವಾರ್ಷಿಕ ಕುಟುಂಬದ ಆದಾಯವು ₹ 6 ಲಕ್ಷಕ್ಕಿಂತ ಕಡಿಮೆ ಅಥವಾ ಸಮನಾಗಿರಬೇಕು. ಅರ್ಜಿದಾರರು ತಮ್ಮ ಆಧಾರ್ ಸಂಖ್ಯೆಗೆ ಸಂಪರ್ಕಗೊಳಿಸಲಾದ ಮಾನ್ಯವಾದ ಮೊಬೈಲ್ ಸಂಖ್ಯೆಯನ್ನು ಹೊಂದಿರಬೇಕು.

ಆರ್ಥಿಕ ಸಹಾಯ:  2 ವರ್ಷಗಳ ಎಂಬಿಎ ಅಧ್ಯಯನಕ್ಕಾಗಿ ₹ 2 ಲಕ್ಷ (₹ 1 ಲಕ್ಷ/ವರ್ಷ)

ಅರ್ಜಿ ಸಲ್ಲಿಸಲು ಕೊನೆ ದಿನ: 31-07-2024

ಅರ್ಜಿ ಸಲ್ಲಿಸುವ ವಿಧಾನ:  ಆನ್‌ಲೈನಲ್ಲಿ ಅರ್ಜಿ ಹಾಕಿ.

ಹೆಚ್ಚಿನ ಮಾಹಿತಿಗೆ: Short Url: www.b4s.in/praja/IFBMS5

ಮುಸ್ಕಾನ್ ಸ್ಕಾಲರ್‌ಶಿಪ್

ವಾಣಿಜ್ಯ ಚಾಲಕರು (ಎಲ್‌ಎಂವಿ/ಎಚ್‌ಎಂವಿ), ಮೆಕ್ಯಾನಿಕ್ಸ್ ಮತ್ತು ಆರ್ಥಿಕವಾಗಿ ಹಿಂದುಳಿದ ವ್ಯಕ್ತಿಗಳ ಮಕ್ಕಳಿಗೆ ಹಣಕಾಸಿನ ನೆರವು ಮತ್ತು ಮಾರ್ಗದರ್ಶನ ಬೆಂಬಲವನ್ನು ನೀಡಲು ವಾಲ್ವೊಲೀನ್ ಕಮ್ಮಿನ್ಸ್‌ನಿಂದ ಸಿಎಸ್‌ಆರ್ ಉಪಕ್ರಮವಾಗಿದೆ.

ಅರ್ಹತೆ:  ದಕ್ಷಿಣ, ಪೂರ್ವ ಮತ್ತು ಈಶಾನ್ಯ ರಾಜ್ಯಗಳ (ಅಸ್ಸಾಂ, ಮಣಿಪುರ, ನಾಗಾಲ್ಯಾಂಡ್, ಮಿಜೋರಾಂ, ತ್ರಿಪುರಾ, ಅರುಣಾಚಲ ಪ್ರದೇಶ, ಸಿಕ್ಕಿಂ, ಒಡಿಶಾ, ಬಿಹಾರ, ಪುದುಚೇರಿ, ಛತ್ತೀಸ್‌ಗಢ, ಕೇರಳ, ತೆಲಂಗಾಣ, ಆಂಧ್ರಪ್ರದೇಶ, ಜಾರ್ಖಂಡ್‌, ಕರ್ನಾಟಕ, ಮೇಘಾಲಯ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳ) ವಿದ್ಯಾರ್ಥಿಗಳಾಗಿರಬೇಕು.

9 ರಿಂದ 12ನೇ ತರಗತಿಗಳಲ್ಲಿ ಓದುತ್ತಿರುವಂತಹ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರು. ವಾಣಿಜ್ಯ ಚಾಲಕರು (ಎಲ್‌ಎಂವಿ/ಎಚ್ಎಂವಿ), ಮೆಕ್ಯಾನಿಕ್ಸ್ ಮತ್ತು ಆರ್ಥಿಕವಾಗಿ ದುರ್ಬಲ ವಿಭಾಗಕ್ಕೆ ಸೇರಿದ (ಇಡಬ್ಲ್ಯೂಎಸ್) ವರ್ಗದ ಮಕ್ಕಳಿಗೆ ವಿಶೇಷ ಆದ್ಯತೆ.

ಹಿಂದಿನ ತರಗತಿಯಲ್ಲಿ ₹ 60 ಅಥವಾ ಅದಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆದಿರಬೇಕು. ಎಲ್ಲಾ ಮೂಲಗಳಿಂದ ಕುಟುಂಬದ ಒಟ್ಟು ಆದಾಯವು ವಾರ್ಷಿಕ ₹ 8 ಲಕ್ಷವನ್ನು ಮೀರಬಾರದು.

ಆರ್ಥಿಕ ಸಹಾಯ: ₹ 12,000ದ ವರೆಗಿನ ವಿದ್ಯಾರ್ಥಿವೇತನ

ಅರ್ಜಿ ಸಲ್ಲಿಸುವ ವಿಧಾನ:  03-09-2024

ಅರ್ಜಿ ಸಲ್ಲಿಸುವ ವಿಧಾನ:  ಆನ್‌ಲೈನ್‌ನಲ್ಲಿ ಅರ್ಜಿ ಹಾಕಿ.

ಹೆಚ್ಚಿನ ಮಾಹಿತಿಗೆ:  Short Url: www.b4s.in/praja/MKSP1

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.