ADVERTISEMENT

ಶಾಹೀನ್ ಕಾಲೇಜು ವಿದ್ಯಾರ್ಥಿನಿ ಟಾಪರ್

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2019, 15:22 IST
Last Updated 15 ಏಪ್ರಿಲ್ 2019, 15:22 IST
ಬೀದರ್‌ನ ಶಾಹೀನ್ ಪದವಿಪೂರ್ವ ವಿಜ್ಞಾನ ಕಾಲೇಜಿನಲ್ಲಿ ಶಾಹೀನ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಅಬ್ದುಲ್ ಖದೀರ್ ಅವರು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ 96.5 ಅಂಕ ಗಳಿಸಿದ ವಿದ್ಯಾರ್ಥಿನಿ ನಾಜನೀನ್ ಬೇಗಂ ಅವರನ್ನು ಸೋಮವಾರ ಸನ್ಮಾನಿಸಿದರು
ಬೀದರ್‌ನ ಶಾಹೀನ್ ಪದವಿಪೂರ್ವ ವಿಜ್ಞಾನ ಕಾಲೇಜಿನಲ್ಲಿ ಶಾಹೀನ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಅಬ್ದುಲ್ ಖದೀರ್ ಅವರು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ 96.5 ಅಂಕ ಗಳಿಸಿದ ವಿದ್ಯಾರ್ಥಿನಿ ನಾಜನೀನ್ ಬೇಗಂ ಅವರನ್ನು ಸೋಮವಾರ ಸನ್ಮಾನಿಸಿದರು   

ಬೀದರ್: ಪಿಯುಸಿ ದ್ವಿತೀಯ ವರ್ಷದ ಪ್ರಸಕ್ತ ಸಾಲಿನ ಪರೀಕ್ಷೆಯಲ್ಲಿ ಇಲ್ಲಿಯ ಶಾಹೀನ್ ಪದವಿಪೂರ್ವ ವಿಜ್ಞಾನ ಕಾಲೇಜಿನ ವಿದ್ಯಾರ್ಥಿನಿ ಜಿಲ್ಲೆಗೆ ಮೊದಲ ಸ್ಥಾನ ಪಡೆದಿರುವುದು ಮೇಲ್ನೊಟಕ್ಕೆ ಕಂಡು ಬಂದಿದೆ.

ನಾಜನೀನ ಬೇಗಂ ಶೇಕಡ 96.5 ಅಂಕಗಳೊಂದಿಗೆ ಜಿಲ್ಲೆಯ ಟಾಪರ್ ಆಗಿ ಹೊರ ಹೊಮ್ಮಿದ್ದಾರೆ ಎಂದು ಶಾಹೀನ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಅಬ್ದುಲ್ ಖದೀರ್ ತಿಳಿಸಿದ್ದಾರೆ.

ಕಾಲೇಜಿನ 928 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಈ ಪೈಕಿ 133 ವಿದ್ಯಾರ್ಥಿಗಳು ಅಗ್ರಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. 604 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಪಾಸಾಗಿದ್ದಾರೆ. ಕಾಲೇಜಿಗೆ ಒಟ್ಟಾರೆ ಶೇ 88. 4 ರಷ್ಟು ಫಲಿತಾಂಶ ಬಂದಿದೆ.

ADVERTISEMENT

ಮೊಹ್ಮದ್ ಫುರ್ಕಾನ್ ಶೇ 95.3, ಪ್ರಜ್ವಲ್ ವೀರಾಪುರ ಶೇ 94.8, ಆರಜೂ ಮಾಲ್ದಾರ್ ಶೇ 94.6, ವೈಷ್ಣವಿ ಶೇ 94.6, ಸಂಕಲ್ಪ ಧುಮ್ಮನಸೂರೆ ಶೇ 94.5, ಮದಿಹಾ ಸುಲ್ತಾನಾ ಶೇ 94.5, ಪೂಜಾ ಏವತೆ ಶೇ 94.5, ಮೊಹ್ಮದ್ ಜಿಯಾವುದ್ದಿನ್ ಶೇ 94.5, ಸ್ವಾತಿ ಶೇ 94.3, ಉಮ್ರಾ ಮುಸ್ತಾಕ್ ಶೇ 94.1, ಸಮೀಹಾ ಮೆಹರೀನ್ ಶೇ 94, ಸಯಿದಾ ಸದಾಫ್ ಶೇ 94 ರಷ್ಟು ಅಂಕ ಪಡೆದಿದ್ದಾರೆ.
ಕಾಲೇಜಿನ ಆವರಣದಲ್ಲಿ ಸಂಜೆ ನಡೆದ ಸಮಾರಂಭದಲ್ಲಿ ಟಾಪರ್ ನಾಜನೀನ್ ಬೇಗಂ ಅವರನ್ನು ಅಬ್ದುಲ್ ಖದೀರ್ ಅವರು ಸನ್ಮಾನಿಸಿದರು.

ಶಾಹೀನ್ ಕಾಲೇಜು ಗುಣಮಟ್ಟದ ಶಿಕ್ಷಣಕ್ಕೆ ಹೆಸರಾಗಿದೆ. ಪ್ರತಿ ವರ್ಷ ಉತ್ತಮ ಫಲಿತಾಂಶ ಬರುತ್ತಿದೆ. ಈ ಬಾರಿ ನಾಜನೀನ್ ಬೇಗಂ ಅತ್ಯಧಿಕ ಅಂಕಗಳೊಂದಿಗೆ ಜಿಲ್ಲೆಗೆ ಮೊದಲ ಸ್ಥಾನ ಪಡೆದಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.
ಈ ಬಾರಿ ಇಬ್ಬರು ವಿದ್ಯಾರ್ಥಿಗಳು ಶೇ 95 ಕ್ಕಿಂತ ಅಧಿಕ ಅಂಕ ಪಡೆದಿದ್ದಾರೆ. ಶೇ 90 ಕ್ಕಿಂತ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳ ಸಂಖ್ಯೆ 44 ಆಗಿದೆ. ಕಾಲೇಜಿನಲ್ಲಿ ಗುಣಮಟ್ಟದ ಶಿಕ್ಷಣ ನೀಡುತ್ತಿರುವುದಕ್ಕೆ ಫಲಿತಾಂಶವೇ ಸಾಕ್ಷಿಯಾಗಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.