ADVERTISEMENT

ವಿದ್ಯಾರ್ಥಿ ವೇತನ ಕೈಪಿಡಿ: ಕ್ಯಾಡೆನ್ಸ್ ಸ್ಕಾಲರ್‌ಷಿಪ್‌

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2025, 23:30 IST
Last Updated 13 ಏಪ್ರಿಲ್ 2025, 23:30 IST
   

ಕ್ಯಾಡೆನ್ಸ್‌ ಸ್ಕಾಲರ್‌ಷಿಪ್‌

ಕ್ಯಾಡೆನ್ಸ್‌ ಸ್ಕಾಲರ್‌ಷಿಪ್‌ ಪದವಿ ಮತ್ತು ವೃತ್ತಿಪರ ಕೋರ್ಸ್‌ಗಳಲ್ಲಿ ಕಲಿಯುತ್ತಿರುವವರಿಗೆ ಆರ್ಥಿಕ ನೆರವು ನೀಡುತ್ತದೆ. 

ಅರ್ಹತೆ:  ಭಾರತೀಯ ಪ್ರಜೆಯಾಗಿರಬೇಕು. ಅರ್ಜಿದಾರರು ಕನಿಷ್ಠ ಶೇ 60ರಷ್ಟು ಅಂಕಗಳೊಂದಿಗೆ 12ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು.  ಕಡಿಮೆ ಆದಾಯ ಇರುವ ಕುಟುಂಬದಿಂದ ಬಂದಿರಬೇಕು. ಮಹಿಳೆಯರು ಮತ್ತು ಅಂಗವಿಕಲರು ಮತ್ತು ಲೈಂಗಿಕ ಅಲ್ಪಸಂಖ್ಯಾತ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು. 

ADVERTISEMENT

ಆರ್ಥಿಕ ಸಹಾಯ: ಪ್ರಮುಖ ಶೈಕ್ಷಣಿಕ ವೆಚ್ಚಗಳನ್ನು ಭರಿಸಲು ಆರ್ಥಿಕ ನೆರವು.

ಅರ್ಜಿ ಸಲ್ಲಿಸಲು ಕೊನೆ ದಿನ: 30-04-2025

ಅರ್ಜಿ ಸಲ್ಲಿಸುವ ವಿಧಾನ: ಆನ್‌ಲೈನಲ್ಲಿ ಅರ್ಜಿ ಹಾಕಿ.

ಹೆಚ್ಚಿನ ಮಾಹಿತಿಗೆ: www.b4s.in/pjvi/TCSP5

______________

ಎಸ್‌ಬಿಐಎಫ್‌ ಆಶಾ ಸ್ಕಾಲರ್‌ಷಿಪ್‌ ಪ್ರೋಗ್ರಾಂ ಫಾರ್‌ ಓವರ್‌ಸೀಸ್

ಎಸ್‌ಬಿಐ ಫೌಂಡೇಷನ್‌ನಡಿ ಬರುವ ಒಂದು ಉಪಕ್ರಮವಾಗಿದ್ದು, ಕಡಿಮೆ ಆದಾಯವಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವನ್ನು ನೀಡುವ ಗುರಿ ಹೊಂದಿದೆ. 

ಅರ್ಹತೆ: ವಿದೇಶದಲ್ಲಿ ವಿಶ್ವವಿದ್ಯಾಲಯ ಅಥವಾ ಕಾಲೇಜಿನಲ್ಲಿ ಸ್ನಾತಕೋತ್ತರ ಅಥವಾ ಅದಕ್ಕಿಂತ ಹೆಚ್ಚಿನ ಮಟ್ಟದ ಕೋರ್ಸ್‌ಗೆ ದಾಖಲಾಗಿರಬೇಕು. ಎಸ್‌ಸಿ ಮತ್ತು ಎಸ್‌ಟಿ ವರ್ಗದ ವಿದ್ಯಾರ್ಥಿಗಳಿಗೆ ಆದ್ಯತೆ. ಹಿಂದಿನ ಶೈಕ್ಷಣಿಕ ವರ್ಷದಲ್ಲಿ ಕನಿಷ್ಠ ಶೇ 75ರಷ್ಟು ಅಂಕಗಳನ್ನು ಗಳಿಸಿರಬೇಕು. ಕುಟುಂಬದ ವಾರ್ಷಿಕ ಆದಾಯ ₹6,00,000 ಇರಬೇಕು.

ಆರ್ಥಿಕ ನೆರವು: ₹  20,00,000ದವರೆಗೆ ಅಥವಾ ಕೋರ್ಸ್-ಸಂಬಂಧಿತ ಖರ್ಚುಗಳ ಶೇ 50ರಷ್ಟು  (ಯಾವುದು ಕಡಿಮೆಯೋ ಅದು).

ಅರ್ಜಿ ಸಲ್ಲಿಸಲು ಕೊನೆ ದಿನ: 30-04-2025

ಅರ್ಜಿ ಸಲ್ಲಿಸುವ ವಿಧಾನ: ಆನ್‌ಲೈನಲ್ಲಿ ಅರ್ಜಿ ಹಾಕಿ.

______________

ಯುನಿವರ್ಸಿಟಿ ಆಫ್ ಶೆಫೀಲ್ಡ್ ಇಂಟರ್‌ನ್ಯಾಷನಲ್

ಪದವಿ ಕಲಿಯುತ್ತಿರುವ ಅಂತರರಾಷ್ಟ್ರೀಯ ವಿದ್ಯಾರ್ಥಿಗಳಿಗೆ  ಯುನಿವರ್ಸಿಟಿ ಆಫ್ ಶೆಫೀಲ್ಡ್ ನೀಡುವ ಕೊಡುಗೆಯಾಗಿದೆ.

ಅರ್ಹತೆ: ಯುನಿವರ್ಸಿಟಿ ಆಫ್ ಶೆಫೀಲ್ಡ್‌ನಲ್ಲಿ ಪೂರ್ಣಾವಧಿಯ ಪದವಿ ಕೋರ್ಸ್ ಮುಂದುವರಿಸಲು ಅವಕಾಶವಿದೆ. ಅಭ್ಯರ್ಥಿಗಳು ತಮ್ಮ ಹಿಂದಿನ ಶೈಕ್ಷಣಿಕ ವರ್ಷದಲ್ಲಿ  ಶೇ 60ರಷ್ಟು ಅಥವಾ ಹೆಚ್ಚಿನ ಅಂಕಗಳನ್ನು ಪಡೆದಿರಬೇಕು. ಬೋಧನಾ ಶುಲ್ಕಗಳ ಉದ್ದೇಶಕ್ಕಾಗಿ ಅವರು ಸೆಲ್ಫ್-ಫಂಡೆಡ್ ವಿದ್ಯಾರ್ಥಿ ಎಂದು ವಿಭಾಗಿಸಲ್ಪಟ್ಟಿರಬೇಕು.

ಆರ್ಥಿಕ ಸಹಾಯ:  ಬೋಧನಾ ಶುಲ್ಕಗಳಿಗಾಗಿ  £10,000 (ಅಂದಾಜು ₹11,05,000)ವಾರ್ಷಿಕ ಧನಸಹಾಯ.

ಅರ್ಜಿ ಸಲ್ಲಿಸಲು ಕೊನೆ ದಿನ: 22-04-2025

ಅರ್ಜಿ ಸಲ್ಲಿಸುವ ವಿಧಾನ: ಆನ್‌ಲೈನಲ್ಲಿ ಅರ್ಜಿ ಹಾಕಿ.

ಹೆಚ್ಚಿನ ಮಾಹಿತಿಗೆ: www.b4s.in/praja/UGMS1

______________

ಗ್ಲೋಬಲ್ ಸ್ಕಾಲರ್‌ಷಿಪ್

ಪದವಿ ಮತ್ತು ಸ್ನಾತಕೋತ್ತರ ಪದವಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡುವುದಕ್ಕಾಗಿ ಎಐಎಸ್ ಟೆಕ್ನೋಲ್ಯಾಬ್ಸ್ (ಐಟಿ ಸಲಹಾ ಕಂಪನಿ) ಕಂಪನಿ ‘ಗ್ಲೋಬಲ್ ಸ್ಕಾಲರ್‌‌‌‌‌‌‌‌‌‌‌‌‌‌‌ಷಿಪ್ ಪ್ರೋಗ್ರಾಂ- ಎಐಎಸ್ 2023’ ಯೋಜನೆ ರೂಪಿಸಿದೆ.

ವಿಶ್ವದಾದ್ಯಂತ ಯಾವುದೇ ಕ್ಷೇತ್ರದಲ್ಲಿ ಯಾವುದೇ ವಿಷಯದಲ್ಲಿ ಉನ್ನತ ಸಾಧನೆ ಮಾಡಲು ಬಯಸುವ ಪ್ರತಿಭಾನ್ವಿತರು ಇದಕ್ಕೆ ಅರ್ಜಿ ಸಲ್ಲಿಸಬಹುದು.‌

ಅರ್ಹತೆ: ಪಿಯುಸಿ ಮುಗಿಸಿ, ಪದವಿಗೆ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಜಿದಾರರು ಆಯಾ ಕೋರ್ಸ್‌ನಲ್ಲಿ ಕನಿಷ್ಠ ಒಂದು ವರ್ಷದ ಅವಧಿಯನ್ನು ಪೂರ್ಣಗೊಳಿಸಿರಬೇಕು.

ಆರ್ಥಿಕ ನೆರವು: 2 ವರ್ಷಗಳವರೆಗೆ ವಾರ್ಷಿಕ ವಿದ್ಯಾರ್ಥಿವೇತನ.

ಅರ್ಜಿ ಸಲ್ಲಿಕೆಗೆ ಕೊನೆ ದಿನ: ಮೇ 15,2025

ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನ್

ಹೆಚ್ಚಿನ ಮಾಹಿತಿಗೆ: www.b4s.in/praja/GSPA5

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.