ADVERTISEMENT

Scholarship: ವಿದ್ಯಾರ್ಥಿ ವೇತನ- ಝೀ ಸ್ಕಾಲರ್ಸ್ ಪ್ರೋಗ್ರಾಂ‌

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2023, 0:15 IST
Last Updated 20 ಫೆಬ್ರುವರಿ 2023, 0:15 IST
   

ಝೀ ಸ್ಕಾಲರ್ಸ್ ಪ್ರೋಗ್ರಾಂ‌

ಆರ್ಥಿಕ ಕಾರಣದಿಂದಾಗಿ ಉನ್ನತ ಶಿಕ್ಷಣ ಮುಂದುವರಿಸಲು ತೊಂದರೆ ಎದುರಿಸುತ್ತಿರುವ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ನೆರವಾಗುವುದಕ್ಕಾಗಿ ಝೀಎಸ್ ಅಸೋಸಿಯೇಟ್ಸ್ ಇಂಡಿಯಾ ಪ್ರೈ. ಲಿ ‘ಝೀ ಸ್ಕಾಲರ್ಸ್‌ ಪ್ರೋಗ್ರಾಂ‘ ರೂಪಿಸಿದೆ.

ಮೊದಲ ವರ್ಷದ ಸಾಮಾನ್ಯ ಅಥವಾ ವೃತ್ತಿಪರ ಪದವಿಪೂರ್ವ ಕೋರ್ಸ್‌ಗಳನ್ನು ಕಲಿಯುತ್ತಿರುವ ವಿದ್ಯಾರ್ಥಿಗಳಿಂದ ಈ ಸ್ಕಾಲರ್ಸ್‌ ಪ್ರೋಗ್ರಾಂಗೆ ಅರ್ಜಿ ಆಹ್ವಾನಿಸಿದೆ.

ADVERTISEMENT

ಅರ್ಹತೆ: ದೆಹಲಿ, ಪುಣೆ ಅಥವಾ ಬೆಂಗಳೂರಿನಲ್ಲಿರುವ ಶಿಕ್ಷಣ ಸಂಸ್ಥೆಗಳಲ್ಲಿ ಯಾವುದೇ ಸ್ಟ್ರೀಮ್‌ನಲ್ಲಿ ಮೊದಲ ವರ್ಮಾ ಸಾಮಾನ್ಯ ಅಥವಾ ವೃತ್ತಿಪರ ಪದವಿಪೂರ್ವ ಕೋರ್ಸ್‌ಗಳನ್ನು ಓದುತ್ತಿರುವ ವಿದ್ಯಾರ್ಥಿಗಳು ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಬಹುದು. ಅರ್ಜಿದಾರರು 12 ನೇ ತರಗತಿ ಪರೀಕ್ಷೆಯಲ್ಲಿ ಕನಿಷ್ಠ ಶೇ 60 ಅಂಕಗಳನ್ನು ಗಳಿಸಿರಬೇಕು. ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯವು ಎಲ್ಲಾ ಮೂಲಗಳಿಂದ ₹ 8 ಲಕ್ಷಕ್ಕಿಂತ ಹೆಚ್ಚಿರಬಾರದು.

ಆರ್ಥಿಕ ಸಹಾಯ: 1 ವರ್ಷಕ್ಕೆ ₹ 50,000ದ ವರೆಗೆ

ಅರ್ಜಿ ಸಲ್ಲಿಸಲು ಕೊನೆಯ ದಿನ : 09-03-2023

ಅರ್ಜಿ ಸಲ್ಲಿಕೆಯ ವಿಧಾನ : ಆನ್‌ಲೈನ್‌‌

ಹೆಚ್ಚಿನ ಮಾಹಿತಿಗೆ: www.b4s.in/praja/ZSPU1

––––––––––––––

ಸಿಎಫ್‌ ಸ್ಪಾರ್ಕಲ್‌ ಇನ್‌ಕ್ಲೂಸಿವ್‌ ಸ್ಕಾಲರ್‌ಷಿಪ್‌

ಬಡ ಪ್ರತಿಭಾವಂತ ವಿದ್ಯಾರ್ಥಿನಿಯರು, ಅಂಗವಿಕಲ ವಿದ್ಯಾರ್ಥಿಗಳು ಮತ್ತು ಲಿಂಗತ್ವ ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದ ಉನ್ನತ ಶಿಕ್ಷಣ ಮುಂದುವರಿಸಲು‌ ಆರ್ಥಿಕ ನೆರವು ನೀಡುವುದಕ್ಕಾಗಿ ಸಿಎಫ್‌ ಸ್ಪಾರ್ಕಲ್‌ ಇನ್‌ಕ್ಲೂಸಿವ್‌ ಸ್ಕಾಲರ್‌ಷಿಪ್‌ ಪ್ರೋಗ್ರಾಂ ಫಾರ್‌ ಹೈಯರ್‌ ಎಜುಕೇಷನ್‌ ಎಂಬ ವಿದ್ಯಾರ್ಥಿ ವೇತನ ಕಾರ್ಯಕ್ರಮವನ್ನು ರೂಪಿಸಲಾಗಿದೆ.

ಅರ್ಹತೆ : ಪದವಿಯಲ್ಲಿ ಸ್ಟೆಮ್‌(STEM-Science, Technology, Engineering, Arts , Mathematics) ಕೋರ್ಸ್‌ಗಳನ್ನು ಓದುತ್ತಿರುವ ಮೊದಲ ವರ್ಷದ ವಿದ್ಯಾರ್ಥಿನಿಯರು, ಅಂಗವಿಕಲ ವಿದ್ಯಾರ್ಥಿಗಳು ಮತ್ತು ಲಿಂಗತ್ಪ ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಈ ಸ್ಕಾಲರ್‌ಷಿಪ್‌ಗೆ ಅರ್ಜಿ ಸಲ್ಲಿಸಲು ಅರ್ಹರು. ಹಾಗೆಯೇ, ವೃತ್ತಿಪರ ತಾಂತ್ರಿಕ ಶಿಕ್ಷಣ(ವಿಟಿಇ), ಪ್ಯಾರಾಮೆಡಿಕಲ್ ಸೈನ್ಸಸ್‌ ಮತ್ತು ಅಲೈಡ್‌ ಹೆಲ್ತ್‌ ಸೈನ್ಸ್‌ನಲ್ಲಿ ಪಿಯು ಅಥವಾ ಡಿಪ್ಲೊಮಾ ಓದುತ್ತಿರುವವರು ಅರ್ಜಿ ಸಲ್ಲಿಸಬಹುದು. ಅರ್ಜಿದಾರರು, 12ನೇ ತರಗತಿ ಪರೀಕ್ಷೆಯಲ್ಲಿ ಕನಿಷ್ಠ ಶೇ 60ರಷ್ಟು ಅಂಕಗಳನ್ನು ಪಡೆದಿರಬೇಕು. ‌

ಕಾಗ್ನಿಸಂಟ್, ಕಾಗ್ನಿಸಂಟ್ ಫೌಂಡೇಶನ್ ಮತ್ತು ಬಡ್ಡಿ ಫಾರ್‌ ಸ್ಟಡಿ ಸಂಸ್ಥೆಯ ಉದ್ಯೋಗಿಗಳ ಮಕ್ಕಳು ಈ ಸ್ಕಾಲರ್‌ಷಿಪ್‌ ಪ್ರೋಗ್ರಾಂಗೆ ಅರ್ಜಿ ಸಲ್ಲಿಸಲು ಅರ್ಹರಲ್ಲ.

ಆರ್ಥಿಕ ನೆರವು: ವಾರ್ಷಿಕ ₹75,000 ವರೆಗೆ
ಅರ್ಜಿ ಸಲ್ಲಿಸಲು ಕೊನೆಯ ದಿನ : 05-03-2023
ಅರ್ಜಿ ಸಲ್ಲಿಕೆಯ ವಿಧಾನ : ಆನ್‌ಲೈನ್‌

ಮಾಹಿತಿಗೆ: Short Url:www.b4s.in/praja/CFSI1

––––––––––
ಜೆ‍ಎನ್ ಟಾಟಾ ಎಂಡೋಮೆಂಟ್ ಲೋನ್ ಸ್ಕಾಲರ್‌ಶಿಪ್ 2023-24

ವಿದೇಶಗಳಲ್ಲಿ ಉನ್ನತ ಅಧ್ಯಯನ ಕೈಗೊಳ್ಳುವ ಆಸಕ್ತಿಯಿರುವ ಭಾರತೀಯ ವಿದ್ಯಾರ್ಥಿಗಳಿಂದ ಎಂಡೊಮೆಂಟ್‌ ಲೋನ್‌ ಸ್ಕಾಲರ್‌ಷಿಪ್‌ಗಾಗಿ(ಸಾಲಕ್ಕಾಗಿ) ಅರ್ಜಿ ಆಹ್ವಾನಿಸಿದೆ. ಲೋನ್ ಸ್ಕಾಲರ್‌ಶಿಪ್‌ಗೆ ಆಯ್ಕೆಯಾದ ವಿದ್ಯಾರ್ಥಿಗಳನ್ನು ಭಾಗಶಃ 'ಟ್ರಾವೆಲ್ ಗ್ರಾಂಟ್' ಮತ್ತು 'ಗಿಫ್ಟ್ ಅವಾರ್ಡ್'ಗೆ ಶಿಫಾರಸು ಮಾಡಬಹುದಾಗಿದ್ದು ಇದು ಅವರ ಸಾಗರೋತ್ತರ ಅಧ್ಯಯನದಲ್ಲಿನ ಅವರ ಶೈಕ್ಷಣಿಕ ಕಾರ್ಯಕ್ಷಮತೆಗೆ ಸಂಬಂಧಿಸಿದೆ.

ಅರ್ಹತೆ: ಕನಿಷ್ಠ ಯಾವುದಾದರೂ ಒಂದು ಪದವಿ ಪೂರ್ಣಗೊಳಿಸಿರಬೇಕು ಅಥವಾ ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯ/ಕಾಲೇಜು/ಸಂಸ್ಥೆಯಲ್ಲಿ ಪದವಿಯ ಅಂತಿಮ ವರ್ಷದಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳು ವಿದೇಶದಲ್ಲಿ ಸ್ನಾತಕೋತ್ತರ/ಡಾಕ್ಟರೇಟ್/ಪೋಸ್ಟ್‌ ಡಾಕ್ಟರಲ್ ಅಧ್ಯಯನಗಳನ್ನು ಮುಂದುವರಿಸಲು ಸಿದ್ಧರಿರಬೇಕು.

ಕೋರ್ಸ್‌ನ ಕನಿಷ್ಠ ಅವಧಿಯು 2 ವರ್ಷಗಳಾಗಿದ್ದು, ಲೋನ್ ಸ್ಕಾಲರ್‌‌‌ಷಿಪ್ ನೀಡುವ ವೇಳೆ, ಕೋರ್ಸ್‌ ಪೂರ್ಣಗೊಳಿಸಲು ಕನಿಷ್ಠ ಒಂದು ಪೂರ್ಣ ಶೈಕ್ಷಣಿಕ ವರ್ಷ ಬಾಕಿ ಇರುವ ವಿದ್ಯಾರ್ಥಿಗಳಿಗೆ ಮಾತ್ರ ಇದು ಅನ್ವಯಿಸುತ್ತದೆ. ಇದು ಸಾಮಾನ್ಯವಾಗಿ ಜುಲೈ ವೇಳೆಯಲ್ಲಿ ಜಾರಿಯಲ್ಲಿರುತ್ತದೆ.

ವಿದ್ಯಾರ್ಥಿಗಳು ತಮ್ಮ ಪದವಿ ಅಥವಾ ಸ್ನಾತಕೋತ್ತರ ಪದವಿಯಲ್ಲಿ ಸರಾಸರಿ ಕನಿಷ್ಠ ಶೇ 60 ಅಂಕಗಳನ್ನು ಗಳಿಸಿರಬೇಕು. ಅರ್ಜಿ ಸಲ್ಲಿಸಲು ಗರಿಷ್ಠ ವಯಸ್ಸು 45 ವರ್ಷ (ಜೂನ್ 30, 2023ಕ್ಕೆ)
ಆರ್ಥಿಕ ಸಹಾಯ: ₹ 10 ಲಕ್ಷದವರೆಗಿನ ಲೋನ್ ಸ್ಕಾಲರ್‌‌‌ಷಿಪ್.
ಅರ್ಜಿ ಸಲ್ಲಿಸಲು ಕೊನಯ ದಿನ: 07-03-2023
ಅರ್ಜಿ ಸಲ್ಲಿಕೆಯ ವಿಧಾನ : ಆನ್‌ಲೈನ್‌‌

ಮಾಹಿತಿಗೆ: www.b4s.in/praja/JNT6

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.