ADVERTISEMENT

ಗಣಿತದಲ್ಲಿ ಗರ್ದಿ ಗಮ್ಮತ್ತು

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2021, 8:46 IST
Last Updated 2 ಮಾರ್ಚ್ 2021, 8:46 IST
   

ಬದಲಾಗದ ಸಂಖ್ಯೆ

ಬೇರೆ ಬೇರೆ ನಾಲ್ಕು ಅಂಕಿಗಳುಳ್ಳ ಒಂದು ಸಂಖ್ಯೆ ಬರೆದುಕೊಳ್ಳಿ. ಆ ಅಂಕಿಗಳನ್ನು ಇಳಿಕೆ ಕ್ರಮದಲ್ಲಿ ಬರೆದ ನಂತರ ಅದೇ ಅಂಕಿಗಳನ್ನು ಏರಿಕೆಯ ಕ್ರಮದಲ್ಲಿ ಬರೆಯಿರಿ. ನಂತರ ಕಳೆಯಿರಿ. ದೊರೆತ ಉತ್ತರದ ಅಂಕಿಗಳನ್ನು ಮತ್ತೆ ಇಳಿಕೆಯ ಕ್ರಮದಲ್ಲಿ ಬರೆಯಿರಿ. ನಂತರ ಅದೇ ಅಂಕಿಗಳನ್ನು ಏರಿಕೆ ಕ್ರಮದಲ್ಲಿ ಬರೆದು ಕಳೆಯಿರಿ. ಹೀಗೆ ಕೆಲವೇ ಹಂತಗಳ ಬಳಿಕ ಉತ್ತರವಾಗಿ 6147 ಸಂಖ್ಯೆ ಲಭಿಸುವುದು. ಇದು ಬದಲಾಗದ ಒಂದು ಸ್ಥಿರ ಸಂಖ್ಯೆ ಎಂಬುದು ನಿಮಗೇ ತಿಳಿಯುತ್ತದೆ.

ಇದಕ್ಕೆ ಕಪ್ರೇಕರ್‌ ಸ್ಥಿರ ಸಂಖ್ಯೆ ಎಂದೂ ಹೆಸರು (ಗಣಿತಜ್ಞ ಡಿ.ಆರ್‌. ಕಪ್ರೇಕರ್‌ ಅವರ ಶೋಧ ಇದಾಗಿದ್ದರಿಂದ ಇದಕ್ಕೆ ಅವರ ಹೆಸರನ್ನೇ ಇಡಲಾಗಿದೆ)

ADVERTISEMENT

ಉದಾ:6972 ಸಂಖ್ಯೆಯನ್ನು ತೆಗೆದುಕೊಳ್ಳೋಣ

9762 ಇಳಿಕೆ ಕ್ರಮದಲ್ಲಿ ಬರೆದಾಗ

2679 ಅದೇ ಸಂಖ್ಯೆಯನ್ನು ಏರಿಕೆ ಕ್ರಮದಲ್ಲಿ ಬರೆದಾಗ

7083 ಕಳೆದಾಗ ಸಿಕ್ಕ ಉತ್ತರ

8730 ಮತ್ತೆ ಇಳಿಕೆ ಕ್ರಮದಲ್ಲಿ ಬರೆದಾಗ

0378 ಅದೇ ಸಂಖ್ಯೆ ಏರಿಕೆ ಕ್ರಮದಲ್ಲಿ ಬರೆದಾಗ

8352 ಕಳೆದಾಗ ಸಿಕ್ಕ ಉತ್ತರ

8532 ಮತ್ತೆ ಇಳಿಕೆ ಕ್ರಮದಲ್ಲಿ ಬರೆದಾಗ

2358 ಮತ್ತೆ ಏರಿಕೆ ಕ್ರಮದಲ್ಲಿ ಬರೆದಾಗ

6174 ಕಳೆದಾಗ ಸಿಗುವ ಸ್ಥಿರ ಸಂಖ್ಯೆ

ಹೀಗೆ ಬೇರೆ ಬೇರೆ ಸಂಖ್ಯೆ ಬರೆದುಕೊಂಡು ಆಟದ ಬಗ್ಗೆ ಖಾತ್ರಿ ಮಾಡಿಕೊಳ್ಳಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.