ADVERTISEMENT

ಅನರ್ಹಗೊಂಡರೂ ಸ್ಪರ್ಧೆಗೆ ಅಡ್ಡಿ ಇಲ್ಲ: ಜಾಧವ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2019, 20:15 IST
Last Updated 22 ಮಾರ್ಚ್ 2019, 20:15 IST
ಜಾಧವ
ಜಾಧವ   

ಕಲಬುರ್ಗಿ: ‘ಶಾಸಕ ಸ್ಥಾನಕ್ಕೆ ಸಲ್ಲಿಸಿರುವ ರಾಜೀನಾಮೆ ಅಂಗೀಕಾರವಾಗುವ ವಿಶ್ವಾಸವಿದೆ. ಒಂದೊಮ್ಮೆ ಅನರ್ಹಗೊಂಡರೂ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಯಾವುದೇ ರೀತಿಯ ಕಾನೂನು ತೊಡಕು ಎದುರಾಗದು’ ಎಂದು ಗುಲಬರ್ಗಾ ಲೋಕಸಭೆ ಕ್ಷೇತ್ರದ ಬಿಜೆಪಿ ನಿಯೋಜಿತ ಅಭ್ಯರ್ಥಿ ಡಾ.ಉಮೇಶ ಜಾಧವ ಹೇಳಿದರು.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ವಿಧಾನಸಭೆ ಅಧ್ಯಕ್ಷ ಕೆ.ಆರ್.ರಮೇಶಕುಮಾರ್ ಅವರಿಗೆ ಮಾ.4 ರಂದು ರಾಜೀನಾಮೆ ಪತ್ರ ಸಲ್ಲಿಸಿದ್ದೇನೆ. ಅವರು ಚೆನ್ನಾಗಿಯೇ ಸ್ಪಂದಿಸಿದ್ದಾರೆ. ಕಾನೂನುಬದ್ಧವಾಗಿ ತೀರ್ಪು ನೀಡುತ್ತೇನೆ ಎಂದು ಭರವಸೆ ನೀಡಿದ್ದಾರೆ. ಮಾ.25ರ ಸಂಜೆವರೆಗೆ ರಾಜೀನಾಮೆ ಅಂಗೀಕಾರವಾಗುವ ವಿಶ್ವಾಸವಿದೆ. ಈ ಬಗ್ಗೆ ಕಾನೂನು ತಜ್ಞರು ಕೂಡ ಅಭಯ ನೀಡಿದ್ದಾರೆ’ ಎಂದರು.

‘ಬಹಳಷ್ಟು ಜನ ಶಾಸಕರು ಪಕ್ಷ ಬಿಡಲು ತಯಾರಾಗಿದ್ದಾರೆ. ಅವರಿಗೆ ಸಂದೇಶ ರವಾನಿಸುವ ಉದ್ದೇಶದಿಂದ ರಾಜೀನಾಮೆ ಅಂಗೀಕಾರವನ್ನು ವಿಳಂಬ ಮಾಡಲಾಗುತ್ತಿದೆ. ನನ್ನನ್ನು ಶಾಸಕತ್ವದಿಂದ ಅನರ್ಹಗೊಳಿಸುವುದರಿಂದ ಟಿಕೆಟ್ ಸಿಗುವುದು ಕಷ್ಟ ಎಂದು ಗೊಂದಲ ಸೃಷ್ಟಿಸಲಾಯಿತು. ಒಂದು ವೇಳೆ ರಾಜೀನಾಮೆ ಅಂಗೀಕಾರ ಆಗದಿದ್ದರೂ ಲೋಕಸಭೆ ಚುನಾವಣೆಗೆಗೆ ಸ್ಪರ್ಧಿಸುವುದು ಖಚಿತ’ ಎಂದು ತಿಳಿಸಿದರು.

ADVERTISEMENT

‘ಖರ್ಗೆ ಆಸ್ತಿ ತನಿಖೆಯಾಗಲಿ’

‘ಸಂಸದ ಮಲ್ಲಿಕಾರ್ಜುನ ಖರ್ಗೆ ಅವರ ಆಸ್ತಿ ಎಷ್ಟಿದೆ, ಎಲ್ಲೆಲ್ಲಿ ಇದೆ, ಯಾರ ಹೆಸರಿನಲ್ಲಿದೆ ಎಂಬುದರ ಬಗ್ಗೆ ತನಿಖೆಯಾಗಬೇಕು’ ಎಂದು ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಒತ್ತಾಯಿಸಿದರು.

‘ತಮ್ಮ ಆಸ್ತಿಯ ನಿಖರ ಮಾಹಿತಿ ಹೊರಬರದಂತೆ ಸಾಕಷ್ಟು ತಂತ್ರಗಳನ್ನು ಮಾಡುತ್ತಿದ್ದಾರೆ. ಹೈದರಾಬಾದ್ ಕರ್ನಾಟಕ ಭಾಗದ ಅಭಿವೃದ್ಧಿಗೆ ಖರ್ಗೆ ಅವರೇ ಅಡ್ಡಿಯಾಗಿದ್ದಾರೆ. ಕೇವಲ ತಮ್ಮ ಹಾಗೂ ತಮ್ಮ ಮಗನ ಅಭಿವೃದ್ಧಿ ಮಾಡಿಕೊಂಡಿದ್ದಾರೆ’ ಎಂದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.