ADVERTISEMENT

‘ತೇಜಸ್ವಿನಿ ಅನಂತಕುಮಾರ್ ಹೆಸರು ಪ್ರಕಟಿಸದಿರಲು ವರಿಷ್ಠರೇ ಕಾರಣ’

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2019, 20:12 IST
Last Updated 21 ಮಾರ್ಚ್ 2019, 20:12 IST
ಬೆಂಗಳೂರು ದಕ್ಷಿಣ ಲೋಕಸಭಾ ಕೇತ್ರದ ಕಾರ್ಯಾಲಯ ಉದ್ಘಾಟನೆ ಕಾರ್ಯಕ್ರಮದಲ್ಲಿ ಬಿಜೆಪಿ ಸಂಭಾವ್ಯ ಅಭ್ಯರ್ಥಿ ತೇಜಸ್ವಿನಿ ಅನಂತಕುಮಾರ್ ಮಾತನಾಡಿದರು. ತಾರಾ ಅನೂರಾಧಾ, ಎಂ.ಕೃ‌ಷ್ಣಪ್ಪ, ಆರ್.ಅಶೋಕ್,  ವಿ.ಸೋಮಣ್ಣ, ಎಲ್‌. ರವಿ ಸುಬ್ರಹ್ಮಣ್ಯ ಇದ್ದರು
ಬೆಂಗಳೂರು ದಕ್ಷಿಣ ಲೋಕಸಭಾ ಕೇತ್ರದ ಕಾರ್ಯಾಲಯ ಉದ್ಘಾಟನೆ ಕಾರ್ಯಕ್ರಮದಲ್ಲಿ ಬಿಜೆಪಿ ಸಂಭಾವ್ಯ ಅಭ್ಯರ್ಥಿ ತೇಜಸ್ವಿನಿ ಅನಂತಕುಮಾರ್ ಮಾತನಾಡಿದರು. ತಾರಾ ಅನೂರಾಧಾ, ಎಂ.ಕೃ‌ಷ್ಣಪ್ಪ, ಆರ್.ಅಶೋಕ್,  ವಿ.ಸೋಮಣ್ಣ, ಎಲ್‌. ರವಿ ಸುಬ್ರಹ್ಮಣ್ಯ ಇದ್ದರು   

ಬೆಂಗಳೂರು: ‘ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ತೇಜಸ್ವಿನಿ ಅನಂತಕುಮಾರ್ ಹೆಸರನ್ನು ಪ್ರಕಟಿಸದೇ ಇರಲು ಬಿಜೆಪಿ ವರಿಷ್ಠರ ತೀರ್ಮಾನವೇ ಕಾರಣ’ ಎಂದು ಪಕ್ಷದ ಮೂಲಗಳು ಹೇಳಿವೆ.

‘ರಾಜ್ಯ ಪ್ರಮುಖರ ಸಮಿತಿಯಲ್ಲಿ ಕೂಡ ಅವರ ಸ್ಪರ್ಧೆ ಬಗ್ಗೆ ಚರ್ಚೆ ನಡೆದಿತ್ತು. ಅವರೊಬ್ಬರ ಹೆಸರನ್ನಷ್ಟೇ ಸರ್ವಾನುಮತದಿಂದ ಆಯ್ಕೆ ಮಾಡಿ ಶಿಫಾರಸು ಮಾಡಲಾಗಿತ್ತು. ಹಾಗಿದ್ದರೂ ಹೆಸರು ಪ್ರಕಟಿಸದೇ ಇರಲು ವರಿಷ್ಠರು ಕೈಗೊಂಡ ನಿರ್ಣಯದ ಹಿಂದಿನ ಮರ್ಮ ಗೊತ್ತಾಗಿಲ್ಲ’ ಎಂದು ಹಿರಿಯ ನಾಯಕರೊಬ್ಬರು ಹೇಳಿದರು.

‘ಪ್ರಧಾನಿ ಮೋದಿ ಹಾಗೂ ಪಕ್ಷದ ಅಧ್ಯಕ್ಷ ಅಮಿತ್ ಶಾ ಅವರು, ಬೆಂಗಳೂರು ದಕ್ಷಿಣದ ಆಯ್ಕೆಯನ್ನು ಸದ್ಯ ಮುಂದೂಡೋಣ ಎಂದು ಸಲಹೆ ನೀಡಿದರು. ಹೀಗಾಗಿ, ಪ್ರಕಟವಾಗದೇ ಇರಬಹುದು’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.