ADVERTISEMENT

ದೇಶದ್ರೋಹ ಕೆಲಸ ಮಾಡಿದ ಸಿಎಂ ಕುಮಾರಸ್ವಾಮಿ: ಶೆಟ್ಟರ್

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2019, 15:37 IST
Last Updated 7 ಏಪ್ರಿಲ್ 2019, 15:37 IST
ಜಗದೀಶ್‌ ಶೆಟ್ಟರ್‌
ಜಗದೀಶ್‌ ಶೆಟ್ಟರ್‌   

ಕೊಪ್ಪಳ: ಪುಲ್ವಾಮಾ ದಾಳಿ ವಿಚಾರ ಮೊದಲೇ ತಿಳಿದಿತ್ತು ಎನ್ನುವ ಮುಖ್ಯಮಂತ್ರಿ ಕುಮಾರಸ್ವಾಮಿ ಈ ವಿಚಾರವನ್ನು ಕೇಂದ್ರಕ್ಕೆ ತಿಳಿಸದೇ ದೇಶದ್ರೋಹದ ಕೆಲಸ ಮಾಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಹೇಳಿದರು.

ನಗರದ ಹುಲಿಗಿ ಗ್ರಾಮದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿಪುಲ್ವಾಮಾ ದಾಳಿ ಬಗ್ಗೆ ನಾನು ಮಾತನಾಡಿಲ್ಲ ಎಂಬ ಸಿಎಂ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿ, ಕುಮಾರಸ್ವಾಮಿ ಹಿಟ್ ಆಂಡ್‌ ರನ್ ವ್ಯಕ್ತಿ ಇದ್ದಂತೆ. ಏಕೆಂದರೆ ಮೊದಲು ಹೇಳುವುದು. ಮೈಮೇಲೆ ಬರುತ್ತಿದ್ದಂತೆಯೇ ನಾನು ಹೇಳಿಲ್ಲ ಅನ್ನುವುದು. ಈ ಹಿಂದೆಯೂ ಸಾಕಷ್ಟು ಬಾರಿ ಹೀಗೆ ಮಾತಾಡಿದ್ದಾರೆ ಎಂದರು.

ರಮೇಶ ಜಾರಕಿಹೊಳಿ ಬಿಜೆಪಿ ಪರ ಪ್ರಚಾರ ಮಾಡುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ನನಗೆ ಮಾಹಿತಿ ಇಲ್ಲ. ಸದ್ಯ ಅವರು ಕಾಂಗ್ರೆಸ್‌ನಲ್ಲಿ ಇದ್ದಾರೆಎಂದರು.

ADVERTISEMENT

ಸಿ.ಎಸ್.ಪುಟ್ಟರಾಜು-ಜಿ.ಮಾದೇಗೌಡ ನಡುವಿನ ಸಂಭಾಷಣೆ ಆಡಿಯೊ ವೈರಲ್ ವಿಚಾರವಾಗಿ ಮಾತನಾಡಿದ ಅವರು, ಐಟಿ ದಾಳಿ ಆಗಿದ್ದಾಗ, ಐಟಿ ಕಚೇರಿ ಮುಂದೆ ಸಿಎಂ ಕುಮಾರಸ್ವಾಮಿ-ಡಿ.ಕೆ.ಶಿವಕುಮಾರ ಪ್ರತಿಭಟನೆ ಮಾಡಿದರು. ಈಗ ಆಡಿಯೋ ವೈರಲ್ ಆಗಿರೋದು ನಾಚಿಕಗೇಡಿನ ಸಂಗತಿ. ಇದರಿಂದ ಹಣದ ವ್ಯವಹಾರ ಶುರುವಾಗಿದೆ. ಹಣ ಹಂಚಿಕೆ ಆರಂಭವಾಗಿದೆ. ಮತದಾರರಿಗೆ ಆಮಿಷ ವೊಡ್ಡುವುದು ಆರಂಭವಾಗಿದ್ದು, ಈ ಆಡಿಯೊ ಇದಕ್ಕೆ ಮೇಲ್ನೋಟದ ಸಾಕ್ಷಿ ಎಂದು ಹೇಳಿದರು.

ಸರ್ಕಾರ ಕಾನೂನು ಬಾಹಿರವಾಗಿ ಗುತ್ತಿಗೆದಾರರಿಗೆ ಹಣ ಪಾವತಿಸಿದೆ. ಕಾಮಗಾರಿ ಪೂರ್ಣಗೊಳ್ಳುವ ಮೊದಲು ಬಿಲ್ ನೀಡಲಾಗಿದೆ. ಇದೇ ಹಣದಿಂದ ಮೈತ್ರಿ ಸರ್ಕಾರ ಚುನಾವಣೆ ಮಾಡುತ್ತಿದೆ ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.