ADVERTISEMENT

ದೆಹಲಿಯತ್ತ ಬಿಜೆಪಿ ಕಣ್ಣು

ಪಿಟಿಐ
Published 21 ಮೇ 2019, 20:09 IST
Last Updated 21 ಮೇ 2019, 20:09 IST
   

ನವದೆಹಲಿ: ಮತಗಟ್ಟೆ ಸಮೀಕ್ಷೆ ಫಲಿತಾಂಶಗಳು ಪಕ್ಷಕ್ಕೆ ಪೂರಕವಾಗಿ ಇರುವುದರಿಂದ ಉತ್ಸುಕವಾಗಿರುವ ಬಿಜೆಪಿ, 2020ರಲ್ಲಿ ನಡೆಯಲಿರುವ ದೆಹಲಿ ವಿಧಾನಸಭೆ ಚುನಾವಣೆಗೆ ಸಿದ್ಧತೆಯನ್ನು ಆರಂಭಿಸಿದೆ.

‘ರಾಜಧಾನಿಯಲ್ಲಿ ಪಕ್ಷದ ವರ್ಚಸ್ಸು ಹೆಚ್ಚಿಸುವ ಮೂಲಕ ಚುನಾವಣೆಗೆ ಸಜ್ಜಾಗಲು ನಿರ್ಧರಿಸಲಾಗಿದೆ. ಪಕ್ಷವು ಗಟ್ಟಿ ನೆಲೆ ಹೊಂದಿರುವ ಮೂರು ನಗರಪಾಲಿಕೆ ಪ್ರದೇಶಗಳಿಗೆ ಹೆಚ್ಚು ಒತ್ತು ನೀಡುತ್ತೇವೆ’ ಎಂದು ಬಿಜೆಪಿಯ ಮುಖಂಡರೊಬ್ಬರು ಹೇಳಿದ್ದಾರೆ.

ದೆಹಲಿ ಬಿಜೆಪಿ ಅಧ್ಯಕ್ಷ ಮನೋಜ್‌ ತಿವಾರಿ ಅವರುಪಕ್ಷದ ಸದಸ್ಯರ ಜೊತೆಗೆ ಈಗಾಗಲೇ ಸಮಾಲೋಚನೆ ಆರಂಭಿಸಿದ್ದಾರೆ. ನಗರಸಭೆಗಳ ವ್ಯಾಪ್ತಿಯಲ್ಲಿ ಒಳಚರಂಡಿ ವ್ಯವಸ್ಥೆ ಹಾಗು ಕಟ್ಟಡಗಳ ಇಲಾಖೆಯಲ್ಲಿನ ಭ್ರಷ್ಟಾಚಾರದ ವಿಷಯ ಪ್ರಮುಖವಾಗಿ ಚರ್ಚೆಗೆ ಒಳಪಡಬಹುದು ಎಂದು ಅಂದಾಜಿಸಲಾಗಿದೆ.

ADVERTISEMENT

ದಕ್ಷಿಣ, ಉತ್ತರ ಮತ್ತು ಪಶ್ಚಿಮ ದೆಹಲಿ ನಗರಪಾಲಿಕೆಗಳಲ್ಲಿ ಬಿಜೆಪಿ ಆಡಳಿತದಲ್ಲಿದೆ. 2007ರಿಂದಲೂ ಸತತವಾಗಿ ಆಯ್ಕೆಯಾಗುತ್ತಿದೆ. ‘ಭ್ರಷ್ಟಾಚಾರ, ಅಸಮರ್ಪಕ ನಿರ್ವಹಣೆ ಸಂಬಂಧ ಎಎಪಿ ಮತ್ತು ಕಾಂಗ್ರೆಸ್‌ ಪಕ್ಷವು ನಿರಂತರವಾಗಿ ಬಿಜೆಪಿಯನ್ನು ತರಾಟೆಗೆ
ತೆಗೆದುಕೊಳ್ಳುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.