ADVERTISEMENT

ಎಎಪಿ ಪಟ್ಟಿಯಲ್ಲಿ ಉದಯಕುಮಾರ್‌

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2014, 19:30 IST
Last Updated 18 ಮಾರ್ಚ್ 2014, 19:30 IST

ನವದೆಹಲಿ (ಪಿಟಿಐ): ಪರಮಾಣು ಸ್ಥಾವರ ವಿರೋಧಿ ಕಾರ್ಯಕರ್ತ ಎಸ್‌.ಪಿ.­ಉದಯ­ಕುಮಾರ್‌ ಅವರು ಆಮ್‌ ಆದ್ಮಿ ಪಕ್ಷದ (ಎಎಪಿ) ಲೋಕಸಭೆ ಚುನಾವಣಾ ಅಭ್ಯರ್ಥಿಗಳ ಏಳನೇ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ಎಎಪಿ ಮಂಗಳವಾರ ಬಿಡುಗಡೆ ಮಾಡಿದ 26 ಅಭ್ಯರ್ಥಿಗಳ ಪಟ್ಟಿಯಲ್ಲಿ ಉದಯಕುಮಾರ್‌ ಹೆಸರಿದೆ. ಅವರು ಕನ್ಯಾಕುಮಾರಿ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.

ಕೇಂದ್ರಾಡಳಿತ ಪ್ರದೇಶ ಪುದುಚೇರಿ ಸೇರಿದಂತೆ 10 ರಾಜ್ಯಗಳ ಲೋಕ­ಸಭಾ ಸ್ಥಾನಗಳಿಗೆ ಎಎಪಿಯು ಮಂಗಳವಾರ ಅಭ್ಯರ್ಥಿ­ಗಳನ್ನು ಪ್ರಕಟಿಸಿದೆ.  ಎಎಪಿಯು ಇದುವರೆಗೆ 286 ಹುರಿ­ಯಾಳುಗಳನ್ನು ಕಣಕ್ಕಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.