ADVERTISEMENT

ಕೇಜ್ರಿವಾಲ್‌ಗೆ ಕಪ್ಪು ಬಾವುಟ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2014, 19:30 IST
Last Updated 22 ಮಾರ್ಚ್ 2014, 19:30 IST

ಫರೀದಾಬಾದ್‌ (ಪಿಟಿಐ): ಎಎಪಿ ಮುಖಂಡ ಅರವಿಂದ ಕೇಜ್ರಿವಾಲ್‌ ಅವರು ಶನಿವಾರ ಇಲ್ಲಿ ಚುನಾವಣಾ ಪ್ರಚಾರದ ಭಾಗವಾಗಿ ರೋಡ್‌ ಷೋ ನಡೆಸುತ್ತಿದ್ದ ವೇಳೆ ಕೆಲ ಸ್ಥಳೀಯರು ಕಪ್ಪು ಬಾವುಟ ಪ್ರದರ್ಶಿಸಿದರು.

ಫರೀದಾಬಾದ್‌ನ ಸೆಕ್ಟರ್‌ 37 ಮಾರುಕಟ್ಟೆ ಪ್ರದೇಶದಿಂದ ಕೇಜ್ರಿವಾಲ್‌ ಮತ್ತು  ಎಎಪಿ ಅಭ್ಯರ್ಥಿ ಪುರುಷೋತ್ತಮ್‌ ಡಗರ್‌ ಅವರು ರೋಡ್‌ ಷೋ ಆರಂಭಿಸಿದರು. ಫರೀದಾಬಾದ್‌ ನಗರ ಪ್ರವೇಶಿಸುತ್ತಿದ್ದಂತೆ ಕೆಲ ಸ್ಥಳೀಯರು ಕಪ್ಪು ಬಾವುಟ ಪ್ರದರ್ಶಿಸಿ ಎಎಪಿ ವಿರುದ್ಧ ಘೋಷಣೆ ಕೂಗಿದರು. ‘ನಾವು ಯಾವುದೇ ಪಕ್ಷದ ಬೆಂಬಲಿಗರಲ್ಲ’ ಎಂದು ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.