ADVERTISEMENT

ನಕ್ಸಲರ ಬೆಂಬಲ: ಆರೋಪ ನಕಾರ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2014, 19:30 IST
Last Updated 3 ಏಪ್ರಿಲ್ 2014, 19:30 IST

ನವದೆಹಲಿ (ಪಿಟಿಐ): ಬಿಹಾರ ವಿಧಾನ­ಸಭೆ ಸ್ಪೀಕರ್‌ ಉದಯ ನಾರಾಯಣ ಚೌಧರಿ ಅವರು ನಕ್ಸಲರೊಂದಿಗೆ ಒಪ್ಪಂದ ಮಾಡಿ­ಕೊಂಡು ಲೋಕಸಭೆಗೆ ಸ್ಪರ್ಧಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಆದರೆ, ಚೌಧರಿ ಇದನ್ನು ಬಲವಾಗಿ ಅಲ್ಲಗಳೆದಿದ್ದಾರೆ.

‘ಮಾರ್ಚ್‌ 30ರಂದು ದೊರೆತ ಮಾಹಿತಿ ಪ್ರಕಾರ, ಲೋಕಸಭೆ ಚುನಾವಣೆ ಅವಧಿಯಲ್ಲಿ ಸಹಕಾರ ನೀಡುವಂತೆ ಚೌಧರಿ ಅವರು ಜಮುಯಿ ವಲಯದಲ್ಲಿ ಸಕ್ರಿಯರಾಗಿರುವ ಮಾವೋವಾದಿಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ. ಬೆಂಬಲ ನೀಡುವ ಭರವಸೆಯನ್ನೂ ನಕ್ಸಲರು ಅವರಿಗೆ ನೀಡಿದ್ದಾರೆ ಎಂಬ ಮಾಹಿತಿಯಿದೆ’ ಎಂದು ಕೇಂದ್ರ ಗುಪ್ತಚರ ದಳ ಮಾರ್ಚ್‌ 31 ರಂದು ಕೇಂದ್ರ ಗೃಹ ಸಚಿವಾಲಯಕ್ಕೆ ನೀಡಿದ ವರದಿಯಲ್ಲಿ ತಿಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.