ADVERTISEMENT

ರಾಹುಲ್‌, ಪ್ರಿಯಾಂಕಾ ಮೇಲೆ ದೂರು

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2014, 19:30 IST
Last Updated 18 ಏಪ್ರಿಲ್ 2014, 19:30 IST

ಅಮೇಠಿ (ಪಿಟಿಐ): ಕಾಂಗ್ರೆಸ್‌ ಕಾರ್ಯಕರ್ತರು ತಮಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಅಮೇಠಿ ಕ್ಷೇತ್ರದ ಎಎಪಿ ಅಭ್ಯರ್ಥಿ ಕುಮಾರ್‌ ವಿಶ್ವಾಸ್‌ ಆರೋಪಿಸಿದ್ದು, ಪ್ರಿಯಾಂಕಾ ವಾಧ್ರಾ, ರಾಹುಲ್‌ ಗಾಂಧಿ ಸೇರಿದಂತೆ ಕಾಂಗ್ರೆಸ್‌ನ ಹಲವು ಕಾರ್ಯಕರ್ತರ ವಿರುದ್ಧ ಎಫ್‌ಐಆರ್‌ ದಾಖಲಿಸುವಂತೆ ಪೊಲೀಸರಿಗೆ ಮನವಿ ಮಾಡಿದ್ದಾರೆ.

‘ರಾಹುಲ್‌, ಪ್ರಿಯಾಂಕಾ, ಚಂದ್ರಕಾಂತ್‌ ದುಬೇ, ವಿನೋದ್‌ ಮಿಶ್ರಾ ಸೇರಿದಂತೆ ಇತರ ಕಾಂಗ್ರೆಸ್‌ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಿಸುವಂತೆ ನಮಗೆ ಮನವಿ ಬಂದಿದ್ದು, ಅರ್ಜಿಯನ್ನು ಪರಿಶೀಲಿಸಿದ ನಂತರ ಸೂಕ್ತ ಕ್ರಮ ಕೈಗೊಳ್ಳು­ವು­ದಾಗಿ’ ಪೊಲೀಸ್‌ ವರಿಷ್ಠಾಧಿಕಾರಿ ಹೀರಾಲಾಲ್‌ ಹೇಳಿದ್ದಾರೆ.

ಏ. 15ರಂದು ಪ್ರಿಯಾಂಕಾ ವಾಧ್ರಾ ಅವರು ಕ್ಷೇತ್ರ­ದಲ್ಲಿ ಪ್ರವಾಸ ಮಾಡಿದಾಗ ಚಿತ್ರೀಕರಿಸಲಾಗಿದ್ದ ವಿಡಿಯೊ ಸೋರಿಕೆ­ಯಾಗಿದ್ದು, ಅದರಲ್ಲಿ ಕಾಂಗ್ರೆಸ್‌ ಕಾರ್ಯಕರ್ತ ವಿನೋದ್‌ ಮಿಶ್ರಾ ಎಂಬುವವರು, ‘ವಿಶ್ವಾಸ್‌, ರಾಹುಲ್‌ ಗಾಂಧಿ ವಿರುದ್ಧ ಮಾತನಾ­ಡು­­ತ್ತಿದ್ದು, ನಾನು ಅವರಿಗೆ ಗುಂಡಿಕ್ಕು­ತ್ತೇನೆ’ ಎಂದು ಹೇಳಿದ್ದಾರೆ ಎಂದು ವಿಶ್ವಾಸ್ ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.