ನವದೆಹಲಿ (ಪಿಟಿಐ): ಕೇಂದ್ರ ಸಚಿವ ಪಿ. ಚಿದಂಬರಂ ಅವರು ಚುನಾವಣೆಯಿಂದ ಹಿಂದೆ ಸರಿದುದನ್ನು ಬಿಜೆಪಿಯು ಕಾಂಗ್ರೆಸ್ ವಿರುದ್ಧ ಟೀಕಾ ಪ್ರಹಾರ ನಡೆಸಲು ಬಳಸಿಕೊಂಡಿದೆ. ‘ಕಾಂಗ್ರೆಸ್ ಸ್ಪರ್ಧೆಗೆ ಹೆದರಿಕೊಂಡು ಓಡಿ ಹೋಗುತ್ತಿದೆ’ ಎಂಬುದನ್ನು ಇದು ತೋರಿಸುತ್ತದೆ ಎಂದು ಗೇಲಿ ಮಾಡಿದೆ.
ಚಿದಂಬರಂ, ಹಿಂದೆ ಸರಿದಿರುವುದು ಸಾಂಕೇತಿಕ ಮಾತ್ರ. ಈ ಇಡೀ ಬೆಳವಣಿಗೆ ಕಾಂಗ್ರೆಸ್‌ನ ಸದ್ಯದ ಮನಸ್ಥಿತಿಯನ್ನು ತೋರಿಸುತ್ತದೆ ಎಂದು ಬಿಜೆಪಿ ವಕ್ತಾರರಾದ ನಿರ್ಮಲಾ ಸೀತರಾಮನ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.