ADVERTISEMENT

ಶೀಘ್ರವೇ ಸಮಾಜವಾದಿ ಜನತಾದಳ ಸ್ಥಾಪನೆ: ಕೋದಂಡರಾಮಯ್ಯ

​ಪ್ರಜಾವಾಣಿ ವಾರ್ತೆ
Published 16 ಜನವರಿ 2018, 19:30 IST
Last Updated 16 ಜನವರಿ 2018, 19:30 IST

ಮೊಳಕಾಲ್ಮುರು (ಚಿತ್ರದುರ್ಗ ಜಿಲ್ಲೆ): ಬಿಜೆಪಿಗೆ ಪರ್ಯಾಯವಾಗಿ ಹೋರಾಡಲು ರಾಷ್ಟ್ರಮಟ್ಟದಲ್ಲಿ ಶೀಘ್ರವೇ ಸಮಾನಮನಸ್ಕ ಪಕ್ಷಗಳ ಸಹಕಾರದೊಂದಿಗೆ ಹೊಸ ಪಕ್ಷ ಸ್ಥಾಪಿಸಲಾಗುವುದು ಎಂದು ಮಾಜಿ ಸಂಸದ ಪಿ.ಕೋದಂಡರಾಮಯ್ಯ ಹೇಳಿದರು.

‘ಬಿಹಾರದಲ್ಲಿ ನಡೆದ ರಾಜಕೀಯ ಬೆಳವಣಿಗೆ ನಂತರ ಹೊಸ ಪಕ್ಷ ಕಟ್ಟಲು ತೀರ್ಮಾನಿಸಲಾಗಿದೆ. ಇದಕ್ಕೆ ಕಾಂಗ್ರೆಸ್‌, ಬಿಎಸ್‌ಪಿ, ಸಿಪಿಐ, ಸಿಪಿಎಂ ಸೇರಿದಂತೆ 13 ಪಕ್ಷಗಳ ಬೆಂಬಲ ಕೋರಲಾಗಿದೆ. ‘ಸಮಾಜವಾದಿ ಜನತಾದಳ’, ‘ಲೋಕಕಾಂಗ್ರೆಸ್‌ ಜನತಾದಳ’, ‘ಅಪ್ನಾ ಜನತಾದಳ’ ಎಂಬ ಮೂರು ಹೆಸರುಗಳನ್ನು ಆಯ್ಕೆ ಮಾಡಿ ಚುನಾವಣಾ ಆಯೋಗಕ್ಕೆ ನೀಡಲಾಗಿದೆ. ಎರಡು–ಮೂರು ದಿನಗಳಲ್ಲಿ ಅಂತಿಮವಾಗುವ ಸಾಧ್ಯತೆ ಇದೆ‘ ಎಂದು
ಅವರು ಹೇಳಿದರು.

‘ಸಮಾಜವಾದಿ ಜನತಾದಳ’ ಹೆಸರು ಸಿಗುವ ಸಾಧ್ಯತೆ ಹೆಚ್ಚಾಗಿದೆ. ರಾಷ್ಟ್ರಮಟ್ಟದಲ್ಲಿ ಶರದ್‌ ಯಾದವ್ ಪಕ್ಷದ ನೇತೃತ್ವ ವಹಿಸಲಿದ್ದಾರೆ’ ಎಂದು ಅವರು ಮಂಗಳವಾರ ತಾಲ್ಲೂಕಿನ ಹಾನಗಲ್‌ನಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.