ADVERTISEMENT

ಆಯಾರಾಂ ಗಯಾರಾಂ...

ಪ್ರಜಾವಾಣಿ ವಿಶೇಷ
Published 10 ಮಾರ್ಚ್ 2014, 19:30 IST
Last Updated 10 ಮಾರ್ಚ್ 2014, 19:30 IST

ಪಟ್ನಾ (ಪಿಟಿಐ): ಹಲವು ವಿವಾದಗಳ ಕೇಂದ್ರಬಿಂದುವಾಗಿದ್ದ ಮಾಜಿ ಸಂಸದ ರಾಜೇಶ್‌ ರಂಜನ್‌ ಅಲಿಯಾಸ್‌ ಪಪ್ಪು ಯಾದವ್‌ ಸೋಮವಾರ ಲಾಲು ಪ್ರಸಾದ್ ನೇತೃತ್ವದ ಆರ್‌ಜೆಡಿ ಸೇರಿದ್ದು, ಪ್ರತಿಫಲವಾಗಿ ಅವರಿಗೆ ಮಾದೇಪುರ ಲೋಕಸಭಾ ಕ್ಷೇತ್ರದ ಟಿಕೆಟ್‌ ನೀಡಲಾಗಿದೆ. ಅಲ್ಲಿ ಅವರು ಜೆಡಿಯು ಮುಖ್ಯಸ್ಥ ಶರದ್‌ ಯಾದವ್‌ ಅವರನ್ನು ಎದುರಿಸಬೇಕಾಗಿದೆ.

ಯಾವತ್ತೂ ಆರ್‌ಜೆಡಿ ತೊರೆದಿಲ್ಲ. ಅಜಿತ್‌ ಸರ್ಕಾರ್‌ ಕೊಲೆ ಪ್ರಕರಣದಲ್ಲಿ 2008ರಲ್ಲಿ ವಿಶೇಷ ಸಿಬಿಐ ನ್ಯಾಯಾಲಯ ಮರಣ ದಂಡನೆ ವಿಧಿಸಿದ್ದರಿಂದಾಗಿ ಕೆಲವು ವರ್ಷ ರಾಜಕೀಯದಿಂದ ದೂರವಿದ್ದೆ ಎಂದು ಈ ಸಂದರ್ಭದಲ್ಲಿ ಪಪ್ಪು ಯಾದವ್‌ ಹೇಳಿದರು.

ಟಿಡಿಪಿ ಸೇರಿದ ಮತ್ತಷ್ಟು ಕಾಂಗ್ರೆಸ್‌ ಶಾಸಕರು
ಹೈದರಾಬಾದ್ ವರದಿ:
ಸೀಮಾಂಧ್ರ ಭಾಗದಲ್ಲಿ ಕಾಂಗ್ರೆಸ್‌ನಿಂದ ತೆಲುಗು ದೇಶಂ ಪಾರ್ಟಿಯತ್ತ (ಟಿಡಿಪಿ) ವಲಸೆ ಮುಂದುವರಿದಿದ್ದು, ಸೋಮವಾರ ಇಬ್ಬರು ಕಾಂಗ್ರೆಸ್‌ ಶಾಸಕರು ಮತ್ತು ಒಬ್ಬ ಮಾಜಿ ಶಾಸಕ ಟಿಡಿಪಿ ಸೇರಿದ್ದಾರೆ.
ಮಾಜಿ ಸಚಿವ, ಶಾಸಕ ಶಿಲ್ಪ ಮೋಹನ್ ರೆಡ್ಡಿ, ಶಾಸಕ ಲಬ್ಬಿ ವೆಂಕಟಸ್ವಾಮಿ ಮತ್ತು ಮಾಜಿ ಶಾಸಕ ಚಲ್ಲ ರಾಮಕೃಷ್ಣ
ರೆಡ್ಡಿ ಟಿಡಿಪಿ ಸೇರಿದ ಕಾಂಗ್ರೆಸ್‌ ಮುಖಂಡರು

ಎಜಿಪಿಯ ಇಬ್ಬರು ಬಿಜೆಪಿಗೆ
ನವದೆಹಲಿ (ಪಿಟಿಐ):
ಅಸ್ಸಾಂ ಗಣ ಪರಿಷತ್‌ನ (ಎಜಿಪಿ) ಇಬ್ಬರು ಹಿರಿಯ ಮುಖಂಡರು ಸೋಮವಾರ ಬಿಜೆಪಿ ಸೇರಿದ್ದಾರೆ.

ಎಜಿಪಿ ಮಾಜಿ ಅಧ್ಯಕ್ಷ ಚಂದ್ರಮೋಹನ ಪಟವಾರಿ ಹಾಗೂ ಮಾಜಿ ಸಚಿವ ಹಿತೇಂದ್ರನಾಥ ಗೋಸ್ವಾಮಿ ಅವರು ಬಿಜೆಪಿ ಅಧ್ಯಕ್ಷ ರಾಜನಾಥ್‌ ಸಿಂಗ್‌ ಅವರ ಸಮ್ಮುಖದಲ್ಲಿ  ಬಿಜೆಪಿ ಸೇರಿದರು.

ಇನ್ನೊಂದೆಡೆ, ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯನ್ನು ಬೆಂಬಲಿಸುವುದಾಗಿ ಗೋರ್ಖಾ ಜನಮುಕ್ತಿ ಮೋರ್ಚಾ (ಜಿಜೆಎಂ) ಅಧ್ಯಕ್ಷ ಬಿಮಲ್‌ ಗುರುಂಗ್‌ ಅವರು ಘೋಷಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.