ADVERTISEMENT

ಎಐಸಿಸಿ ಸದಸ್ಯ ಕೈಸರ್‌ ಎಲ್‌ಜೆಪಿಗೆ

ಆಯಾರಾಂ ಗಯಾರಾಂ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2014, 19:30 IST
Last Updated 12 ಮಾರ್ಚ್ 2014, 19:30 IST

ಪಟ್ನಾ (ಪಿಟಿಐ): ಬಿಹಾರ ಕಾಂಗ್ರೆಸ್‌ ಘಟಕದ ಮಾಜಿ ಅಧ್ಯಕ್ಷ ಮತ್ತು ಎಐಸಿಸಿ ಸದಸ್ಯ ಚೌಧರಿ ಮೆಹಬೂಬ್‌ ಕೈಸರ್‌ ಅವರು ಬುಧವಾರ ಕಾಂಗ್ರೆಸ್‌ ತೊರೆದು ರಾಂವಿಲಾಸ್‌ ಪಾಸ್ವಾನ್‌ ನೇತೃತ್ವದ ಎಲ್‌ಜೆಪಿ ಸೇರಿದ್ದಾರೆ. ಖಗರಿಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಅವರಿಗೆ ಎಲ್‌ಜೆಪಿ ಟಿಕೆಟ್‌ ನೀಡಿದೆ.
ಜಾತ್ಯತೀತತೆ ಅಥವಾ ಕೋಮುವಾದ ಎಂಬುದು ಚುನಾವಣೆಯ ತಂತ್ರ ಎಂದು  ಕೈಸರ್‌ ಮತ್ತು ಪಾಸ್ವಾನ್‌ ಈ ಸಂದರ್ಭದಲ್ಲಿ ಹೇಳಿದರು. 
ಬಿಜೆಪಿಗೆ ಕೃಪಾಲ್‌: ಟಿಕೆಟ್‌ ಸಿಗದ ಕಾರಣ ರಾಷ್ಟ್ರೀಯ ಜನತಾ ದಳವನ್ನು (ಆರ್‌ಜೆಡಿ) ತೊರೆದಿದ್ದ ರಾಂಕೃಪಾಲ್‌ ಯಾದವ್‌ ಬುಧವಾರ ಬಿಜೆಪಿ ಸೇರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.