ADVERTISEMENT

ಎನ್‌ಡಿಎಗೆ ಟಿಆರ್‌ಎಸ್‌ ಬೆಂಬಲ ಇಲ್ಲ

​ಪ್ರಜಾವಾಣಿ ವಾರ್ತೆ
Published 15 ಮೇ 2014, 19:30 IST
Last Updated 15 ಮೇ 2014, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಹೈದರಾಬಾದ್‌ (ಪಿಟಿಐ): ಬಹುತೇಕ ಎಲ್ಲ ಮತಗಟ್ಟೆ ಸಮೀಪ ಸಮೀಕ್ಷೆಗಳೂ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಅಧಿಕಾರಕ್ಕೆ ಬರುವ ಸೂಚನೆ ನೀಡಿದ್ದರೂ, ಈ ಕೂಟಕ್ಕೆ ಬೆಂಬಲ ನೀಡುವುದಿಲ್ಲ ಎಂದು ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್‌) ಹೇಳಿದೆ.

‘ಕೇಂದ್ರದಲ್ಲಿ ಜಾತ್ಯತೀತ ಸರ್ಕಾರ ಅಸ್ತಿತ್ವದಲ್ಲಿರಬೇಕು ಎಂಬುದು ಪಕ್ಷದ ನಂಬಿಕೆ. ಆದ್ದರಿಂದ ನಾವು ಎನ್‌ಡಿಎಗೆ ಬೆಂಬಲ ನೀಡುವುದಿಲ್ಲ’ ಎಂದು ಟಿಆರ್‌ಎಸ್‌ ಮಖ್ಯಸ್ಥ ಕೆ. ಚಂದ್ರಶೇಖರ್‌ ರಾವ್‌ ಅವರ ಮಗಳು ಕೆ. ಕವಿತಾ ಹೇಳಿದ್ದಾರೆ.

‘ಭಾರತದಂತಹ ಪ್ರಜಾಪ್ರಭುತ್ವ ದೇಶದ ಕೇಂದ್ರದಲ್ಲಿ ಜಾತ್ಯತೀತ ಸರ್ಕಾರ ಅಧಿಕಾರದಲ್ಲಿರಬೇಕು ಎಂಬುದು ಪಕ್ಷದ ಆಶಯ. ಆದ್ದರಿಂದ ಯುಪಿಎ ಸರ್ಕಾರ ರಚಿಸುವ ಸಾಧ್ಯತೆಯಿದ್ದರೆ ನಾವು ಅದಕ್ಕೆ ಬೆಂಬಲ ನೀಡುತ್ತೇವೆ. ಒಂದೊಮ್ಮೆ ತೃತೀಯ ರಂಗ ಸರ್ಕಾರ ರಚಿಸುವ ಸಾಧ್ಯತೆ ಇದ್ದರೆ ಅದಕ್ಕೆ ಬೆಂಬಲ ಸೂಚಿ­ಸು­ತ್ತೇವೆ’ ಎಂದೂ ನಿಜಾಮಾ­ಬಾದ್‌ನ ಲೋಕಸಭಾ ಅಭ್ಯರ್ಥಿಯಾದ ಕವಿತಾ ಹೇಳಿದ್ದಾರೆ.

ಎನ್‌ಡಿಎಗೆ ಬೆಂಬಲ ನೀಡುವ ಸಾಧ್ಯತೆಯ ಬಗ್ಗೆ ಕೇಳಿದ ಪ್ರಶ್ನೆಗೆ ಅವರು, ‘ನಿಜವಾಗಿ ಇಲ್ಲ. ಆದರೆ ಒಂದೊಮ್ಮೆ ಎನ್‌ಡಿಎ ಅಧಿಕಾರಕ್ಕೆ ಬಂದರೆ ತೆಲಂ­ಗಾಣ­ವನ್ನು ನಿರ್ಲಕ್ಷಿಸಲಾ­ರದು ಎಂದು ಆಶಿ­­ಸು­ತ್ತೇವೆ’ ಎಂದು ಉತ್ತರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.