ADVERTISEMENT

ಶಾಂತಿ ಕದಡುವ 3 ‘ಎಕೆ’ಗಳು

ಆಂಟನಿ, ಕೇಜ್ರಿವಾಲ್‌ ವಿರುದ್ಧ ಮೋದಿ ವಾಗ್ದಾಳಿ

ಝುಲ್ಫಿಕರ್ ಮಜಿದ್
Published 26 ಮಾರ್ಚ್ 2014, 19:11 IST
Last Updated 26 ಮಾರ್ಚ್ 2014, 19:11 IST
ಜಮ್ಮು ಮತ್ತು ಕಾಶ್ಮೀರದ ಹೀರಾ ನಗರದಲ್ಲಿ ಬುಧವಾರ ನಡೆದ ಚುನಾವಣಾ ರ್‍ಯಾಲಿಯನ್ನು ಉದ್ದೇಶಿಸಿ ನರೇಂದ್ರ ಮೋದಿ ಮಾತನಾಡಿದರು 	– ಪಿಟಿಐ ಚಿತ್ರ
ಜಮ್ಮು ಮತ್ತು ಕಾಶ್ಮೀರದ ಹೀರಾ ನಗರದಲ್ಲಿ ಬುಧವಾರ ನಡೆದ ಚುನಾವಣಾ ರ್‍ಯಾಲಿಯನ್ನು ಉದ್ದೇಶಿಸಿ ನರೇಂದ್ರ ಮೋದಿ ಮಾತನಾಡಿದರು – ಪಿಟಿಐ ಚಿತ್ರ   

ಶ್ರೀನಗರ: ಕಾಶ್ಮೀರ ಮತ್ತು ಭಾರತದ ಇತರ ಪ್ರದೇಶಗಳ ಶಾಂತಿ ಕದಡಲು ಮೂರು ‘ಎಕೆ’ಗಳು ಸಾಕು. ಅವೆಂದರೆ ‘ಎಕೆ 47 ಬಂದೂಕು, ರಕ್ಷಣಾ ಸಚಿವ ಎ.ಕೆ. ಆಂಟನಿ ಮತ್ತು ಎ ಕೆ 49 (49 ದಿನ ದೆಹಲಿ ಸಿ ಎಂ ಆಗಿದ್ದ ಆಮ್‌ ಆದ್ಮಿ ಮುಖಂಡ ಅರವಿಂದ ಕೇಜ್ರಿವಾಲ್‌)’ ಎಂದು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಬುಧವಾರ ವ್ಯಂಗ್ಯವಾಡಿದರು.

ಅವರು ಭಾರತ– ಪಾಕಿಸ್ತಾನ ಗಡಿಗೆ ಹೊಂದಿ­ಕೊಂಡ ಉಧಮ್‌ಪುರ– ದೋಡಾ ಲೋಕಸಭಾ ಕ್ಷೇತ್ರದ ‘ಭಾರತ ವಿಜಯ’ ಸರಣಿ ರ್‍ಯಾಲಿಗೆ ಜಮ್ಮು ಪಟ್ಟಣದಲ್ಲಿ ಚಾಲನೆ ನೀಡಿ ಮಾತನಾಡಿ,  ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆಗೆ ಪಾಕಿಸ್ತಾನ ಕಾರಣ ಎಂದು ಆರೋಪಿಸಿದರು.

‘ಮೂರು ಎಕೆಗಳು ಪಾಕಿಸ್ತಾನದ ಶಕ್ತಿಯಾಗಿ ಪರಿವರ್ತನೆಗೊಂಡಿವೆ. ಮೊದಲನೆಯದು ಎಕೆ 47 ರೈಫಲ್‌.  ಕಾಶ್ಮೀರದಲ್ಲಿ ರಕ್ತದೋಕುಳಿ ಹರಿಸಲು ಇದು ಬಳಕೆಯಾಗುತ್ತಿದೆ. ಇನ್ನೊಬ್ಬರು ಎ.ಕೆ. ಆಂಟನಿ. ಪಾಕ್‌ ಸೇನಾ ಸಮವಸ್ತ್ರದಲ್ಲಿದ್ದ ಮಂದಿ ಬಂದು ನಮ್ಮ ಸೈನಿಕರ ಶಿರಚ್ಛೇದ ಮಾಡಿದರು ಎಂದು ಸಂಸತ್‌ನಲ್ಲಿ ಹೇಳಿಕೆ ಕೊಡುತ್ತಾರೆ. ಆದರೆ ನಮ್ಮ ಸೇನೆ ನೀಡಿದ ಸ್ಪಷ್ಟನೆ ಪ್ರಕಾರ ಶಿರಚ್ಛೇದ ಮಾಡಿದವರು ಸ್ವತಃ ಪಾಕಿಸ್ತಾನದ ಸೈನಿಕರು. ಆಂಟನಿ ಅವರ ಇಂತಹ ಹೇಳಿಕೆಯಿಂದ ಪ್ರಯೋಜನವಾಗಿದ್ದು ಯಾರಿಗೆ’ ಎಂದು ಮೋದಿ ಖಾರವಾಗಿ ಪ್ರಶ್ನಿಸಿದರು.

ದೆಹಲಿ ಮುಖ್ಯಮಂತ್ರಿಯಾಗಿ 49 ದಿನ ಮಾತ್ರ ಇದ್ದು ರಾಜೀನಾಮೆ ನೀಡಿದ ಆಮ್‌ ಆದಿ ಪಕ್ಷದ ಮುಖಂಡ  ಅರವಿಂದ್‌ ಕೇಜ್ರಿವಾಲ್‌ ಅವರ ಹೆಸರನ್ನು ನೇರವಾಗಿ ಉಲ್ಲೇಖಿಸದ ಮೋದಿ, ‘ಮೂರನೆಯದು ಎ ಕೆ 49’ ಎಂದು ಲೇವಡಿ  ಮಾಡಿದರು. ‘ಈ ಎಕೆ 49 ಹೊಸ ಪಕ್ಷವೊಂದಕ್ಕೆ ಜನ್ಮ ಕೊಟ್ಟವರು. ಇವರ ಪಕ್ಷದ ವೆಬ್‌ಸೈಟ್‌ನ ಭೂಪಟದಲ್ಲಿ ಕಾಶ್ಮೀರವನ್ನು ಪಾಕಿಸ್ತಾನದ ಪ್ರದೇಶ ಎಂದು ತೋರಿಸಿದ್ದಾರೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.