ADVERTISEMENT

‘ದೇಣಿಗೆ ಸಂಗ್ರಹಕ್ಕೆ ಮೋದಿ ಜೊತೆ ಔತಣಕೂಟ ಇಲ್ಲ’

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2014, 19:30 IST
Last Updated 15 ಮಾರ್ಚ್ 2014, 19:30 IST

ನವದೆಹಲಿ (ಐಎಎನ್‌ಎಸ್‌): ನರೇಂದ್ರ ಮೋದಿ ಜೊತೆ ಔತಣಕೂಟ ಏರ್ಪಡಿಸಿ ಹಣ ಸಂಗ್ರಹಿಸಲು ಮುಂದಾಗಿದೆ ಎಂಬ ವರದಿಯನ್ನು ಬಿಜೆಪಿ ಶನಿವಾರ ತಳ್ಳಿ ಹಾಕಿದೆ.

‘ಔತಣಕೂಟಕ್ಕೆ ಸಂಬಂಧಿಸಿ ಕೆಲ ಮಾಧ್ಯಮಗಳಲ್ಲಿ ಬಂದಿರುವ ವರದಿ ಸಂಪೂರ್ಣ ಆಧಾರರಹಿತ’ ಎಂದು ಬಿಜೆಪಿ ಮುಖಂಡ ಪ್ರಕಾಶ್‌ ಜಾವಡೇ­ಕರ್‌ ಸ್ಪಷ್ಟಪಡಿಸಿದ್ದಾರೆ.

‘ಮೋದಿ ಅವರೊಂದಿಗೆ ಚಹಾ ನಮ್ಮ ಕಾರ್ಯಕ್ರಮ. ಆದರೆ, ಔತಣಕೂಟ ನಮ್ಮ ಕಾರ್ಯಕ್ರಮವಲ್ಲ’ ಎಂದಿದ್ದಾರೆ.

‘ಮೋದಿ ಫಾರ್‌ ಪಿ.ಎಂ’ ನಿಧಿಗೆ ಹಣ ಸಂಗ್ರಹಿಸಲು ಅಶೋಕ ಹೋಟೆಲ್‌ನಲ್ಲಿ ಮೋದಿ ಜೊತೆ ಬಿಜೆಪಿ ಔತಣಕೂಟ ಏರ್ಪಡಿಸುತ್ತಿದೆ ಎಂಬ ಸುದ್ದಿ ಕೆಲ ಮಾಧ್ಯಮಗಳಲ್ಲಿ ಪ್ರಕಟವಾದುದಕ್ಕೆ ಅವರು  ಈ ಸ್ಪಷ್ಟೀಕರಣ ನೀಡಿದ್ದಾರೆ.

ಹಣ ಸಂಗ್ರಹಿಸಲು ಅಮೆರಿಕದಲ್ಲಿ ಔತಣಕೂಟ ಏರ್ಪಡಿಸುವ ಪದ್ಧತಿ ಜಾರಿಯಲ್ಲಿದೆ. ಈಚೆಗೆ ಇದನ್ನು ಆಮ್‌ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ ಕೇಜ್ರಿವಾಲ್‌ ಅವರು ಆರಂಭಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.