ADVERTISEMENT

‘ಮೋದಿಯದು ಸಂಕುಚಿತ ಬುದ್ಧಿ’

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2014, 19:30 IST
Last Updated 23 ಮಾರ್ಚ್ 2014, 19:30 IST

ಮುಂಬೈ (ಪಿಟಿಐ): ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರದು ಸಂಕುಚಿತ ಬುದ್ಧಿ ಎಂದು ಕೇಂದ್ರ ಕೃಷಿ ಸಚಿವ, ರಾಷ್ಟ್ರೀಯವಾದಿ ಕಾಂಗ್ರೆಸ್‌ ಪಕ್ಷದ (ಎನ್‌ಸಿಪಿ) ಮುಖ್ಯಸ್ಥ ಶರದ್‌ ಪವಾರ್‌ ಆರೋಪಿಸಿದ್ದಾರೆ.

‘ಕಳೆದ ವರ್ಷ ಮಹಾರಾಷ್ಟ್ರದಲ್ಲಿ ಬರ ಇದ್ದಾಗ ಗುಜರಾತ್‌ನ ಕೃಷಿಕರು 34 ತಿಂಗಳವರೆಗೆ ದನಕರುಗಳಿಗೆ ಮೇವು ಪೂರೈಸಿದರು. ಆದರೆ
ಗುಜ­ರಾತ್‌ ಸರ್ಕಾರ ಇದನ್ನು ‘ಭ್ರಷ್ಟಾಚಾರ’ ಎಂದು ಪರಿಗಣಿಸಿ ತಮ್ಮದೇ ರಾಜ್ಯ­ದವರ ಮೇಲೆ ಪ್ರಕರಣ ದಾಖಲಿಸಿತು’ ಎಂದು ಪವಾರ್‌ ದೂರಿದರು.

‘ದೇಶವನ್ನು ಮುನ್ನಡೆಸಬೇಕಾದ ವ್ಯಕ್ತಿಗೆ ಎಲ್ಲ ರಾಜ್ಯಗಳ ಹಿತಾಸಕ್ತಿಯೂ ಅಷ್ಟೇ ಪ್ರಮುಖವಾಗಬೇಕು, ಇಂತಹ ಸಂಕುಚಿತ ವ್ಯಕ್ತಿಗಳು ಹೇಗೆ ದೇಶದ ನಾಯಕತ್ವ ವಹಿಸಿಕೊಳ್ಳಬಲ್ಲರು?’ ಎಂದು ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.