ADVERTISEMENT

ಮಹಾರಾಷ್ಟ್ರ: ಕಾಂಗ್ರೆಸ್ ಅಭ್ಯರ್ಥಿ ಜಾತಿ ಪ್ರಮಾಣ ಪತ್ರ ಅಸಿಂಧು

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2024, 14:08 IST
Last Updated 29 ಮಾರ್ಚ್ 2024, 14:08 IST
<div class="paragraphs"><p>ಕಾಂಗ್ರೆಸ್</p></div>

ಕಾಂಗ್ರೆಸ್

   

ಮುಂಬೈ: ಮಹಾರಾಷ್ಟ್ರದ ವಿದರ್ಭ ಪ್ರಾಂತ್ಯದ ನಾಗಪುರ ಜಿಲ್ಲೆಯ ರಾಮ್‌ಟೆಕ್‌ ವಿಧಾನಸಭಾ ಕ್ಷೇತ್ರದ (ಎಸ್‌ಸಿ ಮೀಸಲು) ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ರಶ್ಮಿ ಬಾರ್ವೆ ಅವರ ಜಾತಿ ಪ್ರಮಾಣ ಪತ್ರ ಅಸಿಂಧುವಾಗಿದೆ. ಹೀಗಾಗಿ ‘ಡಮ್ಮಿ’ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ರಶ್ಮಿ ಅವರ ಪತಿ  ಶ್ಯಾಮರಾವ್ ಬಾರ್ವೆ ಅವರನ್ನೇ ಅಧಿಕೃತ ಅಭ್ಯರ್ಥಿಯನ್ನಾಗಿ ಕಾಂಗ್ರೆಸ್ ಘೋಷಿಸಿದೆ.

ಕಾಂಗ್ರೆಸ್ ತ್ಯಜಿಸಿ ಶಿವಸೇನಾ ಸೇರಿದ್ದ ರಾಜು ಪಾರ್ವೆ ಮತ್ತು ಪ್ರಕಾಶ್ ಅಂಬೇಡ್ಕರ್ ಅವರ ‘ವಂಚಿತ್ ಬಹುಜನ ಅಘಾಡಿ’ಯ ಅಭ್ಯರ್ಥಿ ಮಾಜಿ ಐಎಎಸ್ ಅಧಿಕಾರಿ ಕಿಶೋರ್ ಗಜ್‌ಭಿಯೆ ಕಣದಲ್ಲಿರುವ ಇನ್ನಿಬ್ಬರು ಉಮೇದುವಾರರಾಗಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.