ADVERTISEMENT

ಸಿಕ್ಕಿಂ: ಕಣದಲ್ಲಿ ಕೇವಲ 12 ಮಹಿಳೆಯರು

ಸಿಕ್ಕಿಂನಲ್ಲಿ ಒಟ್ಟು 4.66 ಲಕ್ಷ ಮತದಾರರಿದ್ದು, ಅವರ ಪೈಕಿ ಮಹಿಳಾ ಮತದಾರರ ಸಂಖ್ಯೆ 2.31 ಲಕ್ಷ ಆಗಿದೆ

ಪಿಟಿಐ
Published 5 ಏಪ್ರಿಲ್ 2024, 15:06 IST
Last Updated 5 ಏಪ್ರಿಲ್ 2024, 15:06 IST
   

ಗ್ಯಾಂಗ್ಟಕ್: ರಾಜ್ಯದ ಮತದಾರರಲ್ಲಿ ಸುಮಾರು ಅರ್ಧದಷ್ಟು ಮಹಿಳೆಯರೇ ಇದ್ದರೂ, ಸಿಕ್ಕಿಂ ವಿಧಾನಸಭೆಯ 32 ಸ್ಥಾನಗಳು ಮತ್ತು ಒಂದು ಲೋಕಸಭಾ ಕ್ಷೇತ್ರದ ಒಟ್ಟು 146 ಅಭ್ಯರ್ಥಿಗಳ ಪೈಕಿ 12 ಮಹಿಳೆಯರು ಮಾತ್ರ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. 

ಅವಧಿ ಅಂತ್ಯಗೊಳ್ಳುತ್ತಿರುವ ಹಾಲಿ ವಿಧಾನಸಭೆಯಲ್ಲಿ ಮೂವರು ಶಾಸಕಿಯರಿದ್ದಾರೆ. ಅವರೆಂದರೆ, ಫರ್ವಂತಿ ತಮಾಂಗ್, ರಾಜಕುಮಾರಿ ಥಾಪಾ ಮತ್ತು ಸುನೀತಾ ಗಜ್ಮೇರ್. ಕಳೆದ ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಯಲ್ಲಿ 15 ಮಹಿಳೆಯರು ಸ್ಪರ್ಧಿಸಿದ್ದರು.

ಆಡಳಿತಾರೂಢ ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ (ಎಸ್‌ಕೆಎಂ) ನಾಲ್ವರು ಮಹಿಳಾ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. 2019ರ ಚುನಾವಣೆಯಲ್ಲಿ ಈ ಪಕ್ಷ ಮೂವರು ಮಹಿಳೆಯರನ್ನು ಕಣಕ್ಕಿಳಿಸಿತ್ತು.      

ADVERTISEMENT

ಸಿಟಿಜನ್ ಆ್ಯಕ್ಷನ್ ಪಕ್ಷವು (ಸಿಎಪಿ–ಸಿಕ್ಕಿಂ) ನಾಲ್ವರು ಮಹಿಳಾ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಬಿಜೆಪಿ ಮತ್ತು ಕಾಂಗ್ರೆಸ್ ತಲಾ ಇಬ್ಬರು ಮಹಿಳೆಯರಿಗೆ ಟಿಕೆಟ್ ನೀಡಿವೆ.

ಪ್ರಮುಖ ವಿರೋಧ ಪಕ್ಷವಾದ ಸಿಕ್ಕಿಂ ಡೆಮಾಕ್ರಟಿಕ್ ಫ್ರಂಟ್ (ಎಸ್‌ಡಿಎಫ್‌) ಒಬ್ಬ ಮಹಿಳೆಯನ್ನೂ ಕಣಕ್ಕಿಳಿಸಿಲ್ಲ. 2019ರ ಚುನಾವಣೆಯಲ್ಲಿ ಎಸ್‌ಡಿಎಫ್ ಇಬ್ಬರು ಮಹಿಳೆಯರಿಗೆ ಟಿಕೆಟ್ ನೀಡಿತ್ತು.

ಸಿಕ್ಕಿಂನ ಏಕೈಕ ಲೋಕಸಭಾ ಕ್ಷೇತ್ರಕ್ಕಾಗಿ 14 ಅಭ್ಯರ್ಥಿಗಳು ಕಣದಲ್ಲಿದ್ದು, ಅವರ ಪೈಕಿ ಪಕ್ಷೇತರ ಅಭ್ಯರ್ಥಿಯಾಗಿರುವ ಬೀನಾ ರಾಯ್ ಒಬ್ಬರೇ ಮಹಿಳೆ. ದಿಲ್ ಕುಮಾರಿ (1991–1996) ಲೋಕಸಭೆಯಲ್ಲಿ ಸಿಕ್ಕಿಂ ಅನ್ನು ಕೊನೆಯ ಬಾರಿ ಪ್ರತಿನಿಧಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.