ADVERTISEMENT

LS POLLS | ಪಂಜಾಬ್: ಎಎಪಿ, ಬಿಜೆಪಿ ಅಭ್ಯರ್ಥಿಗಳ ಘೋಷಣೆ

ಪಿಟಿಐ
Published 16 ಏಪ್ರಿಲ್ 2024, 15:35 IST
Last Updated 16 ಏಪ್ರಿಲ್ 2024, 15:35 IST
...
...   

ಚಂಡೀಗಢ: ಲೋಕಸಭಾ ಚುನಾವಣೆಗಾಗಿ ಬಿಜೆಪಿಯು ಪಂಜಾಬ್‌ನಲ್ಲಿ ಮೂರು ಕ್ಷೇತ್ರಗಳ ಅಭ್ಯರ್ಥಿಗಳನ್ನು ಘೋಷಣೆ ಮಾಡಿದರೆ, ಎಎಪಿಯು ನಾಲ್ಕು ಲೋಕಸಭಾ ಕ್ಷೇತ್ರಗಳಿಗೆ ಪಕ್ಷದ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದೆ. 

ಹೋಷಿಯಾರ್‌ಪುರ ಮೀಸಲು ಕ್ಷೇತ್ರದಲ್ಲಿ ಕೇಂದ್ರ ಸಚಿವ ಸೋಮ್ ಪ್ರಕಾಶ್ ಬದಲಿಗೆ ಅವರ ಪತ್ನಿ ಅನಿತಾ ಅವರಿಗೆ ಟಿಕೆಟ್ ನೀಡಲಾಗಿದೆ. ಪಕ್ಷವು ಮಾಜಿ ಶಾಸಕ ಮಂಜಿತ್ ಸಿಂಗ್ ಮನ್ನಾ ಅವರನ್ನು ಖಡೂರ್ ಸಾಹಿಬ್ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸಿದೆ

ಬಠಿಂಡಾ ಲೋಕಸಭಾ ಕ್ಷೇತ್ರದಿಂದ ಮಾಜಿ ಐಎಎಸ್ ಅಧಿಕಾರಿ ಪರಮ್‌ಪಾಲ್ ಕೌರ್ ಸಿಧು ಅವರಿಗೆ ಟಿಕೆಟ್ ನೀಡಿದೆ. ಸಿಧು ಅವರು ಅಕಾಲಿ ದಳದ ಹಿರಿಯ ಮುಖಂಡ ಸಿಖಂದರ್ ಸಿಂಗ್ ಮಲುಕಾ ಅವರ ಸೊಸೆ. ಸಿಧು ಇತ್ತೀಚೆಗೆ ತನ್ನ ‍ಪತಿ ಗುರುಪ್ರೀತ್ ಅವರೊಂದಿಗೆ ಬಿಜೆಪಿ ಸೇರಿದ್ದರು.

ADVERTISEMENT

ಎಎಪಿ ಪಟ್ಟಿ ಬಿಡುಗಡೆ: ‘ಎಕ್ಸ್‌’ ವೇದಿಕೆಯಲ್ಲಿ ಅಭ್ಯರ್ಥಿಗಳ ಪಟ್ಟಿಯನ್ನು ಪೋಸ್ಟ್ ಮಾಡಿರುವ ಎಎಪಿ,  ಜಲಂಧರ್‌ನಿಂದ ದಲಿತ ಮುಖಂಡ ಪವನ್ ಕುಮಾರ್ ಟೀನು ಅವರನ್ನು ಕಣಕ್ಕಿಳಿಸಿದೆ. 

ಜಗದೀಪ್ ಸಿಂಗ್ ಬ್ರಾರ್ ಅವರನ್ನು ಫಿರೋಜ್‌ಪುರ ಕ್ಷೇತ್ರದಿಂದ, ಅಮನ್‌ಶೇರ್‌ಸಿಂಗ್ ಅವರನ್ನು ಗುರುದಾಸ್‌ಪುರ ಕ್ಷೇತ್ರದಿಂದ, ಅಶೋಕ್ ಪರಾಶರ್ ಪಪ್ಪಿ ಅವರನ್ನು ಲೂಧಿಯಾನ ಕ್ಷೇತ್ರದಿಂದ ಕಣಕ್ಕಿಳಿಸಿದೆ.

ಒಬ್ಬ ಪಕ್ಷಾಂತರಿ, ಮೂವರು ಮಾಜಿ ಶಾಸಕರನ್ನು ಕಣಕ್ಕಿಳಿಸುವುದರೊಂದಿಗೆ ಎಎಪಿಯು ಪಂಜಾಬ್‌ನ ಎಲ್ಲ 11 ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.