ADVERTISEMENT

ಕೊನೆಗೂ ಕಣಕ್ಕಿಳಿದ ಸಚಿವ ಹುಕ್ಕೇರಿ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2014, 19:30 IST
Last Updated 26 ಮಾರ್ಚ್ 2014, 19:30 IST
ಕೊನೆಗೂ ಕಣಕ್ಕಿಳಿದ ಸಚಿವ ಹುಕ್ಕೇರಿ
ಕೊನೆಗೂ ಕಣಕ್ಕಿಳಿದ ಸಚಿವ ಹುಕ್ಕೇರಿ   

ಚಿಕ್ಕೋಡಿ: ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಹಿಂದೇಟು ಹಾಕಿದ್ದ ಸಕ್ಕರೆ ಸಚಿವ ಪ್ರಕಾಶ ಹುಕ್ಕೇರಿ,  ಪಕ್ಷದ ವರಿಷ್ಠರ ತೀವ್ರ ಒತ್ತಡ ಹಿನ್ನೆಲೆಯಲ್ಲಿ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಬುಧವಾರ ನಾಮಪತ್ರ ಸಲ್ಲಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ವಿಧಾನಪರಿಷತ್‌ ಸದಸ್ಯ ವೀರಕುಮಾರ ಪಾಟೀಲ, ಮಾಜಿ ಶಾಸಕರಾದ ಎಸ್‌.ಬಿ. ಘಾಟಗೆ ಹಾಗೂ ಕಾಕಾಸಾಹೇಬ ಪಾಟೀಲ ಅವರೊಂದಿಗೆ ಹುಕ್ಕೇರಿ ಚುನಾವಣಾಧಿಕಾರಿ ದೀಪಾ ಚೋಳನ್‌ ಅವರಿಗೆ ನಾಲ್ಕು ಪ್ರತಿಗಳಲ್ಲಿ ನಾಮಪತ್ರ ಸಲ್ಲಿಸಿದರು.

ಇದಕ್ಕೂ ಮೊದಲು ಪಕ್ಷದ ವತಿಯಿಂದ ಪಟ್ಟಣದಲ್ಲಿ ಬೈಕ್‌ ರ್‍ಯಾಲಿ ನಡೆಸಿ, ಪರ ಪ್ರಚಾರ ನಡೆಸಲಾಯಿತು. ನಾಮಪತ್ರ ಸಲ್ಲಿಸಿದ ಬಳಿಕ ಪಟ್ಟಣದಲ್ಲಿ ಬೃಹತ್‌ ಪ್ರಚಾರ ಸಭೆ ನಡೆಯಿತು. ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಸಭೆಯಲ್ಲಿ ಹುಕ್ಕೇರಿ ಪರ ಮತಯಾಚಿಸಿದರು.

2009ರ ಚುನಾವಣೆಯಲ್ಲೂ ಹುಕ್ಕೇರಿ ಚಿಕ್ಕೋಡಿ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕಣಕ್ಕೆ ಇಳಿದು ಪರಾಭವಗೊಂಡಿದ್ದರು. ಈ ಬಾರಿ ಇವರು ಸಚಿವರಾಗಿ ಸ್ಪರ್ಧಿಸುತ್ತಿರುವುದು ರಾಜ್ಯದ ಗಮನ ಸೆಳೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.