ADVERTISEMENT

ನಾಮಪತ್ರ ವಾಪಸ್‌ಗೆ ₨1 ಲಕ್ಷ ಬೇಡಿಕೆ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2014, 19:18 IST
Last Updated 29 ಮಾರ್ಚ್ 2014, 19:18 IST
ನಾಮಪತ್ರ ವಾಪಸ್‌ಗೆ ₨1 ಲಕ್ಷ ಬೇಡಿಕೆ
ನಾಮಪತ್ರ ವಾಪಸ್‌ಗೆ ₨1 ಲಕ್ಷ ಬೇಡಿಕೆ   

ಬಾಗಲಕೋಟೆ: ಪಕ್ಷೇತರರಾಗಿ ಕಣದ­ಲ್ಲಿ­ರುವ ಇನ್ನೊಬ್ಬ ಅಭ್ಯರ್ಥಿ ನಾಗಪ್ಪ ಫಕೀರಪ್ಪ ಶಿರಗುಪ್ಪಿ, ನಾಮಪತ್ರ ಹಿಂಪ­ಡೆಯಲು ಇಟ್ಟ ಬೇಡಿಕೆ ₨ 1 ಲಕ್ಷ!

ಹೌದು, ಚುನಾವಣಾಧಿಕಾರಿ ಕಚೇರಿ ಸಮೀಪದಲ್ಲೇ, ಅದರಲ್ಲೂ ಮಾಧ್ಯಮ ಪ್ರತಿನಿಧಿಗಳು, ಪೊಲೀಸರ ಎದುರಲ್ಲೇ ನಾಗಪ್ಪ ಅವರನ್ನು  ನಾಮ­ಪತ್ರ ಹಿಂಪ­ಡೆಯುವಂತೆ ರಾಷ್ಟ್ರೀಯ ಪಕ್ಷವೊಂದರ ಜಿಲ್ಲಾ ಘಟಕದ ಅಧ್ಯಕ್ಷರು ಮನವಿ ಮಾಡಿದರು.

‘ಚುನಾವಣೆಗಾಗಿ ನಾನು ಈಗಾ­ಗಲೇ ₨ 80 ಸಾವಿರ ಖರ್ಚು ಮಾಡಿ­ದ್ದೇನೆ, ₨ 1 ಲಕ್ಷ ಹಣ ನೀಡುವು­ದಾ­ದರೇ ಮಾತ್ರ ನಾಮಪತ್ರ ಹಿಂಪಡೆ­ಯು­ತ್ತೇನೆ’ ಎಂದು ಅವರು ಬೇಡಿಕೆ ಇಟ್ಟರು. ಇದಕ್ಕೆ ಒಪ್ಪದ ರಾಷ್ಟ್ರೀಯ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷರು, ‘₨ 40 ಸಾವಿರ ನೀಡುತ್ತೇನೆ. ಇದಕ್ಕೂ ಹೆಚ್ಚು ನೀಡಲು ಸಾಧ್ಯವಿಲ್ಲ, ಒಪ್ಪಿ­ಕೊಂಡು ನಾಮಪತ್ರ ಹಿಂದಕ್ಕೆ ತೆಗೆದು­ಕೊಳ್ಳಿ’ ಎಂದು ಪಕ್ಷದ ಶಾಲನ್ನು ಪಕ್ಷೇ­ತರ ಅಭ್ಯರ್ಥಿಯ ಕೊರಳಿಗೆ ಹಾಕಲು ಮುಂದಾದರು.

ಇದಕ್ಕೆ ಒಪ್ಪದ ಅವರು ಸಾಧ್ಯವಿಲ್ಲ ಎಂದು ಹೊರ­ಬಂದರು. ಅಷ್ಟೊತ್ತಿಗಾಗಲೇ ನಾಮ­ಪತ್ರ ಹಿಂಪಡೆಯವ ಸಮಯ ಮುಕ್ತಾ­ಯವಾದ ಸುದ್ದಿ ತಿಳಿದ ನಾಗಪ್ಪ, ಗುಪ್ತಚರ ಪೊಲೀಸರ ಬಳಿಗೆ ಬಂದು, ‘ಚುನಾವಣಾಧಿಕಾರಿಗಳು ಪಾರ್ಟಿ ಫಂಡ್‌ ಎಷ್ಟು ಕೊಡುತ್ತಾರೆ’ ಎಂದು ಪ್ರಶ್ನಿಸಿದರು!

ದಿಗಿಲುಗೊಂಡ ಗುಪ್ತಚರ ಪೊಲೀ­ಸರು, ‘ಮೊದಲು ಚುನಾವಣೆಯಲ್ಲಿ ಗೆಲ್ಲು, ಆಮೇಲೆ ನಿನ್ನ ಬಳಿಗೆ ಕೋಟಿ ಕೋಟಿ ಹಣ ಬರುತ್ತೆ’ ಎಂದು ತಮಾಷೆ ಮಾಡಿದರು. ಆದರೆ, ಪೊಲೀಸರ ಮಾತು ನಿಜವೆಂದು ಭಾವಿಸಿದ ಆ ಅಭ್ಯರ್ಥಿಯ ಖುಷಿ ಹೇಳತೀರ­ದಾ­ಯಿತು. ‘ಅಷ್ಟೊಂದು ಹಣ ಬರುವು­ದಾದರೇ ನಾನು ಯಾವುದೇ ಕಾರ­ಣಕ್ಕೂ ನಾಮಪತ್ರ ಹಿಂಪಡೆಯುವುದಿಲ್ಲ’ ಎಂದು ಘೋಷಿಸಿ ಹೊರನಡೆದರು.ಕೊನೆಗೂ ಕಣದಲ್ಲೇ ಉಳಿದ ಈ ಅಭ್ಯರ್ಥಿಗೆ ಚುನಾವಣಾ ಆಯೋಗ  ನೀಡಿರುವ ಚಿಹ್ನೆ ಬಕೆಟ್‌!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.