ADVERTISEMENT

ಮಂಗಳೂರಿನಿಂದ ಕಣಕ್ಕಿಳಿಯಲಿ ಮೋದಿಗೆ ಪೂಜಾರಿ ಸವಾಲು

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2014, 19:30 IST
Last Updated 10 ಮಾರ್ಚ್ 2014, 19:30 IST

ಮಂಗಳೂರು: ‘ಧೈರ್ಯವಿದ್ದರೆ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಮಂಗ­ಳೂ­ರಿನಿಂದ ಕಣಕ್ಕಿಳಿಯಲಿ. ಪತ್ನಿಯನ್ನು ಪೊರೆಯಬೇಕಾದ ಪತಿಧರ್ಮವನ್ನು ಪಾಲಿಸ­ಲಿಲ್ಲ ಎಂಬ ಒಂದೇ ವಿಷಯದ ಆಧಾರದಲ್ಲಿ ಅವರನ್ನು ಸೋಲಿಸುತ್ತೇವೆ’ ಎಂದು ಕಾಂಗ್ರೆಸ್ ಮುಖಂಡ ಬಿ.ಜನಾರ್ದನ ಪೂಜಾರಿ ಸವಾಲು ಹಾಕಿದ್ದಾರೆ.

ಪಕ್ಷದ ಜಿಲ್ಲಾ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಿಮಗೆ ಮದುವೆ ಆಗಿದೆಯೇ? ಎಂದು ಮೋದಿ ಅವರಿಗೆ ನಾನು 6 ತಿಂಗಳ ಹಿಂದೆಯೇ ಬಹಿರಂಗ ಸವಾಲು ಹಾಕಿದ್ದೆ. ಅವರು 17 ವರ್ಷದ ಯಶೋದಾ ಬೆನ್‌ ಎಂಬ ಯುವತಿಯನ್ನು ಮದುವೆಯಾಗಿ 3 ವರ್ಷ ಸಂಸಾರ ನಡೆಸಿ, ಆಕೆಯ ಕೈ ಬಿಟ್ಟಿದ್ದರು.

ಆಕೆಗೆ ವಿಚ್ಛೇದನವನ್ನೂ ನೀಡಿಲ್ಲ. ಶಿಕ್ಷಕಿಯಾಗಿದ್ದ ಆ ಮಹಿಳೆ ಜೀವನವಿಡೀ ನೋವಿನಿಂದ ಕಳೆದಿದ್ದರೂ ಪತಿಯ ಬಗ್ಗೆ ದ್ವೇಷ ಇಟ್ಟುಕೊಂಡಿಲ್ಲ. ಸೀತೆಯಂತೆ ಪತಿವ್ರತೆ ಆಕೆ. ಪತ್ನಿಯನ್ನು ಕಾಪಾಡಲು ಆಗದ ವ್ಯಕ್ತಿ ದೇಶವನ್ನು ರಕ್ಷಿಸಲು ಸಾಧ್ಯವೇ?’ ಎಂದು ಪೂಜಾರಿ ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.