ADVERTISEMENT

ಕಾಂಗ್ರೆಸ್‌–ಭಯೋತ್ಪಾದಕರ ನಡುವೆ ಗಾಢ ನಂಟು: ನಡ್ಡಾ ಆರೋಪ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2024, 18:39 IST
Last Updated 26 ಏಪ್ರಿಲ್ 2024, 18:39 IST
ಜೆ.ಪಿ.ನಡ್ಡಾ
ಜೆ.ಪಿ.ನಡ್ಡಾ    

ಹುಮನಾಬಾದ್‌ (ಬೀದರ್‌ ಜಿಲ್ಲೆ): ‘ಕಾಂಗ್ರೆಸ್‌ ಪಕ್ಷ ಹಾಗೂ ಭಯೋತ್ಪಾದಕರ ನಡುವೆ ಗಾಢ ನಂಟಿದೆ’ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಗಂಭೀರ ಆರೋಪ ಮಾಡಿದರು.

ಪಟ್ಟಣದಲ್ಲಿ ಶುಕ್ರವಾರ ರಾತ್ರಿ ಏರ್ಪಡಿಸಿದ್ದ ಬಿಜೆಪಿ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ‘ಎಲ್ಲಿ ಕಾಂಗ್ರೆಸ್‌ ಇರುತ್ತದೆಯೋ ಅಲ್ಲಿ ಬಾಂಬ್‌ ಸ್ಫೋಟಗಳು ಸಂಭವಿಸುತ್ತವೆ. ಪಿಎಫ್‌ಐ ಸಂಘಟನೆಯವರನ್ನು ಜೈಲಿನಿಂದ ಬಿಟ್ಟಿಲ್ಲವೇ? ಹುಬ್ಬಳ್ಳಿಯಂತಹ ಘಟನೆಗಳು ನಡೆದಿಲ್ಲವೇ? ಇಂತಹವರು ಅಧಿಕಾರಕ್ಕೆ ಬರಬೇಕಾ? ಇವರು (ಕಾಂಗ್ರೆಸ್‌ನವರು) ಪಿಎಫ್‌ಐ ಪರ ಒಲವು ಇರುವವರು. ನಾವು ಅಧಿಕಾರಕ್ಕೆ ಬಂದಾಗ ಪಿಎಫ್‌ಐ ನಿಷೇಧ ಮಾಡಿದ್ದೇವು. ಆದರೆ, ಕಾಂಗ್ರೆಸ್‌ನವರು ಅವರನ್ನು ಕರೆದು ಕೂರಿಸಿಕೊಳ್ಳುತ್ತಾರೆ’ ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT