ADVERTISEMENT

‘ಯುವ ಮತದಾರರು ರಾಜಕೀಯ ಅಮಲಿನಲ್ಲಿ ತೇಲಬೇಡಿ’

ವೋಟ್‌ ಮಾಡೋಣ ಬನ್ನಿ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2019, 20:23 IST
Last Updated 7 ಏಪ್ರಿಲ್ 2019, 20:23 IST
ಜಯತೀರ್ಥ, ನಿರ್ದೇಶಕ
ಜಯತೀರ್ಥ, ನಿರ್ದೇಶಕ   

ಮತ ಹಾಕೋದು ನಮ್ಮೆಲ್ಲರ ಜವಾಬ್ದಾರಿ. ಆದರೆ ಚುನಾವಣೆಯಲ್ಲಿ ಯೋಗ್ಯರನ್ನ ಗುರುತಿಸುವುದು ಕಷ್ಟಕರ. ಸರಿಯಾದ ವ್ಯಕ್ತಿಗೆ ಮತ ಹಾಕದಿದ್ದಲ್ಲಿ ನಮ್ಮ ನಿರ್ಧಾರದಲ್ಲಿ ಎಡವಿದಂತೆ.

ಯುವ ಮತದಾರರು ಯಾವುದೇ ರಾಜಕೀಯ ಅಮಲಿನಲ್ಲಿ ತೇಲಬಾರದು. ನಮ್ಮ ಕಣ್ಣಿಗೆ ಕಾಣುತ್ತಿರುವು‌ದಷ್ಟೇ ನಿಜವಲ್ಲ. ರಾಜಕಾರಣಿಗಳ ಭಾಷಣಗಳನ್ನು ವಿಮರ್ಶೆಗೆ ಒಳಪಡಿಸದೆ ಅವರ ಮಾತಿಗೆ ಮರುಳಾಗಬಾರದು. ತಾಳ್ಮೆಯಿಂದ ಅಭ್ಯರ್ಥಿಯ ಹೇಳಿಕೆಗಳ ಸತ್ಯಾಸತ್ಯತೆಯನ್ನು ಅವಲೋಕಿಸಿ ಮತ ಹಾಕಬೇಕು. ಯಾವುದೇ ವ್ಯಕ್ತಿ, ಯಾವುದೇಪಕ್ಷ ದೊಡ್ಡದಲ್ಲ. ತಳವರ್ಗದ ಆಲೋಚನೆಗಳು ಹಾಗೂ ಮೂಲ ಸೌಕರ್ಯಗಳಾದ ಅನ್ನ, ನೀರು, ಪರಿಸರ, ಶಿಕ್ಷಣ, ಆರೋಗ್ಯ ವಿಚಾರಗಳಿಗೆ ಒತ್ತು ನೀಡುವವರಿಗೆ ಮತ ಹಾಕೋಣ.

– ಜಯತೀರ್ಥ, ಸಿನಿಮಾ ನಿರ್ದೇಶಕ

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.