ADVERTISEMENT

ದಾಖಲೆಗಳಿಲ್ಲದೇ ಸಾಗಿಸುತ್ತಿದ್ದ ಚಿನ್ನ, ಬೆಳ್ಳಿ, ನಗದು ವಶ: ಐವರ ಬಂಧನ

ಕಳವು ಮಾಡಿದ್ದಾಗಿ ಒಪ್ಪಿಕೊಂಡ ಆರೋಪಿಗಳು

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2019, 12:14 IST
Last Updated 1 ಏಪ್ರಿಲ್ 2019, 12:14 IST
ಯಲ್ಲಾಪುರ ತಾಲ್ಲೂಕಿನ ಕಿರುವತ್ತಿ ಚೆಕ್‌ಪೋಸ್ಟ್‌ನಲ್ಲಿ ಅಧಿಕಾರಿಗಳು ಮತ್ತು ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿರವುದು
ಯಲ್ಲಾಪುರ ತಾಲ್ಲೂಕಿನ ಕಿರುವತ್ತಿ ಚೆಕ್‌ಪೋಸ್ಟ್‌ನಲ್ಲಿ ಅಧಿಕಾರಿಗಳು ಮತ್ತು ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿರವುದು   

ಕಾರವಾರ:ಯಾವುದೇ ದಾಖಲೆಗಳಿಲ್ಲದೇ ಕಾರಿನಲ್ಲಿ ಸಾಗಿಸಲಾಗುತ್ತಿದ್ದ ಅ‍ಪಾರ ಪ್ರಮಾಣದ ಚಿನ್ನ, ಬೆಳ್ಳಿ ಮತ್ತು ನಗದನ್ನು ಯಲ್ಲಾಪುರ ತಾಲ್ಲೂಕಿನ ಕಿರುವತ್ತಿ ಚೆಕ್‌ಪೋಸ್ಟ್‌ನಲ್ಲಿ ಅಧಿಕಾರಿಗಳು ಸೋಮವಾರ ಜಪ್ತಿ ಮಾಡಿದ್ದಾರೆ. ಈ ಸಂಬಂಧ ಐವರನ್ನು ಬಂಧಿಸಿದ್ದಾರೆ.

ಬಂಧಿತರಿಂದ 2.440 ಕೆ.ಜಿ ಚಿನ್ನ, ಮೂರು ಕೆ.ಜಿ. ಬೆಳ್ಳಿ ಹಾಗೂ ₹ 2.68 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನುಮುಂಬೈಯ ಸೀತಾರಾಮ್ ಬಹಾದ್ದೂರ್, ಏಕಮಥ ಬಹಾದ್ದೂರ್, ಡುಮ್ಮರ್ ಬಹಾದ್ದೂರ್, ಹುಬ್ಬಳ್ಳಿ ನವನಗರದ ಬಾಲಸಿಂಗ್ ಬಹಾದ್ದೂರ್ ಹಾಗೂ ರಾಮ್ ಗೋರ್ಖ ಎಂದು ಗುರುತಿಸಲಾಗಿದೆ.ಆರೋಪಿಗಳು ವಿಚಾರಣೆಯ ವೇಳೆ ಇವುಗಳನ್ನು ವಿವಿಧೆಡೆ ಕಳವು ಮಾಡಿ ಸಾಗಿಸುತ್ತಿದ್ದುದಾಗಿ ಹೇಳಿದ್ದಾರೆ ಎಂದು ತಹಶೀಲ್ದಾರ್ ಜಿ.ಎಸ್.ಶಂಕರ್ ತಿಳಿಸಿದ್ದಾರೆ.

ಕಾರವಾರದಿಂದ ಹುಬ್ಬಳ್ಳಿಯತ್ತ ಸಾಗುತ್ತಿದ್ದಹ್ಯುಂಡೈ ಇಯಾನ್ ಕಾರನ್ನು ಕಿರುವತ್ತಿ ಚೆಕ್‌ಪೋಸ್ಟ್‌ನಲ್ಲಿ ಚುನಾವಣಾ ವಿಚಕ್ಷಣಾ ದಳದ ಅಧಿಕಾರಿಗಳು ಮತ್ತು ಸಿಬ್ಬಂದಿ ತಡೆದರು. ಕಾರನ್ನು ಪರಿಶೀಲನೆ ನಡೆಸಿದಾಗಬೆಲೆಬಾಳುವ ವಸ್ತುಗಳು ಮತ್ತು ನಗದು ಪತ್ತೆಯಾಯಿತು. ಈ ಸಂದರ್ಭದಲ್ಲಿ ಪಿಎಸ್‌ಐ ಮಂಜುನಾಥ, ಡಿವೈಎಸ್‌ಪಿ ಭಾಸ್ಕರ, ಸಹಾಯಕ ಚುನಾವಣಾಧಿಕಾರಿ ರುದ್ರೇಶಪ್ಪ ಇದ್ದರು. ಆರೋಪಿಗಳ ವಿಚಾರಣೆ ಮುಂದುವರಿದಿದೆ.

ADVERTISEMENT
ಯಲ್ಲಾಪುರ ತಾಲ್ಲೂಕಿನ ಕಿರುವತ್ತಿ ಚೆಕ್‌ಪೋಸ್ಟ್‌ನಲ್ಲಿ ಅಧಿಕಾರಿಗಳು ಸೋಮವಾರ ವಶಪಡಿಸಿಕೊಂಡ ಅಪಾರ ಚಿನ್ನ, ಬೆಳ್ಳಿ ಆಭರಣಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.