ADVERTISEMENT

ಕರ್ನಾಟಕ: ಅತ್ಯಂತ ಸವಾಲಿನ ಚುನಾವಣೆ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2018, 19:30 IST
Last Updated 3 ಮಾರ್ಚ್ 2018, 19:30 IST
ಕರ್ನಾಟಕ: ಅತ್ಯಂತ ಸವಾಲಿನ ಚುನಾವಣೆ
ಕರ್ನಾಟಕ: ಅತ್ಯಂತ ಸವಾಲಿನ ಚುನಾವಣೆ   

ಇವತ್ತು ಸಂಭ್ರಮಿಸುವುದಕ್ಕೆ ಬಿಜೆಪಿಗೆ ಕಾರಣ ಇದೆ. ಆದರೆ, ಭಾರತದ ಚುನಾವಣೆಗಳನ್ನು ಹಗುರವಾಗಿ ಪರಿಗಣಿಸಬೇಡಿ ಎಂದು ನಾನು ಹೇಳುತ್ತಲೇ ಬಂದಿದ್ದೇನೆ. 5 ವಾರಗಳ ಹಿಂದೆ ಕಾಂಗ್ರೆಸ್‌ ರಾಜಸ್ಥಾನದಲ್ಲಿ 2 ಉಪ ಚುನಾವಣೆಗಳನ್ನು ಗೆದ್ದಿತ್ತು. ಕರ್ನಾಟಕದ ಬಗ್ಗೆ ಕೇಳಿ; ಅದು ಅತ್ಯಂತ ಸವಾಲಿನ ಚುನಾವಣೆ ಎಂದು ಈಗಲೂ ಹೇಳುತ್ತೇನೆ.

–ರಾಜ್‌ದೀಪ್‌ ಸರ್‌ದೇಸಾಯಿ, ಪತ್ರಕರ್ತ

ಕರ್ನಾಟಕ ಚುನಾವಣಾ ಫಲಿತಾಂಶದ ನಂತರ ರಾಹುಲ್‌ ಗಾಂಧಿ ಅವರಿಗೆ ಮತ್ತೆ ತಮ್ಮ ಅಜ್ಜಿಯ ನೆನಪು ಕಾಡಲಿದೆ ಎಂದು ನನಗೆ ಅನಿಸುತ್ತದೆ!

ADVERTISEMENT

–ಶೆಫಾಲಿ ವೈದ್ಯ, @ ShefVaidya

ದೆಹಲಿ ಪಕ್ಷಗಳಿಗೆ ತಮ್ಮ ಪಕ್ಷದ ಹಿತವೇ ಮುಖ್ಯ. ಇವರು ಚುನಾವಣೆ ಗೆಲ್ಲಲು ನಮ್ಮ ರಾಜ್ಯದ ಹೆಸರಿಗೆ ಮಸಿ ಬಳಿಯೋಕೂ ಹೇಸದ ವಿಷಜಂತುಗಳು. ಆಡಳಿತದ ಕುಂದುಗಳಿಗೂ, ರಾಜ್ಯದ ಕುಂದುಗಳಿಗೂ ವ್ಯತ್ಯಾಸ ತಿಳಿಯದೇ ದೆಹಲಿ ನಾಯಕರ ಮುಂದೆ ನಮ್ಮ ನಾಡನ್ನೇ ಅಲ್ಲಗಳೆಯುವ ನಾಡದ್ರೋಹಿಗಳನ್ನು ನಂಬಲಾದೀತೇ? ಕನ್ನಡಿಗರು ಯೋಚಿಸಿ ಹೆಜ್ಜೆ ಇಡೋದು ಒಳಿತು.

–ರಾಮಚಂದ್ರಪ್ಪ ಮಹಾರುದ್ರಪ್ಪ, @nanuramu

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.