ADVERTISEMENT

ಜೆಡಿಎಸ್‌ ಕಾರ್ಯಕರ್ತರಿಬ್ಬರು ವಶಕ್ಕೆ

​ಪ್ರಜಾವಾಣಿ ವಾರ್ತೆ
Published 9 ಮೇ 2018, 20:08 IST
Last Updated 9 ಮೇ 2018, 20:08 IST

ಬೆಂಗಳೂರು: ಹಣದ ಆಮಿಷವೊಡ್ಡಿ ಮತದಾರರಿಂದ ಚುನಾವಣಾ ಗುರುತಿನ ಚೀಟಿಗಳ ಜೆರಾಕ್ಸ್‌ ಪ್ರತಿಗಳನ್ನು ಸಂಗ್ರಹಿಸುತ್ತಿದ್ದ ಆರೋಪದಡಿ ಜೆಡಿಎಸ್ ಪಕ್ಷದ ಕಾರ್ಯಕರ್ತರಿಬ್ಬರನ್ನು ಅಶೋಕನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಶಾಂತಿನಗರ ವಿಧಾನಸಭಾ ಕ್ಷೇತ್ರದ ಪಿ.ಕೆ.ಕಾಲೊನಿಯ ಫುಡ್‌ ಗಾರ್ಡನ್‌ನಲ್ಲಿ ಅವಿನಾಶ್ ಮತ್ತು ನಳಿನಿ ಎಂಬುವರು ಚೀಟಿಗಳನ್ನು ಸಂಗ್ರಹಿಸುತ್ತಿದ್ದ ಬಗ್ಗೆ ಸಂಚಾರ ದಳದ ಅಧಿಕಾರಿಗಳು ದೂರು ನೀಡಿದ್ದಾರೆ. ಅದರನ್ವಯ ಅವರಿಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದರು.

‘ಒಂದು ಚುನಾವಣಾ ಗುರುತಿನ ಚೀಟಿಯ ಜೆರಾಕ್ಸ್‌ ಪ್ರತಿಗೆ ₹1,000 ಕೊಡಲಾಗುತ್ತಿತ್ತು. ಆ ಬಗ್ಗೆ ಮಾಹಿತಿ ಪಡೆದು ಮೇ 7ರ ಸಂಜೆ 4.30 ಗಂಟೆಗೆ ಫುಡ್‌ ಗಾರ್ಡನ್‌ಗೆ ಹೋಗಿದ್ದ ಸಂಚಾರ ದಳದ ಅಧಿಕಾರಿಗಳು, ಇಬ್ಬರನ್ನು ಹಿಡಿದು ವಿಚಾರಣೆಗೆ ಒಳಪಡಿಸಿದ್ದರು’

ADVERTISEMENT

‘ಚೀಟಿಯ ಜೆರಾಕ್ಸ್‌ ಪ್ರತಿಗಳನ್ನು ಸಂಗ್ರಹಿಸುತ್ತಿದ್ದದ್ದನ್ನು ಅವರಿಬ್ಬರು ಒಪ್ಪಿಕೊಂಡರು. ತಾವು ಜೆಡಿಎಸ್‌ ಕಾರ್ಯಕರ್ತರು ಎಂದು ಅವರೇ ಹೇಳಿಕೊಂಡಿದ್ದಾರೆ. ಅವರಿಬ್ಬರ ಬಳಿ ಇದ್ದ 30 ಚೀಟಿಗಳು, ಮತದಾರರ ಹೆಸರು ಹಾಗೂ ವಿಳಾಸವಿದ್ದ ಪುಸ್ತಕವೊಂದನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಅವುಗಳನ್ನು ನಮ್ಮ ವಶಕ್ಕೆ ನೀಡಿದ್ದು ಪರಿಶೀಲಿಸುತ್ತಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.