ADVERTISEMENT

ನಗರದಲ್ಲಿ 340 ಬಾರ್‌ಗಳ ಪರವಾನಗಿ ತಾತ್ಕಾಲಿಕ ರದ್ದು

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2018, 19:30 IST
Last Updated 19 ಏಪ್ರಿಲ್ 2018, 19:30 IST

ಬೆಂಗಳೂರು: ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ ಕಾರಣಕ್ಕೆ ಬಾರ್‌ ಹಾಗೂ ರೆಸ್ಟೊರೆಂಟ್‌ಗಳಿಗೆ ಜಿಲ್ಲಾ ಸಹಾಯಕ ಚುನಾವಣಾಧಿಕಾರಿ ಕೆ.ಎ.ದಯಾನಂದ ಗುರುವಾರ ಬಿಸಿ ಮುಟ್ಟಿಸಿದ್ದಾರೆ.

ನಗರದ 340 ಬಾರ್‌ಗಳ ಪರವಾನಗಿಯನ್ನು ಮೇ 15ರವರೆಗೆ ರದ್ದುಗೊಳಿಸಿ, 120 ಬಾರ್‌ಗಳಿಗೆ ನೋಟೀಸ್‌ ಜಾರಿ ಮಾಡಿದ್ದಾರೆ.

‘ತೆರಿಗೆ ವಿನಾಯಿತಿ ಇರುವ ಮದ್ಯ ಮಾರಾಟ ಮಾಡುತ್ತಿದ್ದ ಜೀವನ್‌ಬಿಮಾ ನಗರದ ಕೆ.ಟಿ.ಗ್ರೂಪ್ಸ್‌ನ ವೇರ್‌ ಹೌಸ್‌ ಬಾರ್‌ನ ಪರವಾನಗಿಯನ್ನು ಮೊನ್ನೆಯಷ್ಟೇ ಶಾಶ್ವತವಾಗಿ ರದ್ದು ಮಾಡಿದ್ದೇವೆ. ಬೆಂಗಳೂರಿನಲ್ಲಿ 5 ಸಾವಿರ ಬಾರ್‌ಗಳಿವೆ. ಚುನಾವಣೆ ಸಮಯವಾದ್ದರಿಂದ ಬಾರ್‌ನಿಂದ ಆಗುವ ಚಿಕ್ಕ ಪುಟ್ಟ ತಪ್ಪುಗಳಿಗೂ ಕ್ರಮ ಕೈಗೊಳ್ಳಲಿದ್ದೇವೆ’ ಎಂದು ದಯಾನಂದ್‌ ತಿಳಿಸಿದರು.

ADVERTISEMENT

‘ನೀತಿ ಸಂಹಿತೆ ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಲು ತಂಡ ರಚಿಸಲಾಗಿದ್ದು, ಯಾವುದೇ ರೀತಿಯಲ್ಲಿ ಉಲ್ಲಂಘನೆ ಕಂಡುಬಂದಲ್ಲಿ ತಕ್ಷಣ ಕ್ರಮ ಕೈಗೊಳ್ಳಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.