ADVERTISEMENT

ನನ್ನನ್ನು ಮಾನಸಿಕವಾಗಿ ಕೊಲೆ ಮಾಡಲು ಯತ್ನ: ಶಾಸಕ ಜೆ.ಆರ್.ಲೋಬೊ ಆರೋಪ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2018, 6:46 IST
Last Updated 28 ಏಪ್ರಿಲ್ 2018, 6:46 IST
ನನ್ನನ್ನು ಮಾನಸಿಕವಾಗಿ ಕೊಲೆ ಮಾಡಲು ಯತ್ನ: ಶಾಸಕ ಜೆ.ಆರ್.ಲೋಬೊ ಆರೋಪ
ನನ್ನನ್ನು ಮಾನಸಿಕವಾಗಿ ಕೊಲೆ ಮಾಡಲು ಯತ್ನ: ಶಾಸಕ ಜೆ.ಆರ್.ಲೋಬೊ ಆರೋಪ   

ಮಂಗಳೂರು: 'ಕುಡ್ಸೆಂಪ್ ಯೋಜನೆ ಅವ್ಯವಹಾರದಲ್ಲಿ ಭಾಗಿಯಾಗಿದ್ದೇನೆ ಎಂದು ನನ್ನ ವಿರುದ್ಧ ಸುಳ್ಳು ಆರೋಪ ಮಾಡುತ್ತಿರುವ ಪ್ರತಿಪಕ್ಷಗಳ ಕೆಲವರು ನನ್ನನ್ನು ಮಾನಸಿಕವಾಗಿ ಕೊಲೆ ಮಾಡಲು ಯತ್ನಿಸುತ್ತಿದ್ದಾರೆ' ಎಂದು ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಜೆ.ಆರ್. ಲೋಬೊ ಆರೋಪಿಸಿದರು.

ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, '2003ರ ಜುಲೈ ತಿಂಗಳಿನಿಂದ 2013ರ ಡಿಸೆಂಬರ್ ವರೆಗೆ ನಾನು ಕುಡ್ಸೆಂಪ್ ನಿರ್ದೇಶಕನಾಗಿದ್ದೆ. ಈ ಅವಧಿಯಲ್ಲಿ ಯಾವುದೇ ಅಕ್ರಮವೂ ನಡೆದಿಲ್ಲ. ಸಿಪಿಎಂ ಅಭ್ಯರ್ಥಿ ಸುನಿಲ್ ಕುಮಾರ್ ಬಜಾಲ್ ಮತ್ತು ಬಿಜೆಪಿಯ ಸ್ವಘೋಷಿತ ಮುಖಂಡ ಹನುಮಂತ ಕಾಮತ್ ಸುಳ್ಳು ಆರೋಪ ಮಾಡುತ್ತಿದ್ದಾರೆ' ಎಂದರು.

ಇದು ಮಾನಸಿಕವಾಗಿ ಕೊಲೆ ಮಾಡುವ ಯತ್ನ. ಈ ರೀತಿ ಕೊಲೆ ಮಾಡಿ ಅಭ್ಯಾಸ ಇರುವವರು ಮಾತ್ರ ಹೀಗೆ ಮಾಡಲು ಸಾಧ್ಯ. ಇಂತಹ ಪ್ರಯತ್ನಗಳಿಗೆ ನಾನು ಹೆದರುವುದಿಲ್ಲ ಎಂದರು.

ADVERTISEMENT

ಸುಳ್ಳು ಆರೋಪ ಮಾಡುವವರ ವಿರುದ್ಧ ಮಾನನಷ್ಟ ಮೊಕದ್ದಮೆ ಮತ್ತು ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡುವೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.