ADVERTISEMENT

ನನ್ನ ಆಶಯ ಗೌರವಿಸುವವರ ಪರ ಪ್ರಚಾರ

​ಪ್ರಜಾವಾಣಿ ವಾರ್ತೆ
Published 4 ಮೇ 2018, 19:30 IST
Last Updated 4 ಮೇ 2018, 19:30 IST
ಚಳ್ಳಕೆರೆ ತಾಲ್ಲೂಕು ನಾಯಕನಹಟ್ಟಿಯಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಪರ ನಟ ಯಶ್ ಚುನಾವಣಾ ಪ್ರಚಾರದ ವೇಳೆ ಅಭಿಮಾನಿಗಳತ್ತ ಕೈ ಬೀಸಿದರು
ಚಳ್ಳಕೆರೆ ತಾಲ್ಲೂಕು ನಾಯಕನಹಟ್ಟಿಯಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಪರ ನಟ ಯಶ್ ಚುನಾವಣಾ ಪ್ರಚಾರದ ವೇಳೆ ಅಭಿಮಾನಿಗಳತ್ತ ಕೈ ಬೀಸಿದರು   

ಚಿತ್ರದುರ್ಗ/ ನಾಯಕನಹಟ್ಟಿ: ‘ನಾನು ಯಾವುದೇ ಪಕ್ಷದ ಪರ ಚುನಾವಣ ಪ್ರಚಾರಕ್ಕಾಗಿ ಬಂದಿಲ್ಲ. ನನ್ನ ಯೋಚನೆ, ಯೋಜನೆಗಳನ್ನು ಬೆಂಬಲಿಸುವ ವ್ಯಕ್ತಿಗಳ ಪರವಾಗಿ ಪ್ರಚಾರ ಮಾಡಲು ಬಂದಿದ್ದೇನೆ’ ಎಂದು ಚಿತ್ರನಟ ಯಶ್ ಹೇಳಿದರು.

ನಾಯಕನಹಟ್ಟಿಯಲ್ಲಿ ಶುಕ್ರವಾರ ಮೊಳಕಾಲ್ಮುರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಪರ ಚುನಾವಣಾ ಪ್ರಚಾರಕ್ಕೆ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದರು.

‘ಗ್ರಾಮೀಣ ಭಾಗದಲ್ಲಿನ ನೀರಿನ ಕೊರತೆ ನೀಗಿಸುವುದು ನನ್ನ ‘ಯಶೋ ಮಾರ್ಗ’ ಯೋಜನೆಯ ಉದ್ದೇಶ. ಈ ಯೋಜನೆಯ ಆಶಯಗಳಿಗೆ ನೈತಿಕವಾಗಿ ಬೆಂಬಲ ಸೂಚಿಸುವವರನ್ನು ಬೆಂಬಲಿಸುತ್ತಿದ್ದೇನೆ. ಅವರ ಪರ ಪ್ರಚಾರ ಮಾಡುತ್ತಿದ್ದೇನೆ. ಶ್ರೀರಾಮುಲು ಆರು ತಿಂಗಳಿ‌ನಿಂದ ಪರಿಚಯವಾಗಿದ್ದಾರೆ. ಅವರು ನುಡಿದಂತೆ ನಡೆಯುವ ವ್ಯಕ್ತಿ. ಮೇಲಾಗಿ ನನ್ನ ಯಶೋ ಮಾರ್ಗದ ಆಶಯಗಳಿಗೆ ನೈತಿಕ ಬೆಂಬಲ ಸೂಚಿಸುವ ವ್ಯಕ್ತಿಯಾಗಿದ್ದಾರೆ. ಹಾಗಾಗಿ ಅವರ ಪರ ಪ್ರಚಾರಕ್ಕೆ ಬಂದಿದ್ದೇನೆ’ ಎಂದರು.

ADVERTISEMENT

‘ರಾಜ್ಯ ರಾಜಕಾರಣದಲ್ಲಿ ಎಂ.ಬಿ.ಪಾಟೀಲ್, ವಿನಯ್ ಕುಲಕರ್ಣಿ ಸೇರಿದಂತೆ ಯಶೋ ಮಾರ್ಗದ ಆಶಯ ಬೆಂಬಲಿಸುವಂತಹ 10ರಿಂದ 15 ಮಂದಿ ರಾಜಕಾರಣಿಗಳಿದ್ದಾರೆ. ಅಂಥವರ ಪರ ಪ್ರಚಾರ ಮಾಡುತ್ತೇನೆ’ ಎಂದರು.

ಆಜಾನ್ ವೇಳೆ ಭಾಷಣ ನಿಲ್ಲಿಸಿದ ಯಶ್: ನಾಯಕನಹಟ್ಟಿಯಲ್ಲಿ ಶುಕ್ರವಾರ ಸಂಜೆ ಶ್ರೀರಾಮುಲು ಪರ ಯಶ್‌ ಚುನಾವಣಾ ಭಾಷಣ ಮಾಡುತ್ತಿದ್ದಾಗ ಪಕ್ಕದ ಮಸೀದಿಯಿಂದ ಆಜಾನ್ ಕೇಳಿಸಿತು. ತಕ್ಷಣ ಭಾಷಣ ನಿಲ್ಲಿಸಿದ ಯಶ್, ಆಜಾನ್ ಮುಗಿಯುವವರೆಗೂ ಸುಮ್ಮನೆ ನಿಂತಿದ್ದರು‌. ಜನ ಕೇಕೆ ಹಾಕಿ, ಮಾತನಾಡಿ ಎಂದರೂ ಯಶ್ ಮಾತಾಡಲಿಲ್ಲ.
ನಂತರ ಮಾತು ಆರಂಭಿಸಿದ ಯಶ್ 'ಪ್ರಾರ್ಥನೆ ನಡೆಯುವಾಗ ಅದಕ್ಕೆ ಗೌರವ ಸಲ್ಲಿಸಬೇಕು' ಎಂದರು. ನಂತರ ಅವರು ಸಿನಿಮಾ ಡೈಲಾಗ್ ಹೊಡೆದರು.

ಆಜಾನ್ ವೇಳೆ ಭಾಷಣ ನಿಲ್ಲಿಸಿದ ಯಶ್
ನಾಯಕನಹಟ್ಟಿಯಲ್ಲಿ ಶುಕ್ರವಾರ ಸಂಜೆ ಶ್ರೀರಾಮುಲು ಪರ ಯಶ್‌ ಚುನಾವಣಾ ಭಾಷಣ ಮಾಡುತ್ತಿದ್ದಾಗ ಪಕ್ಕದ ಮಸೀದಿಯಿಂದ ಆಜಾನ್ ಕೇಳಿಸಿತು. ತಕ್ಷಣ ಭಾಷಣ ನಿಲ್ಲಿಸಿದ ಯಶ್, ಆಜಾನ್ ಮುಗಿಯುವವರೆಗೂ ಸುಮ್ಮನೆ ನಿಂತಿದ್ದರು‌. ಜನ ಕೇಕೆ ಹಾಕಿ, ಮಾತನಾಡಿ ಎಂದರೂ ಯಶ್ ಮಾತಾಡಲಿಲ್ಲ.
ನಂತರ ಮಾತು ಆರಂಭಿಸಿದ ಯಶ್ 'ಪ್ರಾರ್ಥನೆ ನಡೆಯುವಾಗ ಅದಕ್ಕೆ ಗೌರವ ಸಲ್ಲಿಸಬೇಕು' ಎಂದರು. ನಂತರ ಅವರು ಸಿನಿಮಾ ಡೈಲಾಗ್ ಹೊಡೆದರು.

‘ಶ್ರೀರಾಮುಲು ಬಣ್ಣ ಬಳಿದುಕೊಂಡು ಜುಬ್ಬಾ ಹಾಕ್ಕೊಂಡು ಜೋಗಪ್ಪನಂತೆ ಬರ್ತಾನೆ. ಅವನಿಗೆ ಪ್ರಚಾರಕ್ಕೆ ನಟರು ಯಾಕೆ ಬೇಕು? ಅವರೆಲ್ಲಾ ನಟರಾಗುವ ಮುಂಚೆ ನಾನೂ ಕಲಾವಿದನಾಗಿದ್ದವನು. ನಟರು ಬಂದು ಕೇಳಿದ್ರೆ ಇಲ್ಲಿ ಯಾರೂ ವೋಟ್ ಹಾಕ್ಕಲ್ಲ’.
– ಎಸ್. ತಿಪ್ಪೇಸ್ವಾಮಿ, ಪಕ್ಷೇತರ ಅಭ್ಯರ್ಥಿ, ಮೊಳಕಾಲ್ಮುರು ಕ್ಷೇತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.