ADVERTISEMENT

ನನ್ನ ಸೋಲು ತಲೆ ತಗ್ಗಿಸುವಂಥದ್ದು: ಕಾಗೋಡು

​ಪ್ರಜಾವಾಣಿ ವಾರ್ತೆ
Published 28 ಮೇ 2018, 19:30 IST
Last Updated 28 ಮೇ 2018, 19:30 IST
ನನ್ನ ಸೋಲು ತಲೆ ತಗ್ಗಿಸುವಂಥದ್ದು: ಕಾಗೋಡು
ನನ್ನ ಸೋಲು ತಲೆ ತಗ್ಗಿಸುವಂಥದ್ದು: ಕಾಗೋಡು   

ಸಾಗರ: ‘ಸಾಗರದಂತಹ ಕ್ಷೇತ್ರದಲ್ಲಿ ನನ್ನ ಸೋಲು ತಲೆ ತಗ್ಗಿಸುವಂಥದ್ದು. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಮತದಾರನೇ ದೇವರು. ಆತ ಕೊಟ್ಟ ತೀರ್ಮಾನವನ್ನು ಸ್ವೀಕರಿಸಲೇಬೇಕು. ಚುನಾವಣೆಯಲ್ಲಿ ಗೆಲುವು, ಸೋಲು ಎರಡನ್ನೂ ನಾನು ಕಂಡಿದ್ದು, ಅದನ್ನು ಜೀರ್ಣಿಸಿಕೊಳ್ಳುವ ಶಕ್ತಿ ಇದೆ’ ಎಂದು ಕಾಂಗ್ರೆಸ್‌ನ ಹಿರಿಯ ಮುಖಂಡ ಕಾಗೋಡು ತಿಮ್ಮಪ್ಪ ತಿಳಿಸಿದರು.

ಇಲ್ಲಿನ ಬ್ರಾಸಂ ಸಭಾಭವನದಲ್ಲಿ ಸೋಮವಾರ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ‘ಬಿಜೆಪಿ ಪರ ಅಲೆ ಇರುವ ಕುರಿತು ಸುಳಿವು ಸಿಕ್ಕಿದ್ದರೆ ಮುಂಜಾಗ್ರತೆ ವಹಿಸಬಹುದಿತ್ತು’ ಎಂದರು.

‘ರಾಜ್ಯದ ಪ್ರತಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ₹ 8ರಿಂದ ₹ 10 ಕೋಟಿ ಹಣವನ್ನು ಮತದಾರರಿಗೆ ಹಂಚಿದ್ದಾರೆ. ಸಾಗರದಲ್ಲೂ ಈ ಕೆಲಸ ನಡೆದಿದೆ. ಹೀಗೆ ಹಣ ಹಂಚುವ ಕಾರ್ಯವನ್ನು ಕಾಂಗ್ರೆಸ್ ಕಾರ್ಯಕರ್ತರು ತಡೆದಿದ್ದರೆ ಸೋಲು ಉಂಟಾಗುತ್ತಿರಲಿಲ್ಲ’ ಎಂದು ಅಭಿಪ್ರಾಯಪಟ್ಟರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.