ADVERTISEMENT

ನ್ಯಾಯಮಂಡಳಿ ರಚನೆ ಅನಿವಾರ್ಯವಿತ್ತು: ಮಹಾರಾಷ್ಟ್ರ ‌ಮಾಜಿ ಮುಖ್ಯಮಂತ್ರಿ ಅಶೋಕ ಚವ್ಹಾಣ

​ಪ್ರಜಾವಾಣಿ ವಾರ್ತೆ
Published 6 ಮೇ 2018, 10:15 IST
Last Updated 6 ಮೇ 2018, 10:15 IST
ನ್ಯಾಯಮಂಡಳಿ ರಚನೆ ಅನಿವಾರ್ಯವಿತ್ತು: ಮಹಾರಾಷ್ಟ್ರ ‌ಮಾಜಿ ಮುಖ್ಯಮಂತ್ರಿ ಅಶೋಕ ಚವ್ಹಾಣ
ನ್ಯಾಯಮಂಡಳಿ ರಚನೆ ಅನಿವಾರ್ಯವಿತ್ತು: ಮಹಾರಾಷ್ಟ್ರ ‌ಮಾಜಿ ಮುಖ್ಯಮಂತ್ರಿ ಅಶೋಕ ಚವ್ಹಾಣ   

ಹುಬ್ಬಳ್ಳಿ: ಮಹದಾಯಿ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಕರ್ನಾಟಕ, ಗೋವಾ ಹಾಗೂ ಮಹಾರಾಷ್ಟ್ರ ಸರ್ಕಾರಗಳು ಒಮ್ಮತ ಅಭಿಪ್ರಾಯಕ್ಕೆ ಬರದೇ ಇದ್ದಾಗ ಅಂದಿನ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರು ಮಹದಾಯಿ ನ್ಯಾಯಮಂಡಳಿ ರಚನೆ ಮಾಡಿದರು ಎಂದು ಮಹಾರಾಷ್ಟ್ರ ‌ಮಾಜಿ ಮುಖ್ಯಮಂತ್ರಿ ಅಶೋಕ ಚವ್ಹಾಣ ಹೇಳಿದರು.

ಕಾಂಗ್ರೆಸ್ ‌ಅಭ್ಯರ್ಥಿಗಳ ಪರ ನಗರಕ್ಕೆ ಪ್ರಚಾರಕ್ಕೆ ಬಂದಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಲವು ಬಾರಿ‌ ಮೂರು ರಾಜ್ಯಗಳ ‌ಮುಖ್ಯಮಂತ್ರಿಗಳ ಸಭೆ ನಡೆಸಿದ ಅವರು ಸುಪ್ರೀಂಕೋರ್ಟ್ ‌ಸೂಚನೆ ಪ್ರಕಾರ ನ್ಯಾಯಮಂಡಳಿ ರಚನೆ ಮಾಡಿದರು. ಕರ್ನಾಟಕ ‌ತನ್ನ ಪಾಲಿನ ನೀರನ್ನು ಪಡೆಯಲು ಮಹಾರಾಷ್ಟ್ರ ‌ಕಾಂಗ್ರೆಸ್ ಬಯಸುತ್ತದೆ. ಎರಡು‌ ಅಥವಾ ‌ಮೂರು ರಾಜ್ಯಗಳ ‌ಮಧ್ಯೆ ಜಲವಿವಾದ ಇರುವುದು ಸ್ವಾಭಾವಿಕ ‌ಎಂದರು.

ಅಧಿಕಾರಕ್ಕೆ ಬಂದು ನಾಲ್ಕು ವರ್ಷಗಳಾದರೂ ಪ್ರಧಾನಿ ನರೇಂದ್ರ ‌ಮೋದಿ ಜನರಿಗೆ ನೀಡಿದ್ದ ಭರವಸೆಗಳನ್ನು ‌ಈಡೇರಿಸಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುವುದನ್ನು ‌ತಪ್ಪಿಸಲು ಮೋದಿ‌ ಶತಾಯಗತಾಯ ಪ್ರಯತ್ನ ‌ಮಾಡುತ್ತಿದ್ದಾರೆ. ಮೊದಲು 15 ಸಾರ್ವಜನಿಕ ಸಭೆಗಳು ‌ನಿಗದಿಯಾಗಿದ್ದವು. ಆದರೆ ಒಟ್ಟು 21 ಸಭೆಗಳಲ್ಲಿ ಭಾಗವಹಿಸಲಿದ್ದಾರೆ. ಆದರೂ ಸಿದ್ದರಾಮಯ್ಯ ‌ಸರ್ಕಾರ ಕೈಗೊಂಡ ‌ಜನಪರ ಯೋಜನೆಗಳಿಂದಾಗಿ ರಾಜ್ಯದಲ್ಲಿ ‌ಮತ್ತೆ‌ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಚವ್ಹಾಣ ವಿಶ್ವಾಸ ವ್ಯಕ್ತಪಡಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.