ADVERTISEMENT

ಪಕ್ಷಗಳ ಪ್ರತಿಕ್ರಿಯೆ

​ಪ್ರಜಾವಾಣಿ ವಾರ್ತೆ
Published 12 ಮೇ 2018, 19:30 IST
Last Updated 12 ಮೇ 2018, 19:30 IST
ಪಕ್ಷಗಳ ಪ್ರತಿಕ್ರಿಯೆ
ಪಕ್ಷಗಳ ಪ್ರತಿಕ್ರಿಯೆ   

ಒಂದು ವೇಳೆ ಕಾಂಗ್ರೆಸ್‌ ಗೆದ್ದರೆ...

ಬಿಜೆಪಿ: ಜನರ ತೀರ್ಪನ್ನು ಸ್ವೀಕರಿಸುತ್ತೇವೆ. ಪಕ್ಷ ನಡೆಸಿದ ಪ್ರಚಾರ ಮತ್ತು ಚುನಾವಣಾ ಕಾರ್ಯತಂತ್ರಗಳ ಬಗ್ಗೆ ಕೂಲಂಕಷ ಪರಿಶೀಲನೆ ನಡೆಸುತ್ತೇವೆ.

ಕಾಂಗ್ರೆಸ್‌: ಪ್ರಜಾಪ್ರಭುತ್ವಕ್ಕೆ ಗೆಲುವಾಗಿದೆ. ಇದು ರಾಹುಲ್‌ ಗಾಂಧಿ ಅವರ ಮ್ಯಾಜಿಕ್‌.

ADVERTISEMENT

ಒಂದು ವೇಳೆ ಬಿಜೆಪಿ ಗೆದ್ದರೆ...

ಕಾಂಗ್ರೆಸ್‌: ಇವಿಎಂಗಳನ್ನು ದುರ್ಬಳಕೆ ಮಾಡಲಾಗಿದೆ. ಪ್ರಜಾಪ್ರಭುತ್ವ ಅಪಾಯದಲ್ಲಿದೆ.

ಬಿಜೆಪಿ: ಸಿದ್ದ ಎಲ್ಲಿದ್ದಾರೆ?

–ಹಿರೇಮಠ, @Prash1008

*** 

ಬಿಜೆಪಿ - ಯಾವ್ದಕ್ ವೋಟ್ ಹಾಕ್ದೇ?, ನಾನು - ಜೆಡಿಎಸ್

ಕಾಂಗ್ರೆಸ್ - ಯಾವ್ದಕ್ ವೋಟ್ ಹಾಕ್ದೇ?, ನಾನು - ಬಿಜೆಪಿ

ಜೆಡಿಎಸ್ - ಯಾವ್ದಕ್ ವೋಟ್ ಹಾಕ್ದೇ... ಹೂವಿಗಾ? ಹೊರೆಗಾ?, ನಾನು - ಕಾಂಗ್ರೆಸ್

ಇನ್ಯಾರಾದ್ರೂ ಕೇಳಿದ್ರೆ "ನೋಟಾ"

–ಸ್ಕಂದ ಕೆ.ಎನ್‌., @SkandaKN

***

ಮಳೆ ಬಂದಾಯಿತು, ಭೂಮಿ ಕೆಸರಾಯಿತು, ಕೈ ಕೆಸರು ಮಾಡಿಕೊಂಡು ಬಾಯಿ ಮೊಸರು ಮಾಡಿಕೊಳ್ಳೋಣ... ಕಾಂಗ್ರೆಸ್...

ಮಳೆ ಬಂದಾಯಿತು, ಭೂಮಿ ಕೆಸರಾಯಿತು, ತೆನೆ ಹಸಿರಾಗೋದೊಂದೇ ಬಾಕಿ ... ಜೆಡಿಎಸ್...

ಮಳೆ ಬಂದಾಯಿತು, ಭೂಮಿ ಕೆಸರಾಯಿತು, ಕಮಲ ಅರಳುವುದೊಂದೇ ಬಾಕಿ.. ಬಿಜೆಪಿ ...

ಸಕಾರಾತ್ಮಕ ಯೋಚನೆಗಳು

–ಅಂಜನ್‌ ಮೋಹಿನಿ, @jagatthu1999

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.