ADVERTISEMENT

ಬಿಜೆಪಿಯ ಮಧ್ಯರಾತ್ರಿಯ ನಾಟಕ: ಕಾಂಗ್ರೆಸ್ ಆರೋಪ

​ಪ್ರಜಾವಾಣಿ ವಾರ್ತೆ
Published 8 ಮೇ 2018, 20:40 IST
Last Updated 8 ಮೇ 2018, 20:40 IST
ಬಿಜೆಪಿಯ ಮಧ್ಯರಾತ್ರಿಯ ನಾಟಕ: ಕಾಂಗ್ರೆಸ್ ಆರೋಪ
ಬಿಜೆಪಿಯ ಮಧ್ಯರಾತ್ರಿಯ ನಾಟಕ: ಕಾಂಗ್ರೆಸ್ ಆರೋಪ   

ಬೆಂಗಳೂರು: ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅಪಾರ್ಟಮೆಂಟೊಂದರಲ್ಲಿ ಪತ್ತೆಯಾದ  9746 ಮತದಾರ ಗುರುತಿನ ಚೀಟಿಗೂ ಕಾಂಗ್ರೆಸ್ ಪಕ್ಷಕ್ಕೂ ಯಾವುದೇ ಸಂಬಂಧ ಇಲ್ಲ. ಇದು ಬಿಜೆಪಿಯ ಮಧ್ಯರಾತ್ರಿಯ ನಾಟಕ ಎಂದು ಎಐಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥ ರಣದೀಪ್‌ ಸರ್ಜೇವಾಲ ಸ್ಪಷ್ಟ ಪಡಿಸಿದರು.

ಮಂಗಳವಾರ ಮಧ್ಯರಾತ್ರಿ ಕೆಪಿಸಿಸಿ ಕಚೇರಿಯಲ್ಲಿ  ತುರ್ತು ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಈ ಅಪಾರ್ಟ್ ಮೆಂಟ್ ಮಂಜುಳಾ ನಂಜಮರಿ ಅವರಿಗೆ ಸೇರಿದ್ದು. ಅವರು ಅದನ್ನು ಪುತ್ರ ರಾಕೇಶ್ ಗೆ ಬಾಡಿಗೆ ಕೊಟ್ಟಿದ್ದಾರೆ. ಮಂಜುಳಾ ಬಿಜೆಪಿಯ ಮಾಜಿ ಪಾಲಿಕೆ ಸದಸ್ಯೆ. ಅವರ ಮಗ 2015ರಲ್ಲಿ ನಡೆದ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿಯಿಂದ ಕಣಕ್ಕಳಿದು ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಸೋತಿದ್ದರು ಎಂದು ಆರೋಪಿಸಿದರು.

ADVERTISEMENT

ಬಿಜೆಪಿ ರಾಜ್ಯದಲ್ಲಿ ಸೋಲಿವ ಭಯದಿಂದ ಈ ಆರೋಪ ಮಾಡುತ್ತಿದೆ. ಚುನಾವಣೆ ಮುಂದೂಡಲು ಹೀಗೆ ಮಾಡಿದೆ. ಇದು ವ್ಯವಸ್ಥಿತವಾಗಿ ಬಿಜೆಪಿಯಿಂದ ನಡೆದ ಸಂಚು ಎಂದು ದೂರಿದರು.

* ಇದನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.