ADVERTISEMENT

ಬೆಂಗಳೂರಿಗೆ ಮತ್ತಷ್ಟು ಫ್ಲೈಓವರ್, ಹೊರವಲಯಗಳಿಗೂ ‘ನಮ್ಮ ಮೆಟ್ರೊ’ ವಿಸ್ತರಣೆ

ಕಾಂಗ್ರೆಸ್ ಪ್ರಣಾಳಿಕೆಯ ಮುಖ್ಯಾಂಶಗಳು

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2018, 10:13 IST
Last Updated 27 ಏಪ್ರಿಲ್ 2018, 10:13 IST
ಕಾಂಗ್ರೆಸ್ ಪ್ರಣಾಳಿಕೆ
ಕಾಂಗ್ರೆಸ್ ಪ್ರಣಾಳಿಕೆ   

ಬೆಂಗಳೂರು: ನಗರದ ಹೊರವಲಯ ಮತ್ತು ಸಮೀಪದ ಪಟ್ಟಣಗಳಿಗೆ ಮೆಟ್ರೊ ರೈಲು ಸೇವೆಯ ವಿಸ್ತರಣೆ, ಸಂಚಾರ ದಟ್ಟಣೆ ಕಡಿಮೆ ಮಾಡಲು ಫ್ಲೈವರ್‌ಗಳ ನಿರ್ಮಾಣ, ಮಂಗಳೂರನ್ನು ಮತ್ತೊಂದು ಸಿಲಿಕಾನ್ ವ್ಯಾಲಿಯಾಗಿ ರೂಪಿಸುವ ಆಶಯ ಸೇರಿದಂತೆ ರಾಜ್ಯದ ಸರ್ವತೋಮುಖ ಅಭಿವೃದ್ಧಿಯ ಸಾಧ್ಯತೆಗಳನ್ನು ಪ್ರಸ್ತಾಪಿಸಿದೆ.

ಮತ್ತೊಂದು ಬಾರಿ ಅಧಿಕಾರ ಹಿಡಿಯಬೇಕೆಂಬ ಆಶಯ ಹೊತ್ತ ಆಡಳಿತಾರೂಢ ಪಕ್ಷದ ಪ್ರಣಾಳಿಕೆ ಸಹಜವಾಗಿಯೇ ಜನರ ಗಮನ ಸೆಳೆದಿದೆ. ಕಾಂಗ್ರೆಸ್ ಪ್ರಣಾಳಿಕೆಯ ಮುಖ್ಯಾಂಶಗಳು ಇಲ್ಲಿವೆ.

ಪ್ರಣಾಳಿಕೆಯನ್ನು ಎರಡು ರೀತಿ ವಿಂಗಡಿಸಲಾಗಿದೆ. 128 ಪುಟಗಳ ‘ವಿಭಾಗ ಪ್ರಣಾಳಿಕೆ’ಯಲ್ಲಿ ರಾಜ್ಯದ ಎಲ್ಲ 30 ಜಿಲ್ಲೆಗಳನ್ನು ಕಲಬುರ್ಗಿ, ಬೆಂಗಳೂರು, ಬೆಳಗಾವಿ ಮತ್ತು ವಿಭಾಗಗಳಾಗಿ ವಿಂಗಡಿಸಲಾಗಿದೆ. ಪ್ರತಿ ವಿಭಾಗದ ಮತ್ತು ಮುಖ್ಯ ಜಿಲ್ಲೆಗಳ ಅಭಿವೃದ್ಧಿಗಾಗಿ ಏನು ಮಾಡಿದ್ದೇವೆ ಮತ್ತು ಏನು ಮಾಡಲಿದ್ದೇವೆ ಎಂಬುದನ್ನು ವಿವರಿಸಲಾಗಿದೆ.

ADVERTISEMENT

52 ಪುಟಗಳ ‘ರಾಜ್ಯ ಪ್ರಣಾಳಿಕೆ’ಯಲ್ಲಿ  ಕೃಷಿ, ಶಿಕ್ಷಣ, ಕ್ರೀಡೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಇಂಧನ  ಸೇರಿದಂತೆ ಒಟ್ಟು 16 ಕ್ಷೇತ್ರಗಳಲ್ಲಿ ಕಳೆದ ಐದು ವರ್ಷಗಳಲ್ಲಿ ಸಾಧಿಸಿರುವ ಪ್ರಗತಿ ಮತ್ತು ಭವಿಷ್ಯದ ಆಶಯಗಳನ್ನು ಉಲ್ಲೇಖಿಸಲಾಗಿದೆ.

ಕಾಂಗ್ರೆಸ್ ಪಕ್ಷವು ತನ್ನ ಪ್ರಣಾಳಿಕೆಯನ್ನು ‘ಕರ್ನಾಟಕ ಮ್ಯಾನಿಫೆಸ್ಟೊ 2018–2023’ ಎಂದು ಕರೆದುಕೊಂಡಿದೆ. ಕನ್ನಡ ಕಿರುಪುಸ್ತಿಕೆಯ ಮೇಲೆ ಕನ್ನಡ ಲಿಪಿಯಲ್ಲಿ ಇಂಗ್ಲಿಷ್ ಭಾಷೆಯೇ ಇದೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಉಲ್ಲೇಖವಿಲ್ಲ

ಕಾಂಗ್ರೆಸ್‌ನ ‘ವಿಭಾಗವಾರು ಪ್ರಣಾಳಿಕೆ’ಯಲ್ಲಿ ರಾಜ್ಯದ ಎಲ್ಲ 29 ಜಿಲ್ಲೆಗಳ ಹೆಸರು ಉಲ್ಲೇಖಿಸಿ ಭರವಸೆಗಳನ್ನು ಘೋಷಿಸಲಾಗಿದೆ. ಆದರೆ ಚಿಕ್ಕಬಳ್ಳಾಪುರ ಜಿಲ್ಲೆಯ ಉಲ್ಲೇಖ ಮಾತ್ರ ಎಲ್ಲಿಯೂ ಇಲ್ಲ. ‘ರಾಜ್ಯ ಪ್ರಣಾಳಿಕೆ’ಯಲ್ಲಿ ಮಾತ್ರ ‘ಹಾರ್ಡ್‌ವೇರ್ ಪಾರ್ಕ್‌ಗಳನ್ನು ಶಿಡ್ಲಘಟ್ಟ ಮತ್ತು ಚಿಕ್ಕಬಳ್ಳಾಪರದಲ್ಲಿ ನಿರ್ಮಿಸುವುದು’ ಎಂದು ಉಲ್ಲೇಖಿಸಲಾಗಿದೆ. ಇಲ್ಲಿಯೂ ಚಿಕ್ಕಬಳ್ಳಾಪುರ ಎನ್ನುವ ಹೆಸರನ್ನು ‘ಚಿಕ್ಕಬಳ್ಳಾಪರ’ ಎಂದೇ ಬರೆಯಲಾಗಿದೆ.

‍[related]

ಪ್ರಣಾಳಿಕೆಯಲ್ಲಿ ಭರವಸೆಗಳ ಮಹಾಪೂರ

* ಬೆಂಗಳೂರಿನಲ್ಲಿ ರಸ್ತೆಗಳ ವಿಸ್ತರಣೆ, ಮತ್ತಷ್ಟು ಫ್ಲೈಓವರ್‌ಗಳ ನಿರ್ಮಾಣ, ಮೆಟ್ರೊ ರೈಲು ಸೇವೆ ವಿಸ್ತರಣೆ

* ಕೋಲಾರದಲ್ಲಿ ಕೃಷಿ ವಿವಿ ಮತ್ತು ಪಶುಸಂಗೋಪನಾ ಕಾಲೇಜು. ಡೇರಿ ತಂತ್ರಜ್ಞಾನ ಅಧ್ಯಯನಕ್ಕೆ ವಿಶೇಷ ಅವಕಾಸ

* ಹಾರೋಹಳ್ಳಿ ಮತ್ತು ಬಿಡದಿವರೆಗೆ ಮೆಟ್ರೊ ಸೇವೆ ವಿಸ್ತರಣೆ

* ದಾವಣಗೆರೆಯಲ್ಲಿ ಮಾವು ಸಂಸ್ಕರಣ ಕೇಂದ್ರ

* ನೀರಾವರಿಗಾಗಿ ₹1.25 ಲಕ್ಷ ಕೋಟಿ ಮೀಸಲು

* ಕಲಬುರ್ಗಿ ಜಿಲ್ಲೆಯಲ್ಲಿ ಡೇರಿ ಘಟಕ, ಐಟಿ ಪಾರ್ಕ್

* ಕೊಳವೆಬಾವಿ ಕೊರೆಯಲು ಪ್ರೋತ್ಸಾಹ

* ಬಳ್ಳಾರಿ, ಯಾದಗಿರಿ, ಕಲಬುರ್ಗಿ, ರಾಯಚೂರು, ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಕೋಲ್ಡ್‌ ಸ್ಟೋರೇಜ್ ಘಟಕಗಳು

* ಬಂಜಾರ ಭಾಷಾ ಅಕಾಡೆಮಿ ಸ್ಥಾಪನೆ

* ರಾಯಚೂರಿನಲ್ಲಿ ಮೆಗಾ ಫಾರ್ಮ್ಯಾಸಿಟಿಕಲ್ ಪಾರ್ಕ್ (ಔಷಧ ತಯಾರಿಕೆ ಘಟಕಗಳ ಪಾರ್ಕ್), ಕೊಪ್ಪಳದಲ್ಲಿ ಸೋನಾ ಮಸೂರಿ ಸಂಶೋಧನಾ ಘಟಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.