ADVERTISEMENT

ರಾಜಭವನಕ್ಕೆ ಕುಮಾರಸ್ವಾಮಿ ದೌಡು; ದೇವೇಗೌಡರ ಮನೆಗೆ ದಿನೇಶ್‌ ಗುಂಡೂರಾವ್‌

​ಪ್ರಜಾವಾಣಿ ವಾರ್ತೆ
Published 15 ಮೇ 2018, 12:19 IST
Last Updated 15 ಮೇ 2018, 12:19 IST
ರಾಜಭವನಕ್ಕೆ ಕುಮಾರಸ್ವಾಮಿ ದೌಡು; ದೇವೇಗೌಡರ ಮನೆಗೆ ದಿನೇಶ್‌ ಗುಂಡೂರಾವ್‌
ರಾಜಭವನಕ್ಕೆ ಕುಮಾರಸ್ವಾಮಿ ದೌಡು; ದೇವೇಗೌಡರ ಮನೆಗೆ ದಿನೇಶ್‌ ಗುಂಡೂರಾವ್‌   

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಯಾವೊಂದು ಪಕ್ಷಕ್ಕೂ ಸ್ಪಷ್ಟ ಬಹುಮತ ಬಾರದೇ ಅತಂತ್ರ ಸ್ಥಿತಿ ನಿರ್ಮಾಣವಾಗಿದ್ದು, ಸರ್ಕಾರ ರಚನೆಗೆ ಜೆಡಿಎಸ್‌ಗೆ ಕಾಂಗ್ರೆಸ್‌ ಬೆಂಬಲ ಸೂಚಿಸಿದ ಬೆನ್ನಲ್ಲೆ ಜೆಡಿಎಸ್‌ನ ರಾಜ್ಯ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಅವರು ಸರ್ಕಾರ ರಚನೆಗೆ ಹಕ್ಕು ಮಂಡಿಸಲು ಸಂಜೆ ರಾಜ್ಯಪಾಲರ ಭೇಟಿಗೆ ರಾಜಭವನದತ್ತ ತೆರಳಿದ್ದಾರೆ.

ಇದಕ್ಕೂ ಮೊದಲು ಕುಮಾರಸ್ವಾಮಿ ಅವರು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ. ದೇವೇಗೌಡ ಅವರ ನಿವಾಸಕ್ಕೆ ತೆರಳಿ ಮುಂದಿನ ನಡೆಯ ಬಗ್ಗೆ ಚರ್ಚಿಸಿ, ಈಗ ರಾಜ್ಯಪಾಲರ ಭೇಟಿಗೆ ರಾಜಭವನಕ್ಕೆ ತೆರಳಿದರು.

ಕುಮಾರಸ್ವಾಮಿ ಅವರು ಅಲ್ಲಿಂದ ತೆರಳಿದ ಬಳಿಕ, ಎಚ್‌.ಡಿ.ದೇವೇಗೌಡ ಅವರ ನಿವಾಸಕ್ಕೆ ಕಾಂಗ್ರೆಸ್‌ನ ಮುಖಂಡ ದಿನೇಶ್ ಗುಂಡೂರಾವ್ ಅವರು ಕೈಯಲ್ಲಿ ದಾಖಲೆ ಹಾಗೂ ಕೆಲವು ಕಾಗದ ಪತ್ರಗಳನ್ನು ಹಿಡಿದು ಬಂದಿದ್ದಾರೆ. ದೇವೇಗೌಡರ ಜತೆ ಗುಂಡೂರಾವ್ ಮಾತುಕತೆ ನಡೆಸುತ್ತಿದ್ದಾರೆ.

ADVERTISEMENT

ಮನೆ ಬಾಗಿಲಿಗೆ ಬಂತು ಅಧಿಕಾರ ಎಂದು ಜೆಡಿಎಸ್ ಕಾರ್ಯಕರ್ತರು ಘೋಷಣೆ ಕೂಗುತ್ತಿದ್ದಾರೆ.

ರಾಜಭವನದಲ್ಲಿ ಸಿದ್ದರಾಮಯ್ಯ, ಕುಮಾರಸ್ವಾಮಿ‌ ಮುಖಾಮುಖಿ

ರಾಜಭವನದಲ್ಲಿ ಸಿದ್ದರಾಮಯ್ಯ, ಕುಮಾರಸ್ವಾಮಿ‌, ಗುಲಾಂ ನಬಿ ಆಜಾದ್ ಮತ್ತು ಮಲ್ಲಿಕಾರ್ಜುನ ಖರ್ಗೆ.

ದೇವೇಗೌಡರ ಮನೆಯತ್ತ ದಿನೇಶ್‌ ಗುಂಡೂರಾವ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.