ADVERTISEMENT

ರಾಮನಗರ ಕ್ಷೇತ್ರ ಮಾರಾಟಕ್ಕೆ ಯತ್ನ: ವಿಧಾನಪರಿಷತ್‌ ಸದಸ್ಯ ಸಿ.ಎಂ. ಲಿಂಗಪ್ಪ ಆರೋಪ

​ಪ್ರಜಾವಾಣಿ ವಾರ್ತೆ
Published 5 ಜೂನ್ 2018, 19:30 IST
Last Updated 5 ಜೂನ್ 2018, 19:30 IST
ಸಿ.ಎಂ. ಲಿಂಗಪ್ಪ
ಸಿ.ಎಂ. ಲಿಂಗಪ್ಪ   

ರಾಮನಗರ: ‘ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ ಅವರು ರಾಮನಗರ ಸೇರಿದಂತೆ ಹಲವು ಕ್ಷೇತ್ರಗಳನ್ನು ಅನ್ಯರಿಗೆ ಮಾರಲು ಹೊರಟಿದ್ದಾರೆ. ಕ್ಷೇತ್ರ ವನ್ನು ಜೆಡಿಎಸ್‌ಗೆ ಬಿಟ್ಟು ಕೊಟ್ಟಿದ್ದೇ ಆದಲ್ಲಿ ಕಾಂಗ್ರೆಸ್ಸಿಗರು ಹೆಂಡತಿ, ಮಕ್ಕಳನ್ನೂ ಮಾರಾಟ ಮಾಡುವ ಕಾಲ ಬಂದರೆ ಅಚ್ಚರಿ ಇಲ್ಲ’ ಎಂದು ವಿಧಾನ ಪರಿಷತ್ ಸದಸ್ಯ ಸಿ.ಎಂ. ಲಿಂಗಪ್ಪ ಅಸಮಾಧಾನ ವ್ಯಕ್ತಪಡಿಸಿದರು.

‘ಸದ್ಯ ಉಪಮುಖ್ಯಮಂತ್ರಿ ಆಗಿದ್ದಕ್ಕೇ ಪರಮೇಶ್ವರ ಮೆರೆಯುತ್ತಿದ್ದಾರೆ. ಅದು ಅವರ ಅದೃಷ್ಟ. ಆದರೆ ಮುಂದೆ ರಾಜ್ಯದಲ್ಲಿ ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತರಬೇಕು. ತಾನು ಮುಖ್ಯಮಂತ್ರಿ ಆಗಬೇಕು ಎಂಬ ಛಲ ಅವರಲ್ಲಿ ಇಲ್ಲ. ಇಂತಹವರನ್ನು ಅಧ್ಯಕ್ಷರಾಗಿ ಇಟ್ಟುಕೊಂಡು ನಾವೆಲ್ಲ ಸಾಯಬೇಕು; ಇಲ್ಲವೇ ರಾಜಕೀಯ ನಿವೃತ್ತಿ ಪಡೆಯುವುದು ಲೇಸು. ಅವರ ಧೋರಣೆ ಹೀಗೆಯೇ ಮುಂದುವರಿದರೆ ನಾನೇ ಅವರನ್ನು ಪ್ರಶ್ನಿಸುತ್ತೇನೆ’ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.

‘ಕಾಂಗ್ರೆಸ್‌ ಶಾಸಕರನ್ನು ಡಿ.ಕೆ. ಶಿವಕುಮಾರ್ ರೆಸಾರ್ಟಿನಲ್ಲಿ ಒಗ್ಗೂಡಿಸದೇ ಹೋಗಿದ್ದರೆ ಕನಿಷ್ಠ 20 ಶಾಸಕರು ಬಿಜೆಪಿಗೆ ಹೋಗುವವರಿದ್ದರು. ಆಗ ಇದೇ ಪರಮೇಶ್ವರ ಮಧ್ಯಾಹ್ನ 12ಕ್ಕೆ ಕೈಬೀಸಿಕೊಂಡು ರೆಸಾರ್ಟಿಗೆ ಬಂದಿದ್ದರು. ಶಿವಕುಮಾರ್‌ರನ್ನು ಮಂತ್ರಿ ಮಾಡಬೇಡಿ ಎನ್ನುವ ಧೈರ್ಯ ರಾಜ್ಯದ ಯಾವ ರಾಜಕಾರಣಿಗೂ ಇಲ್ಲ. ಕಳೆದ ಚುನಾವಣೆಯಲ್ಲಿ ಅವರು ಕೆಪಿಸಿಸಿ ಅಧ್ಯಕ್ಷರಾಗಿ, ಸಿದ್ದರಾಮಯ್ಯ ನೇತೃತ್ವದಲ್ಲಿ ಚುನಾವಣೆ ಎದುರಿಸಿದ್ದರೆ ಕಾಂಗ್ರೆಸ್‌ 115 ಸ್ಥಾನದಲ್ಲಿ ಗೆಲ್ಲಬಹುದಿತ್ತು’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.