ADVERTISEMENT

ಲಾರಿಗಟ್ಟಲೆ ಮಿಕ್ಸಿ ವಿತರಣೆ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2018, 19:30 IST
Last Updated 6 ಮಾರ್ಚ್ 2018, 19:30 IST
ಚಿಕ್ಕಬಳ್ಳಾಪುರದ ಸಿಟಿಜನ್ ಕ್ಲಬ್ ಆವರಣದಲ್ಲಿ ನಾಲ್ಕು ವಾರ್ಡ್‌ಗಳ ಜನರಿಗೆ ಮಿಕ್ಸಿ ಹಂಚಲಾಯಿತು. ನಗರಸಭೆ ಉಪಾಧ್ಯಕ್ಷೆ ಲೀಲಾವತಿ ಶ್ರೀನಿವಾಸ್, ಸದಸ್ಯ ಗಜೇಂದ್ರ ಚಿತ್ರದಲ್ಲಿದ್ದಾರೆ.
ಚಿಕ್ಕಬಳ್ಳಾಪುರದ ಸಿಟಿಜನ್ ಕ್ಲಬ್ ಆವರಣದಲ್ಲಿ ನಾಲ್ಕು ವಾರ್ಡ್‌ಗಳ ಜನರಿಗೆ ಮಿಕ್ಸಿ ಹಂಚಲಾಯಿತು. ನಗರಸಭೆ ಉಪಾಧ್ಯಕ್ಷೆ ಲೀಲಾವತಿ ಶ್ರೀನಿವಾಸ್, ಸದಸ್ಯ ಗಜೇಂದ್ರ ಚಿತ್ರದಲ್ಲಿದ್ದಾರೆ.   

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಶಾಸಕ ಡಾ. ಕೆ.ಸುಧಾಕರ್ ಅವರ ಸಾಯಿಕೃಷ್ಣ ಚಾರಿಟಬಲ್‌ ಟ್ರಸ್ಟ್‌ ವತಿಯಿಂದ ಮಂಗಳವಾರ ನಗರದ ಸಿಟಿಜನ್ ಕ್ಲಬ್ ಆವರಣದಲ್ಲಿ 5, 6, 7 ಮತ್ತು 8ನೇ ವಾರ್ಡ್‌ನ ವ್ಯಾಪ್ತಿಯ ಮಹಿಳೆಯರಿಗೆ ತಲಾ ₹ 3,140 ಮೌಲ್ಯದ ಮಿಕ್ಸಿ ವಿತರಿಸಲಾಯಿತು.

ಇದಕ್ಕಾಗಿ ಒಂದು ಲಾರಿ ಲೋಡ್‌ ಮಿಕ್ಸರ್‌ಗಳನ್ನು ತರಿಸಲಾಗಿತ್ತು. ವಿತರಣೆ ಉಸ್ತುವಾರಿಯನ್ನು ನಗರಸಭೆ ಉಪಾಧ್ಯಕ್ಷೆ ಲೀಲಾವತಿ ಶ್ರೀನಿವಾಸ್ ವಹಿಸಿಕೊಂಡಿದ್ದರು.

ಸಂಕ್ರಾಂತಿ ಪ್ರಯುಕ್ತ ಈ ಹಿಂದೆ ಟ್ರಸ್ಟ್‌ ವತಿಯಿಂದ ರಂಗೋಲಿ, ಉಡುಗೆ, ಅಡುಗೆ ಸ್ಪರ್ಧೆ ಏರ್ಪಡಿಸಲಾಗಿತ್ತು. ರಂಗೋಲಿ ಸ್ಪರ್ಧೆಯಲ್ಲಿ 25 ಸಾವಿರ ಮಹಿಳೆಯರು ಭಾಗವಹಿಸಿದ್ದರು.

ADVERTISEMENT

ವಿಜೇತರಾದವರಿಗೆ ಮೊದಲ ಬಹುಮಾನ ರೆಫ್ರಿಜಿರೇಟರ್, ದ್ವಿತೀಯ ಬಹುಮಾನ ಎಲ್‌ಇಡಿ ಟಿ.ವಿ ಮತ್ತು ತೃತೀಯ ಬಹುಮಾನ ಗ್ರೈಂಡರ್‌ ವಿತರಿ
ಸಲಾಗಿತ್ತು. ಭಾಗವಹಿಸಿದ ಎಲ್ಲರಿಗೂ ಉಡುಗೊರೆ ನೀಡುವುದಾಗಿ ಆಗ ಘೋಷಿಸಲಾಗಿತ್ತು. ಆ ಉಡುಗೊರೆ ಮಿಕ್ಸಿ ಎಂಬುದು ಈಗ ಗೊತ್ತಾಗಿದೆ. ಇದಕ್ಕಾಗಿ ₹ 1 ಕೋಟಿಗೂ ಹೆಚ್ಚು ಹಣ ಖರ್ಚು ಮಾಡುತ್ತಿದ್ದಾರೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.