ADVERTISEMENT

ಸಿಎಂ ಯಡಿಯೂರಪ್ಪ ನಿವಾಸದಲ್ಲಿ ಅಧಿಕಾರಿಗಳ ಸಭೆ; ಜಾವಡೇಕರ್‌, ಶಿವರುದ್ರ ಸ್ವಾಮೀಜಿ, ನಂದೀಶ್ವರ ಸ್ವಾಮೀಜಿ ಭೇಟಿ

​ಪ್ರಜಾವಾಣಿ ವಾರ್ತೆ
Published 18 ಮೇ 2018, 5:08 IST
Last Updated 18 ಮೇ 2018, 5:08 IST
ಸಿಎಂ ಯಡಿಯೂರಪ್ಪ ಅವರ ನಿವಾಸಕ್ಕೆ ಬಂದು ಅಲ್ಲಿಂದ ತೆರಳಿದ ರಾಜ್ಯ ಮುಖ್ಯ ಕಾರ್ಯದರ್ಶಿ ಕೆ. ರತ್ನಪ್ರಭಾ, ಡಿಜಿ ನೀಲಮಣಿ ಎನ್‌. ರಾಜು ಹಾಗೂ ಬಿಜೆಪಿ ರಾಜ್ಯ ಉಸ್ತುವಾರಿ ಪ್ರಕಾಶ್‌ ಜಾವಡೇ ಕರ್‌ ಪ್ರಜಾವಾಣಿ ಚಿತ್ರ: ಪಿ.ಎಸ್‌. ಕೃಷ್ಣಕುಮಾರ್
ಸಿಎಂ ಯಡಿಯೂರಪ್ಪ ಅವರ ನಿವಾಸಕ್ಕೆ ಬಂದು ಅಲ್ಲಿಂದ ತೆರಳಿದ ರಾಜ್ಯ ಮುಖ್ಯ ಕಾರ್ಯದರ್ಶಿ ಕೆ. ರತ್ನಪ್ರಭಾ, ಡಿಜಿ ನೀಲಮಣಿ ಎನ್‌. ರಾಜು ಹಾಗೂ ಬಿಜೆಪಿ ರಾಜ್ಯ ಉಸ್ತುವಾರಿ ಪ್ರಕಾಶ್‌ ಜಾವಡೇ ಕರ್‌ ಪ್ರಜಾವಾಣಿ ಚಿತ್ರ: ಪಿ.ಎಸ್‌. ಕೃಷ್ಣಕುಮಾರ್   

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಶುಕ್ರವಾರ ಬೆಳಿಗ್ಗೆ ಅವರ ನಿವಾಸದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸುತ್ತಿದ್ದಾರೆ. ಈ ವೇಳೆ ಮನೆಯ ಹೊರಗೆ ಅಭಿಮಾನಿಗಳು ಕಾಯುತ್ತಿದ್ದಾರೆ.

ರಾಜ್ಯ ಮುಖ್ಯಕಾರ್ಯದರ್ಶಿ ಕೆ.ರತ್ನಪ್ರಭಾ ಹಾಗೂ ಡಿಜಿ ನೀಲಮಣಿ ರಾಜು ಅವರು ಯಡಿಯೂರಪ್ಪ ನಿವಾಸಕ್ಕೆ ಬಂದಿದ್ದು, ಅವರ ಜತೆ ಸಿಎಂ ಸಭೆ ನಡೆಸಿದ್ದಾರೆ.

ಇದೇ ವೇಳೆ ಸಿಎಂ ನಿವಾಸಕ್ಕೆ ಬಂದ ಬಿಜೆಪಿಯ ರಾಜ್ಯ ಉಸ್ತುವಾರಿ ಪ್ರಕಾಶ್ ಜಾವಡೇಕರ್ ಯಡಿಯೂರಪ್ಪ ಅವರ ಜತೆ ಮಾತುಕತೆ ನಡೆಸಿ ತೆರಳಿದರು. ಈ ವೇಳೆ ಸುದ್ದಿಗಾರರು ಮಾತನಾಡಿಸಲು ಮುಂದಾದಾಗ, ಸುಪ್ರೀಂ ಕೋರ್ಟ್‌ನ ಆದೇಶದ ನಂತರ ಪ್ರತಿಕ್ರಿಯೆ ನೀಡುವುದಾಗಿ ಹೇಳಿ ಇಲ್ಲಿಂದ ನಡೆದರು.‌

ADVERTISEMENT

ಇತ್ತ ಕನಕಪುರದ ಮರಳೆ ಗವಿ ಮಠದ ಶಿವರುದ್ರ ಸ್ವಾಮೀಜಿ ಹಾಗೂ ಶಿವಮೊಗ್ಗದ ಬಾಡದ ಬೈಲಿನ ಮಠದ ನಂದೀಶ್ವರ ಸ್ವಾಮೀಜಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ, ತೆರಳಿದರು.

ರಾಜ್ಯದ ವಿವಿಧೆಡೆಯಿಂದ ಬಂದಿರುವ ಬಿಜೆಪಿ ಕಾರ್ಯಕರ್ತರು ಹಾಗೂ ಯಡಿಯೂರಪ್ಪ ಅವರ ಅಭಿಮಾನಿಗಳು ನಿವಾಸದ ಹೊರಗೆ ಹೂ ಗುಚ್ಚಗಳನ್ನು ಹಿಡಿದು ಕಾಯುತ್ತಿದ್ದಾರೆ.

ಸಿಎಂ ನಿವಾಸದ ಹೊರಗೆ ಶುಕ್ರವಾರ ಬೆಳಿಗ್ಗೆ ಸೇರಿದ್ದ ಜನ.

ಶಿವಮೊಗ್ಗದ ಬಾಡದ ಬೈಲಿನ ಮಠದ ನಂದೀಶ್ವರ ಸ್ವಾಮೀಜಿ.

ಕನಕಪುರದ ಮರಳೆ ಗವಿ ಮಠದ ಶಿವರುದ್ರ ಸ್ವಾಮೀಜಿ

ಸಿಎಂ ನಿವಾಸದ ಹೊರಗೆ ಹೂ ಗುಚ್ಚ ಹಿಡಿದು ಕಾದಿದ್ದ ಜನ. ಪ್ರಜಾವಾಣಿ ಚಿತ್ರಗಳು: ಪಿ.ಎಸ್‌.ಕೃಷ್ಣಕುಮಾರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.