ADVERTISEMENT

ರಾವತ್‌ ನೂತನ ಮುಖ್ಯ ಚುನಾವಣಾ ಆಯುಕ್ತ

ಪಿಟಿಐ
Published 8 ಫೆಬ್ರುವರಿ 2018, 9:05 IST
Last Updated 8 ಫೆಬ್ರುವರಿ 2018, 9:05 IST
ಓಂ ಪ್ರಕಾಶ್‌ ರಾವತ್‌
ಓಂ ಪ್ರಕಾಶ್‌ ರಾವತ್‌   

ನವದೆಹಲಿ: ಮುಂದಿನ ಮುಖ್ಯ ಚುನಾವಣಾ ಆಯುಕ್ತರಾಗಿ ಓಂ ಪ್ರಕಾಶ್‌ ರಾವತ್‌ ಅವರನ್ನು ನೇಮಕ ಮಾಡಲಾಗಿದೆ.

ರಾವತ್‌ ಅವರು ಜ.23ರಂದು ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ಕಾನೂನು ಸಚಿವಾಲಯ ತಿಳಿಸಿದೆ. ಹಾಲಿ ಮುಖ್ಯ ಚುನಾವಣಾ ಆಯುಕ್ತ ಅಚಲ್‌ ಕುಮಾರ್‌ ಜೋತಿ ಅವರ ಅವಧಿ ಜ.22ಕ್ಕೆ ಕೊನೆಗೊಳ್ಳಲಿದೆ.

ಮಧ್ಯಪ್ರದೇಶ ಕೇಡರ್‌ನ ನಿವೃತ್ತ ಐಎಎಸ್‌ ಅಧಿಕಾರಿಯಾಗಿರುವ ರಾವತ್‌, ಸಾರ್ವಜನಿಕ ಉದ್ದಿಮೆಗಳ ಇಲಾಖೆಯ ಕಾರ್ಯದರ್ಶಿ ಮತ್ತು ರಕ್ಷಣಾ ಸಚಿವಾಲಯದಲ್ಲಿ ನಿರ್ದೇಶಕ ಹುದ್ದೆ ಸೇರಿದಂತೆ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ.

ADVERTISEMENT

ರಾವತ್‌ ಅವರ ಅವಧಿ ಈ ವರ್ಷದ ಡಿಸೆಂಬರ್‌ನಲ್ಲಿ ಅಂತ್ಯಗೊಳ್ಳಲಿದೆ. ಬಳಿಕ ಹಿರಿಯ ಆಯುಕ್ತ ಸುನೀಲ್‌ ಅರೋರಾ ಚುನಾವಣಾ ಆಯೋಗದ ಮುಖ್ಯಸ್ಥರಾಗಲಿದ್ದಾರೆ. ಅರೋರಾ ಅವರು 2021ರಲ್ಲಿ ನಿವೃತ್ತರಾಗಲಿದ್ದಾರೆ. ಹೀಗಾಗಿ, 2019ರ ಲೋಕಸಭೆ ಚುನಾವಣೆ ಉಸ್ತುವಾರಿಯನ್ನು ಅವರೇ ನಿರ್ವಹಿಸಲಿದ್ದಾರೆ.

ಜೋತಿ ಅವರ ಹುದ್ದೆಯಿಂದ ಖಾಲಿ ಉಳಿಯುವ ಒಂದು ಸ್ಥಾನಕ್ಕೆ ಮಾಜಿ ಹಣಕಾಸು ಕಾರ್ಯದರ್ಶಿ ಅಶೋಕ್‌ ಲಾವಾಸಾ ಅವರನ್ನು ನೇಮಕ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.